ಶಿವಮೊಗ್ಗ ಏರ್’ಪೋರ್ಟ್ | ಸಿಎಂ ಮಹತ್ವದ ಸಭೆ, 6 ತಿಂಗಳಲ್ಲಿ ವಿಮಾನ ಹಾರಾಟಕ್ಕೆ ಸೂಚನೆ, ಏನೆಲ್ಲ ನಿರ್ಧಾರವಾಯ್ತು ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 14 ಡಿಸೆಂಬರ್ 2019

ಮಂದಗತಿಯಲ್ಲಿ ಸಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಚುರುಕು ಮುಟ್ಟಿಸೋಕೆ, ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಆರು ತಿಂಗಳಲ್ಲಿ ಶಿವಮೊಗ್ಗಕ್ಕೆ ವಿಮಾನ ಬರಬೇಕು ಎಂದು ಸಭೆಯಲ್ಲಿ ಸಿಎಂ ಸೂಚನೆ ನೀಡಿದ್ದಾರೆ.

https://www.facebook.com/liveshivamogga/videos/571627330281943/?t=31

ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಏನೆಲ್ಲ ಚರ್ಚೆಯಾಯ್ತು?

ವಿಮಾನ ನಿಲ್ದಾಣ ಕಾಮಾಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಕಾಮಗಾರಿ ವೇಗ ಹೆಚ್ಚಿಸಲು ಸಭೆಯಲ್ಲಿ ಸೂಚಿಸಲಾಯಿತು.

ಕಾಮಾಗಾರಿ ವೇಗ ಹೆಚ್ಚಿಸಲು 4 ಜಿ ಅನುಮತಿ ನೀಡಲು‌ ಸಭೆಯಲ್ಲಿ ಸೂಚಿಸಲಾಯಿತು.

ರನ್ ವೇಯನ್ನು 1.2 ಕಿಲೋಮೀಟರ್ ನಿಂದ 2.1 ಕಿಲೋಮೀಟರ್ ಗೆ ಹೆಚ್ಚಿಸಲು ಅನುಮತಿ ನೀಡಲಾಯಿತು.

79476057 2580898018625313 3207707083910676480 o.jpg? nc cat=111& nc ohc=xVvK4RcuKHMAQmI0vHPACKJ B NNFNiRKQLhxuJBqWj9MpAfI6kkG1lbg& nc ht=scontent.fblr11 1

ಕಾಮಗಾರಿಗೆ ಈಗಾಗಲೇ 40 ಕೋಟಿ ಹಣವನ್ನು ನೀಡಲಾಗಿದ್ದು ತಕ್ಷಣವೇ ಕೆಲಸ ಆರಂಭಿಸಬೇಕು.

ಕಾಮಗಾರಿಗೆ ಈಗಾಗಲೇ 40 ಕೋಟಿ ಹಣವನ್ನು ನೀಡಲಾಗಿದ್ದು ತಕ್ಷಣವೇ ಕೆಲಸ ಆರಂಭಿಸಬೇಕು. ಅದನ್ನು 150 ಕೋಟಿ ರೂ.ಗೆ ಪರಿಷ್ಕರಿಸಲು ಅಗತ್ಯ ಕ್ರಮ ಕೈಗೊಲ್ಳುವುದು.

ಲೋಕೋಪಯೋಗಿ ಇಲಾಖೆ ವತಿಯಿಂದ ವಿಮಾನ ನಿಲ್ದಾಣ ನಿರ್ಮಾಣ. ಎರಡು ಹಂತದಲ್ಲಿ ಕಾಮಗಾರಿಯ ಅನುಷ್ಠಾನ.

ಡಿಸೆಂಬರ್ ಅಂತ್ಯಕ್ಕೆ ವಿಮಾನ ನಿಲ್ದಾಣ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭ, 2020ರ ಫೆಬ್ರವರಿ  ಅಂತ್ಯಕ್ಕೆ ನಿಲ್ದಾಣ ಕಾಮಗಾರಿ ಶುರುಮಾಡಲು ಸಮಯ ನಿಗದಿ.

80048309 2580898038625311 3826952715573919744 o.jpg? nc cat=105& nc ohc= UDDgH3nW0EAQmBrl5RDp MwTW3to68y yyk zNp2xtmj3MkcZCGeg9og& nc ht=scontent.fblr11 1

ಒಂದು ವಾರದೊಳಗೆ ಎಲ್ಲ ರೀತಿಯ ಪೇಪರ್ ವರ್ಕ್ ಮುಗಿಸಿ ಕೆಲಸ ಆರಂಭಿಸಲು ಸೂಚನೆ.

ಇನ್ನು 6 ತಿಂಗಳ ಒಳಗೆ ಶಿವಮೊಗ್ಗದಲ್ಲಿ ವಿಮಾನಗಳು ಹಾರಾಡಬೇಕು. ಇಲ್ಲದಿದ್ದರೆ‌ ಅದಕ್ಕೆ‌ ನೀವೇ ಜವಬ್ದಾರರಾಗುತ್ತೀರ ಅಂತ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Chief Minister B S Yedyurappa holds a special meeting with the officials and Shimoga MP BY Raghavendra, MLC Rudregowda, DC KB Shivakumar on Airport in Bengaluru.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment