ಮೊದಲ ದಿನವೇ ಶಿವಮೊಗ್ಗದಲ್ಲಿ ಲೇಸರ್‌ ಲೈಟ್‌ ಶೋಗೆ ಭರ್ಜರಿ ರೆಸ್ಪಾನ್ಸ್‌, ಹೇಗಿದೆ ಪ್ರದರ್ಶನ?

ಶಿವಮೊಗ್ಗ: ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಲೇಸರ್‌ ಲೈಟ್‌ ಶೋ ಆಯೋಜಿಸಲಾಗಿದೆ. ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯುತ್ತಿರುವ ಲೇಸರ್‌ ಲೈಟ್‌ ಪ್ರದರ್ಶನಕ್ಕೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಚಾಲನೆ ನೀಡಿದರು. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಮಹಾನಗರ ಪಾಲಿಕೆಯ ಪಾರಂಪರಿಕ ಕಟ್ಟದ ಮೇಲೆ ಲೇಸರ್‌ ಲೈಟ್‌ ಶೋ ಆಯೋಜಿಸಲಾಗಿದೆ. ಅ.21ರವರಗೆ ಪ್ರತಿದಿನ ಸಂಜೆ 7 ಗಂಟೆಯಿಂದ 10 ಗಂಟೆವರೆಗೆ ಪ್ರದರ್ಶನ ನಡೆಯಲಿದೆ. ಅಸಕ್ತರು ಉಚಿವತಾಗಿ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

Laser-Light-Show-in-Shivamogga-Dasara

ಹೇಗಿದೆ ಲೇಸರ್‌ ಲೈಟ್‌ ಪ್ರದರ್ಶನ?

ಬೆಂಗಳೂರಿನ ಲೇಸರ್‌ ಟೆಕ್‌ ಸಂಸ್ಥೆ ವತಿಯಿಂದ ಶಿವಮೊಗ್ಗ ದಸರಾದಲ್ಲಿ ಲೇಸರ್‌ ಶೋ ಆಯೋಜಿಸಲಾಗಿದೆ. ಈ ಕುರಿತು ಮಾತನಾಡಿದ ಲೇಸರ್‌ ಟೆಕ್‌ನ ಮಹೇಶ್‌ ಕುಮಾರ್‌, ಇದು 3ಡಿ ವಿಡಿಯೋ ಮ್ಯಾಪಿಂಗ್‌ ಪ್ರೊಜೆಕ್ಷನ್‌. ಕಟ್ಟಡದ ಆಕಾರವನ್ನು ಬಳಸಿಕೊಂಡು ವಿಡಿಯೋ ಪ್ರದರ್ಶನ ಮಾಡಲಾಗುತ್ತಿದೆ. ಶಿವಮೊಗ್ಗದ ಇತಿಹಾಸ, ಪರಂಪರೆ, ಪರಿಸರವನ್ನು ಪ್ರದರ್ಶಿಸಲಾಗುತ್ತಿದೆ ಎಂದರು.

ಆರಂಭದಲ್ಲಿ ಲೇಸರ್‌ ಲೈಟ್‌ ಬೀಮ್‌ ಶೋ, ಬಳಿಕ 11 ನಿಮಿಷದ ವಿಡಿಯೋ ಪ್ರೊಜೆಕ್ಷನ್‌, ಕೊನೆಗೆ ಪುನಃ ಲೇಸರ್‌ ಲೈಟ್‌ ಬೀಮ್‌ ಶೋ ಇರಲಿದೆ. 15 ನಿಮಿಷದ ಪ್ರದರ್ಶನ ಇರಲಿದೆ.

ಏನಂದ್ರು ಶಾಸಕ ಚನ್ನಬಸಪ್ಪ?

ಲೇಸರ್‌ ಲೈಟ್‌ ಶೋ ಉದ್ಘಾಟಿಸಿ, ವಿಡಿಯೋ ಪ್ರೊಜೆಕ್ಷನ್‌ ವೀಕ್ಷಿಸಿದ ಬಳಿಕ ಶಾಸಕ ಚನ್ನಬಸಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿದರು, “ಇದೇ ಮೊದಲ ಬಾರಿಗೆ ಶಿವಮೊಗ್ಗ ದಸರಾದಲ್ಲಿ ಲೇಸರ್‌ ಲೈಟ್‌ ಶೋ ಆಯೋಜಿಸಿದ್ದೇವೆ. ಪಾಲಿಕೆಯ ದಸರಾ ಅಲಂಕಾರ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಜನರು ಮೂರು ದಿನವು ಈ ಪ್ರದರ್ಶನ ಕಣ್ತುಂಬಿಕೊಳ್ಳಬಹುದು” ಎಂದು ತಿಳಿಸಿದರು.

ಲೇಸರ್‌ ಲೈಟ್‌ ಶೋ ವೀಕ್ಷಿಸಲು ಉಚಿತ ಪ್ರವೇಶವಿದೆ. ಪಾಲಿಕೆ ಆವರಣದಲ್ಲಿ ನಿಂತು ಪ್ರದರ್ಶನ ವೀಕ್ಷಿಸಬಹುದಾಗಿದೆ. ಮೊದಲ ದಿವೇ ಲೇಸರ್‌ ಲೈಟ್‌ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.