ಬಸ್‌ ಚಲಾಯಿಸಿಕೊಂಡು ಶಿವಮೊಗ್ಗಕ್ಕೆ ಆಗಮಿಸಿದ ಸಿನಿಮಾ ನಟ

ಶಿವಮೊಗ್ಗ: ಸುಮಂತ್‌ ಭಟ್‌ ನಿರ್ದೇಶನದ, ಶೈನ್‌ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾ ನ.20ರಂದು ಬಿಡುಗಡೆ ಆಗಲಿದೆ. ಇದಕ್ಕಾಗಿ ನಟ ಶೈನ್‌ ಶೆಟ್ಟಿ ರಾಜ್ಯದ ವಿವಿಧೆಡೆ ಬಸ್‌ ಚಲಾಯಿಸಿಕೊಂಡು ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಶಿವಮೊಗ್ಗಕ್ಕೆ ಆಗಮಿಸಿದ್ದ ಸಿನಿಮಾ ತಂಡ, ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿತ್ತು. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಟ ಶೈನ್‌ ಶೆಟ್ಟಿ ಬಸ್‌ ಚಾಲಯಿಸಿಕೊಂಡು ಶಿವಮೊಗ್ಗಕ್ಕೆ ಆಗಮಿಸಿದ್ದರು. ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಎಟಿಎನ್‌ಸಿ ಕಾಲೇಜು ಸೇರಿ ವಿವಿಧೆಡೆ ತೆರಳಿ ಸಿನಿಮಾದ ಪ್ರಮೋಷನ್‌ ನಡೆಸಿದರು. ಜಿಲ್ಲಾ ಪೊಲೀಸ್‌ ಕಚೇರಿಗೆ ಭೇಟಿ ನೀಡಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರನ್ನು ಭೇಟಿಯಾಗಿದರು. ಶಿವಮೊಗ್ಗದ ಡಿಎಆರ್‌ ಪೊಲೀಸ್‌ ಕಚೇರಿಗು ಸಿನಿಮಾ ತಂಡ ಭೇಟಿ ನೀಡಿತ್ತು.

Shine-Shetty-Visits-Shivamogga-for-Shankarabharana-movie-promotion

ಶಂಕರಾಭರಣ ಸಿನಿಮಾದ ಪ್ರಮೋಷನ್‌ಗಾಗಿ ಶೈನ್‌ ಶೆಟ್ಟಿ ರಾಜ್ಯದ ವಿವಿಧೆಡೆ ಬಸ್ಸಿನಲ್ಲಿ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಕೊಲ್ಲೂರಿನಿಂದ ಆರಂಭವಾದ ಬಸ್‌ ಪ್ರಯಾಣ ಮೈಸೂರು ಮೂಲಕ ಶಿವಮೊಗ್ಗಕ್ಕೆ ಆಗಮಿಸಿತು. ಇದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಒಂದು ಬಸ್ಸು, ಚಾಲಕ–ನಿರ್ವಾಹಕರು, ಅವರ ಕುಟುಂಬದ ಸುತ್ತ ನಡೆಯುವ ಘಟನೆಗಳ ಕುರಿತ ಕಥೆ ಇದೆ ಎಂದು ಸಿನಿಮಾ ತಂಡ ತಿಳಿಸಿದೆ. ಶಿವಮೊಗ್ಗ ಭೇಟಿ ವೇಳೆ ನಟಿ ತನ್ವಿ ರಾವ್ ಸೇರಿದಂತೆ ಹಲವರು ಪ್ರಚಾರಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದರು.