ಮಹಿಷಿ ಘಟನೆ, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ, ಏನಂದ್ರು ಎಸ್‌ಪಿ?

ಶಿವಮೊಗ್ಗ: ತಾಲ್ಲೂಕಿನ ಮಹಿಷಿ ಬಳಿ ತುಂಗಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬೆಂಗಳೂರಿನ ನಾಲ್ವರು ಯುವಕರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ನಿಖಿಲ್‌, ನದಿಯಲ್ಲಿ ಮುಳುಗಿದ್ದ ಯುವಕರ ಪೈಕಿ ಬೆಂಗಳೂರಿನ ನಕುಲ್ ಎಂಬುವವರ ಮೃತದೇಹ ಮೊದಲಿಗೆ ಪತ್ತೆಯಾಗಿದೆ. ಬಳಿಕ ಮತ್ತಿಬ್ಬರ ಮೃತದೇಹಗಳು ಸಿಕ್ಕಿದೆ. ಕತ್ತಲು ಆವರಿಸಿರುವ ಕಾರಣ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಬ್ಬ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದರು.

SP-B-Nikhil-Reacts-about-Mahishi-incident

ರಕ್ಷಿಸಲು ಹೋಗಿ ದುರಂತ

ಬೆಂಗಳೂರಿನಿಂದ ಮದುವೆ ಸಮಾರಂಭಕ್ಕೆ ಶಿವಮೊಗ್ಗಕ್ಕೆ ಆಗಮಿಸಿದ್ದ ಯುವಕರು, ವಾಪಸ್ ತೆರಳುವಾಗ ಮಹಿಷಿ ಬಳಿ ತುಂಗಾ ನದಿಗೆ ಇಳಿದಿದ್ದರು. ಈ ವೇಳೆ ಒಬ್ಬ ಯುವಕನ ರಕ್ಷಸಿಲು ಉಳಿದ ಮೂವರೂ ನದಿಗೆ ಧುಮುಕಿದಾಗ ನಾಲ್ವರೂ ನೀರಿನಲ್ಲಿ ಮುಳುಗಿದ್ದಾರೆ. ಮೃತರ ಪೈಕಿ ಮೂವರು ಕಾನೂನು ವಿದ್ಯಾರ್ಥಿಗಳಾಗಿದ್ದು, ಒಬ್ಬರು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್‌ ಸ್ಪಷ್ಟಪಡಿಸಿದರು.

ಮುಳುಗು ತಜ್ಞ ಈಶ್ವರ್‌ ಮಲ್ಪೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ 9 ಗಂಟೆಯವರೆಗೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: