ಶಿವಮೊಗ್ಗ ಲೈವ್
ಶಿವಮೊಗ್ಗ: ನವೆಂಬರ್ 22 ರಂದು ದುಬೈನಲ್ಲಿ ನಡೆಯಲಿರುವ ದುಬೈ ಕರ್ನಾಟಕ ರಾಜ್ಯೋತ್ಸವ–2026ರ ಸಾಂಸ್ಕೃತಿಕ ಸಂಭ್ರಮದಲ್ಲಿ ಶಿವಮೊಗ್ಗದ ಸಹಚೇತನ ನಾಟ್ಯಾಲಯದ ಕಲಾವಿದರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿವೆ. ದುಬೈನ ಅಲ್ ಖಿಸೈಸ್ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಆವರಣದಲ್ಲಿ ಈ ಉತ್ಸವ ಜರುಗಲಿದೆ. ನಾಟ್ಯಾಲಯದ ಗುರು ವಿದುಷಿ ಸಹನಾ ಚೇತನ್ ನೇತೃತ್ವದಲ್ಲಿ 7 ಸದಸ್ಯರ ತಂಡ ದುಬೈಗೆ ತೆರಳಿದೆ. ತಂಡದಲ್ಲಿ ಸಿಂಧುಶ್ರೀ ಅಡಿಗ, ಸ್ನೇಹಶ್ರೀ, ರವೀನಾ, ಸಂಜನಾ ಸಾಳಂಕೆ, ಚರಿತಾ ಪಟೇಲ್ ಹಾಗೂ ಚೇತನ್ ಎಸ್. ಇದ್ದಾರೆ ಎಂದ ನಾಟ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಲೆನಾಡಿನ ಕಲಾ ಪರಂಪರೆ ಹಾಗೂ ಶಾಸ್ತ್ರೀಯ ನೃತ್ಯದ ಸೊಬಗನ್ನು ಅನಾವರಣಗೊಳಿಸಲು ತಂಡ ಸಜ್ಜಾಗಿದೆ ಎಂದು ಸಂಸ್ಥೆಯ ತಿಳಿಸಿದೆ.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: