ಪುರಸಭೆ ಬಾಗಿಲಿಗೆ ಕುರಿ ಮೃತದೇಹ ತಂದಿಟ್ಟು ರೈತರ ಆಕ್ರೋಶ, ಕಾರಣವೇನು?

ಶಿಕಾರಿಪುರ: ಬೀದಿನಾಯಿಗಳ ದಾಳಿಗೆ ನಾಲ್ಕು ಕುರಿಗಳು ಬಲಿಯಾಗಿದ್ದು, ಸತ್ತ ಕುರಿಗಳನ್ನು ಪುರಸಭೆ ಕಚೇರಿಯ ಎದುರಿಗೆ ಇಟ್ಟು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ತಾಲ್ಲೂಕಿನ ಕಾನೂರು ಹೊಸಕೇರಿಯ ರೈತ ದಿನೇಶ್ ರಾವ್ ಅವರ ಕೊಟ್ಟಿಗೆಗೆ ರಾತ್ರಿ ನುಗ್ಗಿದ ಬೀದಿನಾಯಿಗಳ ಹಿಂಡು, ನಾಲ್ಕು ಕುರಿಗಳನ್ನು ಕೊಂದು ತಿಂದಿವೆ. ಇದರಿಂದ ರೊಚ್ಚಿಗೆದ್ದ ರೈತರು ಹಾಗೂ ಗ್ರಾಮಸ್ಥರು ಕುರಿಗಳ ಮೃತದೇಹಗಳನ್ನು ಶಿಕಾರಿಪುರ ಪುರಸಭೆ ಮುಂದೆ ತಂದಿಟ್ಟು ಪ್ರತಿಭಟನೆ ನಡೆಸಿದರು.

Farmers-Protest-Against-Dog-Menace-At-Shikaripura

ವರ್ಷದ ಹಿಂದೆಯೂ ದಾಳಿ

ವರ್ಷದ ಹಿಂದೆಯೂ ದಿನೇಶ್ ಅವರ ನಾಲ್ಕು ಕುರಿಗಳು ನಾಯಿ ದಾಳಿಗೆ ಬಲಿಯಾಗಿದ್ದವು. ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಈಗ ಮತ್ತೆ ಕುರಿಗಳು ಬಲಿಯಾಗಿದ್ದರಿಂದ, ಕುರಿ ಸಾಕಾಣಿಕೆಯನ್ನೇ ನಂಬಿ ಬದುಕುತ್ತಿದ್ದ ರೈತ ದಿನೇಶ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೂಡಲೇ ಬೀದಿನಾಯಿಗಳ ಹಾವಳಿ ತಡೆಗಟ್ಟಬೇಕು, ನಾಯಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: