ಹುಚ್ಚು ನಾಯಿ ಅಟ್ಟಹಾಸ, ಅನುಪಿನಕಟ್ಟೆಯಲ್ಲಿ ಆತಂಕ, ಜನರ ಆಕ್ರೋಶ, ಆಗಿದ್ದೇನು?

ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಪಿನಕಟ್ಟೆ ಹಾಗೂ ಹನುಮಂತಾಪುರ ಗ್ರಾಮಗಳಲ್ಲಿ ಹುಚ್ಚು ನಾಯಿಯೊಂದು ಜನ, ಜಾನುವಾರುಗಳ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಬಾಲಕ ಸೇರಿದಂತೆ ಮೂವರು ಹಾಗೂ ಮೂರಕ್ಕೂ ಹೆಚ್ಚು ಜಾನುವಾರುಗಳು ಗಾಯಗೊಂಡಿವೆ. ಇದರಿಂದ ಈ ಭಾಗದಲ್ಲಿ ಆತಂಕದ ಸೃಷ್ಟಿಯಾಗಿದೆ. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸುಂದರೇಶ್, ಸಂತೋಷ್ ಹಾಗೂ ಬಾಲಕ ನಿತಿನ್ ನಾಯ್ಕ್ ನಾಯಿ ದಾಳಿಗೆ ಒಳಗಾಗಿದ್ದಾರೆ. ಅನುಪಿನಕಟ್ಟೆಯ ತೋಟದಲ್ಲಿದ್ದ ಸುಂದರೇಶ್ ಅವರ ಹೊಟ್ಟೆಯ ಭಾಗಕ್ಕೆ ನಾಯಿ ಕಚ್ಚಿದೆ. ಮನೆಯಲ್ಲಿದ್ದ ಸಂತೋಷ್ ಅವರ ಕಾಲು ಮತ್ತು ತೊಡೆ ಭಾಗಕ್ಕೆ ಗಾಯಗೊಳಿಸಿದೆ. ಇನ್ನು, ಮನೆ ಬಳಿ ಆಟವಾಡುತ್ತಿದ್ದ ಬಾಲಕ ನಿತಿನ್ ನಾಯ್ಕ್‌ನ ಕಿವಿ ಹಾಗೂ ಕೈಗೆ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

Dog-Menace-at-Anupinakatte-near-Purdal-in-Shivamogga

ಜಾನುವಾರುಗಳ ಮೇಲೂ ದಾಳಿ

ಮತ್ತೊಂದೆಡೆ ರಸ್ತೆಯಲ್ಲಿ ಸಾಗುತ್ತಿದ್ದ ಮೂರಕ್ಕೂ ಹೆಚ್ಚು ಹಸುಗಳ ಮೇಲೂ ಹುಚ್ಚು ನಾಯಿ ದಾಳಿ ಮಾಡಿದೆ. ದನಗಳ ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಇದರು ಸಾರ್ವಜನಿಕರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಅನುಪಿನಕಟ್ಟೆ ಘನತ್ಯಾಜ್ಯ ವಿಲೇವಾರಿ ಘಟಕದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪದೇ ಪದೆ ನಾಯಿಗಳು ದಾಳಿ ನಡೆಸುತ್ತಿದ್ದರೂ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಬೀದಿ ನಾಯಿಗಳನ್ನು ಸೆರೆಹಿಡಿದು ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: