ಭದ್ರಾವತಿ ಆಕಾಶವಾಣಿಯಲ್ಲಿ ಫೈನಾನ್ಷಿಯಲ್‌ ಶೀಲ್ಡ್‌, ಏನಿದು? ಯಾವಾಗ ಶುರು?

ಶಿವಮೊಗ್ಗ: ಜನಸಾಮಾನ್ಯರಲ್ಲಿ ಆರ್ಥಿಕ ಅರಿವು, ಉದ್ಯಮಶೀಲತೆ, ಬ್ಯಾಂಕಿಂಗ್ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಕಾಶವಾಣಿ ಭದ್ರಾವತಿ ಹಾಗೂ ಆರ್ಯ ಚಾರಿಟಬಲ್ ಟ್ರಸ್ಟ್ ಇಂಡಿಯಾ ವತಿಯಿಂದ ‘ಫೈನಾನ್ಷಿಯಲ್ ಶೀಲ್ಡ್–ಸುಭದ್ರ ಆರ್ಥಿಕ ಜೀವನಕ್ಕೆ ಮುನ್ನುಡಿ’ ಎಂಬ 50 ಕಂತುಗಳ ವಿಶೇಷ ಸರಣಿ ಆರಂಭಿಸಲಾಗಿದೆ. (ಈ ಸುದ್ದಿಯನ್ನು ಇನ್ನು 72 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

2026ರ ಡಿಸೆಂಬರ್ 1ರಿಂದ ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ.

50-episode-series-on-banking-cyber-safety

ನ.21ರಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಆರ್ಯ ಚಾರಿಟಬಲ್ ಟ್ರಸ್ಟ್ ಇಂಡಿಯಾ ಅಧ್ಯಕ್ಷ ಹಾಗೂ ಫ್ಲಿಂಟ್ ಡಿಸೈನ್ ಸಹ ಸಂಸ್ಥಾಪಕ ವರುಣ್ ಜಿ.ಆರ್., ಆಕಾಶವಾಣಿ ಭದ್ರಾವತಿಯ ಕಾರ್ಯಕ್ರಮ ಮುಖ್ಯಸ್ಥ ನಂದನ್ ಕುಮಾರ್ ಹಾಗೂ ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ರಾಕೇಶ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ರವೀಂದ್ರನಗರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಸ್ಟೇನ್‌ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

ಶಾಸಕ ಎಸ್.ಎನ್. ಚನ್ನಬಸಪ್ಪ, ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ಶೇಖರ್ ನಾಯಕ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಹನುಮಂತಪ್ಪ ಪಿ. ಹಾಗೂ ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮಾರ್ಗರೆಟ್ ಪ್ರಕಾಶ್ ಅವರು ಡಿಜಿಟಲ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಸರಣಿಯಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಬ್ಯಾಂಕಿಂಗ್, ಡಿಜಿಟಲ್ ಸುರಕ್ಷತೆ, ಆನ್‌ಲೈನ್ ಹಣಕಾಸು ವಂಚನೆ ತಡೆ ಹಾಗೂ ಉದ್ಯಮಶೀಲತೆ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವ ಯುವಜನರಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲಾಗುತ್ತದೆ.

ಆರ್ಥಿಕ ಜ್ಞಾನ ಪ್ರತಿಯೊಬ್ಬರಿಗೂ ತಲುಪಬೇಕು. ಜನರು ಹಣಕಾಸಿನ ವಂಚನೆಗಳಿಂದ ಸುರಕ್ಷಿತರಾಗಿ, ಸರಿಯಾದ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವಂತಾಗಬೇಕು. ಯುವಜನರ ಉದ್ಯಮಶೀಲತೆಯ ಕನಸಿಗೆ ಈ ಸರಣಿ ಪ್ರೇರಣೆಯಾಗಲಿದೆ ಎಂದು ವರುಣ್ ಜಿ.ಆರ್. ತಿಳಿಸಿದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: