ಶಿವಮೊಗ್ಗ: ದೀಪಾವಳಿ ಹಬ್ಬದ ಅಂಗವಾಗಿ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ‘ಅಂಟಿಗೆ ಪಂಟಿಗೆ’ ಕಲಾ ಪ್ರದರ್ಶನವನ್ನು ನವೆಂಬರ್ 8 ರಂದು ಭಾನುವಾರ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ಥಳೀಯ ಶಾಖಾಮಠದ ಸಹಯೋಗದಲ್ಲಿ ಕರ್ನಾಟಕ ಜಾನಪದ ಪರಿಷತ್ತು (ಕಜಾಪ), ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಭಾನುವಾರ ಸಂಜೆ 6 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಅಂಟಿಗೆ ಪಂಟಿಗೆ ತಂಡದಿಂದ ಕಲಾ ಪ್ರದರ್ಶನ ನಡೆಯಲಿದೆ. ತಮ್ಮ ಮನೆಗೆ ಅಂಟಿಗೆ ಪಂಟಿಗೆ ಜ್ಯೋತಿಯನ್ನು ಆಹ್ವಾನಿಸಲು ಬಯಸುವವರು ಮುಂಚಿತವಾಗಿಯೇ ದೂರವಾಣಿ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಸರು ನೋಂದಾಯಿಸಲು ಡಿ. ಮಂಜುನಾಥ (9449552795), ಕೃಷ್ಣಮೂರ್ತಿ ಹಿಳ್ಳೋಡಿ – ಎಲ್.ಬಿ.ಎಸ್. ನಗರ (9448203018), ಭೈರಾಪುರ ಶಿವಪ್ಪ ಮೇಷ್ಟ್ರು – ಸ್ವಾಮಿ ವಿವೇಕಾನಂದ ಬಡಾವಣೆ (9449911652), ನಾರಾಯಣ ಎ.ಎಸ್. – ಚಾಲುಕ್ಯನಗರ, ಗೋಪಿಶೆಟ್ಟಿಕೊಪ್ಪ (9741346589), ರಾಮಪ್ಪಗೌಡರು (9448615844), ಮಹಾದೇವಿ – ಗೋಪಾಲಗೌಡ ಬಡಾವಣೆ (8073052370) ಹಾಗೂ ಎಂ.ಎಂ. ಸ್ವಾಮಿ – ವಿದ್ಯಾನಗರ (9448856911) ಅವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.