ಶಿವಮೊಗ್ಗದ ಹಿರಿಯ ಪತ್ರಕರ್ತ ಜೇಸುದಾಸ್‌ಗೆ ಟಿಎನ್‌ಐಟಿ ಪ್ರಶಸ್ತಿ

ಶಿವಮೊಗ್ಗ: ಹಿರಿಯ ಪತ್ರಕರ್ತ ಪಿ. ಜೇಸುದಾಸ್ ಅವರಿಗೆ ಪ್ರಸಿದ್ಧ ಟಿಎನ್‌ಐಟಿ ದಕ್ಷಿಣ ಭಾರತ ಮಾಧ್ಯಮ ಪ್ರಶಸ್ತಿ ಒಲಿದಿದೆ. ಟಿವಿ ಹಾಗೂ ಮುದ್ರಣ ಮಾಧ್ಯಮದ ಸುಮಾರು 80 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಜೇಸುದಾಸ್ ಅವರು ಬೆಸ್ಟ್ ರಿಪೋರ್ಟರ್ ಆರ್‌ಒಕೆ ವಿಭಾಗದಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 71 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

2006ರಲ್ಲಿ ಪತ್ರಿಕಾ ವೃತ್ತಿ ಆರಂಭಿಸಿದ ಜೇಸುದಾಸ್ ಅವರು ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಕಳೆದ ಎರಡು ದಶಕಗಳಿಂದ ಸಕ್ರಿಯರಾಗಿದ್ದಾರೆ. ಮಾಧ್ಯಮ ತಂತ್ರಜ್ಞಾನದ ಬದಲಾವಣೆಯ ಕಾಲಘಟ್ಟದಲ್ಲಿ ಕಚೇರಿಯ ಇಂಟರ್ನೆಟ್ ಲೀಸ್ಡ್ ಲೈನ್ ಮೂಲಕ ಸುದ್ದಿ ಕಳುಹಿಸುತ್ತಿದ್ದ ದಿನಗಳಿಂದ ಹಿಡಿದು ಕ್ಯಾಸೆಟ್, ಚಿಪ್ ಹಾಗೂ ಇಂದಿನ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಪತ್ರಿಕೋದ್ಯಮದವರೆಗಿನ ಎಲ್ಲಾ ಬೆಳವಣಿಗೆಗಳನ್ನು ಸಕಾರಾತ್ಮಕವಾಗಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

Senior-Journalist-P-Jesudas-Awarded-by-TNIT

ಜೇಸ್‌ದಾಸ್‌ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2006ರಲ್ಲಿ ಈ-ಟಿವಿಯ ಜಿಲ್ಲಾ ವರದಿಗಾರರಾಗಿ ವೃತ್ತಿ ಆರಂಭಿಸಿದರು. ಬಳಿಕ ಕಸ್ತೂರಿ ನ್ಯೂಸ್ 24, ಪ್ರಜಾ ಟಿವಿ ಹಾಗೂ 2022 ರಿಂದ ಝೀ ಕನ್ನಡ ನ್ಯೂಸ್ ವಾಹಿನಿಯ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2026ರ ಜೂನ್ ತಿಂಗಳಿನಿಂದ ಎಎನ್‌ಐ ಸುದ್ದಿ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮಲೆನಾಡು ಟುಡೆ ಸ್ಥಳೀಯ ಸುದ್ದಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಅಪರಾಧ ವಿಭಾಗ ಹಾಗೂ ತನಿಖಾ ವರದಿಗಾರಿಕೆಯಲ್ಲಿ ಜೇಸುದಾಸ್‌ ಅವರು ಪರಿಣತಿ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಕ್ಸಲ್ ಚಟುವಟಿಕೆಗಳು ಹಾಗೂ ಪೊಲೀಸ್ ಇಲಾಖೆಯ ಎನ್‌ಕೌಂಟರ್ ಕಾರ್ಯಾಚರಣೆಗಳ ಕುರಿತು ನಿಖರ ಮತ್ತು ಸ್ಪಷ್ಟ ವರದಿಗಳನ್ನು ನೀಡಿದ್ದಾರೆ. ಮಲೆನಾಡಿನ ರಾಜಕೀಯ ಒಳನೋಟಗಳು ಮತ್ತು ದಶಕಗಳ ಹಳೆಯ ಸಂಕೀರ್ಣ ಸಮಸ್ಯೆಗಳನ್ನು ವಿಶ್ಲೇಷಿಸುವ ವರದಿಗಳನ್ನು ನೀಡಿದ್ದಾರೆ. ತಮ್ಮ 20 ವರ್ಷಗಳ ಮಾಧ್ಯಮ ವೃತ್ತಿಯ ವಿಶೇಷ ವರದಿಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನದಲ್ಲಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.