ಶಿವಮೊಗ್ಗ: ನಗರ ಉಪವಿಭಾಗ–1 ಹಾಗೂ ಉಪವಿಭಾಗ–2ರ ಮಂಡ್ಲಿ ವ್ಯಾಪ್ತಿಯಲ್ಲಿ ನವೆಂಬರ್ 22 ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಅಂದು ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ: ಇಲಿಯಾಜ್ ನಗರ 9 ರಿಂದ 14ನೇ ಕ್ರಾಸ್, ಮಂಡಕ್ಕಿಭಟ್ಟಿ, ಇಲಿಯಾಜ್ ನಗರ ಚಾನಲ್ ಏರಿಯಾ, ಶಾರದಾನಗರ, ಮಲ್ನಾಡ್ ಕೋಕೋ, ಕಲ್ಲೂರ್ ಮಂಡ್ಲಿ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ: ಕುವೆಂಪುನಗರ, ಮ್ಯಾಕ್ಸ್ ಲೇಔಟ್, ಎನ್.ಇ.ಎಸ್. ಬಡಾವಣೆ, ಚೈತನ್ಯ ಟೆಕ್ನೋ ಶಾಲೆ, ಸವಳಂಗ ರಸ್ತೆ, ಡಿ.ವಿ.ಎಸ್. ಕಾಲೋನಿ, ನವುಲೆ ಇಂದಿರಾಗಾಂಧಿ ಬಡಾವಣೆ, ನವುಲೆ, ಶಿವಬಸವನಗರ, ಶ್ರೀಸಾಯಿ ಬಡಾವಣೆ, ಮಲ್ನಾಡ್ ಕೌಂಟಿ, ಬೊಮ್ಮನಕಟ್ಟೆ ‘ಜಿ’ ಹಾಗೂ ‘ಎಚ್’ ಬ್ಲಾಕ್, ನವುಲೆ ಹೊಸೂರು, ಕೃಷಿ ಕಾಲೇಜು, ಬಾಪೂಜಿ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.