ಶಿವಮೊಗ್ಗದ NH ಆಸ್ಪತ್ರೆಯಲ್ಲಿ ಉಚಿತ ತಪಾಸಣೆ, ಮೊದಲ 100 ಜನಕ್ಕೆ ಅದ್ಯತೆ, ಈಗಲೆ ಹೆಸರು ನೋಂದಣಿಗೆ ಸೂಚನೆ

ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಆರ್ಥೋ ಕೇರ್ ವಿಭಾಗದ ವತಿಯಿಂದ ನವೆಂಬರ್ 16 ರಂದು ಉಚಿತ ಮೂಳೆ ಸಾಂದ್ರತಾ (BMD) ಪರೀಕ್ಷೆ ಹಾಗೂ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ದೀರ್ಘಕಾಲದ ಮಂಡಿ ಹಾಗೂ ಸೊಂಟ ನೋವು, ಮೆಟ್ಟಿಲು ಹತ್ತಲು ಮತ್ತು ಇಳಿಯಲು ಕಷ್ಟಪಡುವವರು, ಮೂಳೆ ಸವೆತದಿಂದ ಬಳಲುತ್ತಿರುವ ವಯೋವೃದ್ಧರು ಹಾಗೂ ಋತುಚಕ್ರ ನಿಂತ ಮಹಿಳೆಯರು ಶಿಬಿರದ ಸದುಪಯೋಗ ಪಡೆಯಬಹುದು. ಶಿಬಿರದಲ್ಲಿ ಉಚಿತ ಬಿಎಂಡಿ ಪರೀಕ್ಷೆಯ ಜೊತೆಗೆ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಮೊದಲ 100 ಜನರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ: 9986759486 ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Sahyadri-Narayana-Multispeciality-hospital-NH-Hospital.