ಶಿವಮೊಗ್ಗ ಲೈವ್
ಶಿವಮೊಗ್ಗ: ಪ್ರಯಾಣಿಕರೊಬ್ಬರು ಖಾಸಗಿ ಬಸ್ನಲ್ಲಿ ಬಿಟ್ಟುಹೋಗಿದ್ದ ₹2 ಲಕ್ಷ ಮೌಲ್ಯದ ಚಿನ್ನಾಭರಣ, ₹60 ಸಾವಿರ ನಗದು ಹಾಗೂ ಮೊಬೈಲ್ ಇದ್ದ ಬ್ಯಾಗ್ ಅನ್ನು ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ತರೀಕೆರೆ ತಾಲ್ಲೂಕಿನ ಅಲಸೂರು ಗೇಟ್ ಮೂಲದ ಮಹಿಳೆಯು ಶಿವಮೊಗ್ಗದಿಂದ ತರೀಕೆರೆಗೆ ತೆರಳುತ್ತಿದ್ದ ವೇಳೆ ಬ್ಯಾಗನ್ನು ಬಸ್ನಲ್ಲಿಯೇ ಬಿಟ್ಟು ಇಳಿದಿದ್ದರು. ಹೆಡ್ ಕಾನ್ಸ್ಟೆಬಲ್ ಮಂಜಪ್ಪ ಹಾಗೂ ಕಾನ್ಸ್ಟೆಬಲ್ ಚಂದ್ರನಾಯ್ಕ ಅವರು ಬಸ್ ಪತ್ತೆ ಹಚ್ಚಿ ಬ್ಯಾಗ್ ವಶಕ್ಕೆ ಪಡೆದಿದ್ದರು.

ಚಿನ್ನಾಭರಣ, ನಗದು ಹಾಗೂ ಮೊಬೈಲ್ ಸೇರಿ ಎಲ್ಲ ವಸ್ತುಗಳನ್ನು ಮಹಿಳೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.