ಶಿವಮೊಗ್ಗ ಲೈವ್
ಶಿವಮೊಗ್ಗ: ಬೆನವಳ್ಳಿ ಕ್ರಾಸ್ ಬಳಿ ಖಾಸಗಿ ಬಸ್ಗೆ ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ತೀವ್ರ ಗಾಯಗೊಂಡಿದ್ದಾರೆ. ಚನ್ನಹಳ್ಳಿ ಗ್ರಾಮದ ನಿತೀಶ್ ಗಾಯಾಳು. (ಈ ಸುದ್ದಿಯನ್ನು ಇನ್ನು 33 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಿತೀಶ್ ಅವರು ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಏಥರ್ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಬೆನವಳ್ಳಿ ಕ್ರಾಸ್ ಬಳಿ ಖಾಸಗಿ ಬಸ್ ನಿತೀಶ್ ಅವರ ಬೈಕ್ ಅನ್ನು ಓವರ್ ಟೇಕ್ ಮಾಡಿ ತಕ್ಷಣ ಬ್ರೇಕ್ ಹಾಕಿ ನಿಂತಿದೆ. ಆಗ ಬೈಕ್ ಬಸ್ಗೆ ಡಿಕ್ಕಿ ಹೊಡೆದದ್ದು, ನಿತೀಶ್ ಕೆಳಗೆ ಬಿದ್ದಿದ್ದಾರೆ. ಮೂಗು, ಕಣ್ಣು ಹಾಗೂ ಕೈಗಳಿಗೆ ಗಾಯವಾಗಿದೆ.

ಸ್ಥಳೀಯರು ಕೂಡಲೆ ಅವರನ್ನು ಆಯನೂರು ಆಸ್ಪತ್ರೆಗೆ ಸೇರಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಜಖಂಗೊಂಡಿದೆ. ಘಟನೆ ಸಂಬಂಧ ಬಸ್ ಚಾಲಕನ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.