ಸಾಗರ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಅನ್ಯಾಯ, ಎಂಎಲ್‌ಎ ಮೌನಕ್ಕೆ ಹಕ್ರೆ ಅಕ್ರೋಶ, ಏನಿದು ಅನ್ಯಾಯ?

ಸಾಗರ: ಕಳೆದ ಎರಡು ವರ್ಷಗಳಿಂದ ತಾಲೂಕಿನ ಅಡಿಕೆ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರ ಸಿಗದೆ ತೀರಾ ಅನ್ಯಾಯವಾಗುತ್ತಿದ್ದು, ಇದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿಷ್ಕ್ರಿಯತೆಯೇ ನೇರ ಕಾರಣ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023–24 ಹಾಗೂ 2024–25ರಲ್ಲಿ ತಾಲೂಕಿನಲ್ಲಿ 3,500 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿ 25 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದೆ. ಆದಾಗ್ಯೂ ಬೆಳೆಗಾರರಿಗೆ ದೊರಕಬೇಕಾದ ವಿಮೆ ಪರಿಹಾರ ಮಾತ್ರ ಕೈಸೇರಿಲ್ಲ ಎಂದು ದೂರಿದರು.

-mallikarjuna-hakre-to-join-bjp.

ಪ್ರಸಕ್ತ ವರ್ಷ ಸಾಗರ ತಾಲೂಕಿನ ಬೆಳೆಗಾರರಿಗೆ ಕೇವಲ ₹10.98 ಕೋಟಿ ಪರಿಹಾರ ದೊರಕಿದೆ. ಆದರೆ ನೆರೆಯ ಸೊರಬ ತಾಲೂಕಿಗೆ ₹39 ಕೋಟಿ, ತೀರ್ಥಹಳ್ಳಿಗೆ ₹29 ಕೋಟಿ, ಶಿಕಾರಿಪುರಕ್ಕೆ ₹34 ಕೋಟಿ ಹಾಗೂ ಹೊಸನಗರ ತಾಲೂಕಿಗೆ ₹11.65 ಕೋಟಿ ಪರಿಹಾರ ಲಭಿಸಿದೆ. ಸಾಗರಕ್ಕೆ ಆಗಿರುವ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಮೌನ ವಹಿಸಿದ್ದಾರೆ ಎಂದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬಿ.ಸಿ. ಲಕ್ಷ್ಮಿನಾರಾಯಣ ಭಟ್, ಕೆ.ಎಸ್. ಪ್ರಶಾಂತ್, ರಮೇಶ್ ಕೆಳದಿ, ಲಕ್ಷ್ಮಣ್ ಡಿ.ಸಿ, ನಾಗರಾಜ್, ಗಿರೀಶ್ ಗುಳ್ಳಳ್ಳಿ, ರವೀಂದ್ರ ಬಿ.ಟಿ, ಅರುಣ್ ಕುಗ್ವೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.