ವಿದ್ಯಾರ್ಥಿಗಳಿಗೆ ವಿತರಿಸಿದ ಶೂ ವಿಚಾರ, ಮಿನಿಸ್ಟರ್‌ ಏನಂದ್ರು? ಶಿಕ್ಷಕರ ಪ್ರತಿಭಟನೆ ಬಗ್ಗೆ ಹೇಳಿದ್ದೇನು?

ಶಿವಮೊಗ್ಗ: ರಾಜ್ಯಾದ್ಯಂತ 45 ಲಕ್ಷ ಮಕ್ಕಳಿಗೆ ಶೂ ವಿತರಿಸಲಾಗಿದೆ. ಕೆಲವು ಕಡೆ ಸೈಜ್ ವ್ಯತ್ಯಾಸವಾಗಿದೆಯೇ ಹೊರತು ಶೂಗಳ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶೂಗಳ ಗುಣಮಟ್ಟದ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಯಾವುದೇ ದೂರುಗಳು ಬಂದಿಲ್ಲ. ಮಾಧ್ಯಮವೊಂದರಲ್ಲಿ ಶೂಗಳ ಗುಣಮಟ್ಟ ಸಂಬಂಧ ಹಳೆಯ ಫೋಟೋ ಹಾಕಿ ತಪ್ಪು ಸುದ್ದಿ ಬಿತ್ತರಿಸಲಾಗಿತ್ತು. ಆದರೆ ತಪ್ಪು ಸೈಜ್ ಶೂಗಳನ್ನು ನೀಡಲಾಗಿದ್ದು, ಅವುಗಳನ್ನು ತಕ್ಷಣವೇ ಬದಲಾಯಿಸಿ ಕೊಡಲಾಗುವುದು ಎಂದರು.

Minister-Madhu-Bangarappa-Speaks-to-Media-in-Shivamogga

ಪಿಯುಸಿಯಲ್ಲಿ 42,000 ಹೆಚ್ಚುವರಿ ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಾರೆ. ಹಾಗಾಗಿ ಕ್ಯಾಬಿನೆಟ್ ಅನುಮೋದನೆ ಪಡೆದು ಪಠ್ಯಪುಸ್ತಕ ವಿತರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಶಿಕ್ಷಕರ ಬೇಡಿಕೆಗಳ ಚರ್ಚೆ

1995ರ ನಂತರದ ಕನ್ನಡ ಶಾಲೆಗಳು ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳ ಬಗ್ಗೆ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನವೆಂಬರ್‌ 14ರ ನಂತರ ಶಿಕ್ಷಕರು ಹಮ್ಮಿಕೊಂಡಿರುವ ಹೋರಾಟದ ಹಿನ್ನೆಲೆ ಶಿಕ್ಷಕರ ಹಿತರಕ್ಷಣೆಗೆ ಸರ್ಕಾರ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಿದೆ ಎಂದರು.