ಡ್ರೈವರ್‌ ಮೊಬೈಲ್‌ಗೆ ಸಂಜೆ ಬಂತು ಸಾಲು ಸಾಲು ಮೆಸೇಜ್‌, ಮರುದಿನ ಬ್ಯಾಂಕ್‌ಗೆ ಹೋದಾಗ ಕಾದಿತ್ತು ಶಾಕ್

ಶಿವಮೊಗ್ಗ: ಚಾಲಕರೊಬ್ಬರ ವೈಯಕ್ತಿಕ ವಿವರಗಳನ್ನು ಅಕ್ರಮವಾಗಿ ಪಡೆದುಕೊಂಡ ವಂಚಕರು ಅವರ ಬ್ಯಾಂಕ್ ಖಾತೆಯಿಂದ ₹4.04 ಲಕ್ಷಕ್ಕೂ ಅಧಿಕ ಹಣ ದೋಚಿದ್ದಾರೆ.

ಚಾಲಕರೊಬ್ಬರು ಮೊಬೈಲ್‌ಗೆ ಅಕ್ಟೋಬರ್ 4 ರಂದು ಸಂಜೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಮೆಸೇಜ್‌ಗಳು ಬಂದಿದ್ದವು. ಹಂತ ಹಂತವಾಗಿ ₹80,000, ₹89,000, ₹90,000, ₹25,000, ₹90,815, ₹14,510 ಹಾಗೂ ₹14,800 ಸೇರಿದಂತೆ ಒಟ್ಟು ₹4,04,125 ಹಣ ಕಡಿತ ಆಗಿತ್ತು.

SMS-Fraud-Shimoga-CEN-Police-Station.

ಈ ಕುರಿತು ಚಾಲಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅವರ ವೈಯಕ್ತಿಕ ಮಾಹಿತಿ ದುರುಪಯೋಗಪಡಿಸಿಕೊಂಡು ವಂಚಕರು ಹಣ ವರ್ಗಾಯಿಸಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಚಾಲಕ ದೂರು ನೀಡಿದ್ದು, ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.