ಶಿವಮೊಗ್ಗ ಜಿಲ್ಲಾ ಪಂಚಾಯಿತಿ 39 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟ, ಯಾವ್ಯಾವ ಕ್ಷೇತ್ರ ಯಾರಿಗೆ ಮೀಸಲು?

ಬೆಂಗಳೂರು: ಎರಡು ದಿನದ ಹಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಿದ್ದ ರಾಜ್ಯ ಸರ್ಕಾರ ಇಂದು ಮೀಸಲಾತಿ ಪ್ರಕಟಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 39 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಪ್ರಕಟಿಸಲಾಗಿತ್ತು.

ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಅಕ್ಟೋಬರ್ 19ರ ಸಂಜೆ 5 ಗಂಟೆಯೊಳಗೆ ಬೆಂಗಳೂರಿನ ಬಹು ಮಹಡಿ ಕಟ್ಟಡದಲ್ಲಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

Shivamogga-Zilla-Panchayath-Building

ಯಾವ್ಯಾವ ಕ್ಷೇತ್ರಕ್ಕೆ ಮೀಸಲಾತಿ ಏನು?

ಮೂಡಿ – ಸಾಮಾನ್ಯ, ಜಡೆ – ಹಿಂದುಳಿದ ವರ್ಗ “ಬ” (ಮಹಿಳೆ), ತತ್ತೂರು – ಅನುಸೂಚಿತ ಜಾತಿ (ಮಹಿಳೆ), ಕುಪ್ಪಗಡ್ಡೆ – ಸಾಮಾನ್ಯ (ಮಹಿಳೆ), ಉದ್ರಿ – ಸಾಮಾನ್ಯ (ಮಹಿಳೆ), ಉಳವಿ – ಹಿಂದುಳಿದ ವರ್ಗ “ಅ” (ಮಹಿಳೆ), ಚಂದ್ರಗುತ್ತಿ – ಸಾಮಾನ್ಯ (ಮಹಿಳೆ), ಈಸೂರು – ಸಾಮಾನ್ಯ (ಮಹಿಳೆ), ಹೊಸೂರು – ಅನುಸೂಚಿತ ಪಂಗಡ, ಕಪ್ಪನಹಳ್ಳಿ – ಅನುಸೂಚಿತ ಜಾತಿ.

ಸುಣ್ಣದಕೊಪ್ಪ – ಸಾಮಾನ್ಯ, ತೊಗರ್ಸಿ – ಅನುಸೂಚಿತ ಜಾತಿ (ಮಹಿಳೆ), ಹೊಸನಗರ – ಸಾಮಾನ್ಯ (ಮಹಿಳೆ), ಮಾರುತಿಪುರ – ಹಿಂದುಳಿದ ವರ್ಗ “ಬ”, ರಿಪ್ಪನ್‌ಪೇಟೆ – ಅನುಸೂಚಿತ ಜಾತಿ, ಹುಂಚ – ಹಿಂದುಳಿದ ವರ್ಗ “ಅ”, ನಗರ – ಸಾಮಾನ್ಯ, ಗಾಜನೂರು – ಸಾಮಾನ್ಯ, ಹಾರನಹಳ್ಳಿ – ಅನುಸೂಚಿತ ಪಂಗಡ (ಮಹಿಳೆ), ಹೊಳಲೂರು – ಸಾಮಾನ್ಯ (ಮಹಿಳೆ).

ಹಸೂಡಿ – ಅನುಸೂಚಿತ ಜಾತಿ (ಮಹಿಳೆ), ಕುಂಸಿ – ಹಿಂದುಳಿದ ವರ್ಗ “ಅ”, ಆನವೇರಿ – ಸಾಮಾನ್ಯ, ಅರಬಿಳಚಿ – ಹಿಂದುಳಿದ ವರ್ಗ “ಅ” (ಮಹಿಳೆ), ಕೂಡ್ಲಿಗೆರೆ – ಸಾಮಾನ್ಯ (ಮಹಿಳೆ), ಹಿರಿಯೂರು – ಅನುಸೂಚಿತ ಜಾತಿ, ಸಿಂಗನಮನೆ – ಹಿಂದುಳಿದ ವರ್ಗ “ಅ” (ಮಹಿಳೆ), ಕೋಣಂದೂರು – ಅನುಸೂಚಿತ ಜಾತಿ (ಮಹಿಳೆ), ಹೊದಲಾ-ಅರಳಾಪುರ – ಸಾಮಾನ್ಯ (ಮಹಿಳೆ), ಲಿಂಗಾಪುರ – ಸಾಮಾನ್ಯ.

ಕುಪ್ಪಳ್ಳಿ – ಹಿಂದುಳಿದ ವರ್ಗ “ಅ” (ಮಹಿಳೆ), ಮೇಗರವಳ್ಳಿ – ಹಿಂದುಳಿದ ವರ್ಗ “ಅ”, ಆರಗ – ಸಾಮಾನ್ಯ, ಕೆಳದಿ – ಸಾಮಾನ್ಯ, ಕೊರ್ಲಿಕೊಪ್ಪ – ಸಾಮಾನ್ಯ, ಆನಂದಪುರ – ಅನುಸೂಚಿತ ಜಾತಿ, ಆವಿನಹಳ್ಳಿ – ಸಾಮಾನ್ಯ (ಮಹಿಳೆ), ಕುದರೂರು – ಸಾಮಾನ್ಯ (ಮಹಿಳೆ), ತಾಳಗುಪ್ಪ – ಸಾಮಾನ್ಯ.