ಶಿವಮೊಗ್ಗ ಲೈವ್
ಹೊಳೇಹೊನ್ನೂರು: ಜಾವಳ್ಳಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಮೋಟಾರ್ ಶೆಡ್ ಬೀಗ ಮುರಿದು ಮೂರು ಪಂಪ್‌ಸೆಟ್ ಮೋಟಾರ್ ಹಾಗೂ ಕೇಬಲ್ ವೈರ್‌ಗಳನ್ನು ಕಳ್ಳತನ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಜಾವಳ್ಳಿ ಗ್ರಾಮದ ರೈತ ಸದಾಶಿವಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಘಟನೆ ಸಂಭವಿಸಿದೆ. ಸದಾಶಿವಪ್ಪ ಅವರು ಸಂಜೆ ತೋಟಕ್ಕೆ ನೀರು ಹಾಯಿಸಿ, ಮೋಟಾರ್ ಶೆಡ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ತೋಟಕ್ಕೆ ಹಿಂತಿರುಗಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆರೋಪಿಸಲಾಗಿದೆ.

ಶೆಡ್ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ವಿದ್ಯುತ್ ಕೇಬಲ್ ಕಟ್ ಮಾಡಿ ಮೋಟಾರ್‌ಗಳನ್ನು ಕದ್ದೊಯ್ದಿದ್ದಾರೆ. ಮೂರು ಮೋಟಾರ್‌ಗಳು ಮತ್ತು ₹8,000 ಮೌಲ್ಯದ ಕೇಬಲ್ ವೈರ್ ಸೇರಿ ಒಟ್ಟು ₹76,000 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೊಳೇಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: