ಶಿವಮೊಗ್ಗದ ಮಹಿಳೆಗೆ ₹4,14,772 ಮೋಸ, ಹೇಗಾಯ್ತು ವಂಚನೆ?

ಶಿವಮೊಗ್ಗ: ವೈಯಕ್ತಿಕ ಸಾಲ ಕೊಡಿಸುವುದಾಗಿ ನಂಬಿಸಿ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಸಿ ಹಂತ ಹಂತವಾಗಿ ₹4,14,772 ಹಣವನ್ನು ವರ್ಗಾಯಿಸಿಕೊಂಡು ಶಿವಮೊಗ್ಗದ ಮಹಿಳೆಯೊಬ್ಬರಿಗೆ ಆನ್‌ಲೈನ್‌ ಮೂಲಕ ವಂಚಿಸಲಾಗಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮಹಿಳೆಗೆ ಖಾಸಗಿ ಕ್ಯಾಶ್ ಲೋನ್ ಹಾಗೂ ಲೀಡ್ ಮಿ ಕಂಪನಿಯವರೆಂದು ಪರಿಚಯಿಸಿಕೊಂಡ ಅಪರಿಚಿತರು, ಆನ್‌ಲೈನ್ ಮೂಲಕ ಸುಲಭವಾಗಿ ವೈಯಕ್ತಿಕ ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಅವರ ಮಾತು ನಂಬಿ ಮಹಿಳೆಯು ಮೊಬೈಲ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಬಳಿಕ ಸಾಲ ಮಂಜೂರಾತಿ ಪ್ರಕ್ರಿಯೆ ನೆಪದಲ್ಲಿ ಸೆಪ್ಟೆಂಬರ್ 4 ರಿಂದ ಅಕ್ಟೋಬರ್ 29ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹4,14,772 ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Shimogga-Cyber-Crime-CEN-Police-Station

ಹಣ ಕಳೆದುಕೊಂಡ ಬಳಿಕ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಕುರಿತು ಶಿವಮೊಗ್ಗ ಸಿಇಎನ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.