ಶಿವಮೊಗ್ಗ ಲೈವ್
ಶಿವಮೊಗ್ಗ: ಮಲವಗೊಪ್ಪದ ಮಾರಿಯಮ್ಮ ಕಾಲೋನಿಯಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಮಂಜ ನಾಯ್ಕ್ ಎಂಬುವವರ ಬಜಾಜ್ ಪಲ್ಸರ್ 150 ಬೈಕ್ ನಾಪತ್ತೆಯಾಗಿದೆ. ಮಂಜ ನಾಯ್ಕ್ ಅವರು ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು.
ಬೆಳಿಗ್ಗೆ ಮನೆಯಿಂದ ಹೊರಗೆ ಬಂದು ನೋಡಿದಾಗ, ಬೈಕ್ ಕಾಣೆಯಾಗಿತ್ತು. ಎಲ್ಲ ಕಡೆ ಹುಡುಕಿದರು ಬೈಕ್ ಪತ್ತೆಯಾಗಿರಲಿಲ್ಲ. ಕಳುವಾದ ಬೈಕ್ ಮೌಲ್ಯ ₹20,000 ಎಂದು ತಿಳಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
