ಶಿವಮೊಗ್ಗ ಲೈವ್
ಹೊಳೆಹೊನ್ನೂರು: ಬೋರ್ವೆಲ್ ಪಂಪ್ಹೌಸ್ ಬೀಗ ಮುರಿದು ಮೋಟಾರ್ ವಿದ್ಯುತ್ ಬೋರ್ಡ್ ಕಳ್ಳತನ ಮಾಡಲಾಗಿದೆ. ಸಮೀಪದ ಅರಹತೊಳಲು ಕೈಮರದಿಂದ ಹನುಮಂತಪುರಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 23 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಹಾಲಿನ ಡೈರಿ ಪಕ್ಕದಲ್ಲಿರುವ ಪಂಪ್ಹೌಸ್ನಲ್ಲಿ ರಾತ್ರಿ ಕಳ್ಳತನ ನಡೆದಿದೆ. ಮರುದಿನ ಬೆಳಿಗ್ಗೆ ನೀರು ಗಂಟಿ ಮಂಜುನಾಥ್ ಪರಿಶೀಲಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳುವಾದ ಮೋಟಾರ್ ವಿದ್ಯುತ್ ಬೋರ್ಡ್ನ ಅಂದಾಜು ಮೌಲ್ಯ ₹10,000 ಎಂದು ಅಂದಾಜಿಸಲಾಗಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಸುರೇಶ್ ನೀಡಿದ ದೂರು ನೀಡಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
