ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI | 16 ಡಿಸೆಂಬರ್ 2019
ಜೀನ್ಸ್ ಪ್ಯಾಂಟ್ ಮತ್ತು ಪ್ಯಾಂಟ್ ಬೆಲ್ಟನ್ನೇ ನೇಣು ಕುಣಿಕೆ ಮಾಡಿಕೊಂಡು, ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿಯ ಅಕೇಶಿಯಾ ಪ್ಲಾಂಟೇಶನ್’ನಲ್ಲಿ ಘಟನೆ ನಡೆದಿದೆ. ತಾನು ಧರಿಸಿದ್ದ ಜೀನ್ಸ್ ಪ್ಯಾಂಟ್ ಮತ್ತು ಬೆಲ್ಟನ್ನೇ ಮರಕ್ಕೆ ಕಟ್ಟಿ, ನೇಣು ಬಿಗಿದು ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಸುಮಾರು 45 ವರ್ಷದವನು ಎಂದು ಪೊಲೀಸರು ಶಂಕಿಸಿದ್ದಾರೆ.
ಜೇಬಿನಲ್ಲಿ ಪತ್ತೆಯಾಯ್ತು ಡಿಎಲ್
ಮೃತ ವ್ಯಕ್ತಿಯ ಜೇಬಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದೆ. ಇದರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಯಡೆಹಳ್ಳಿ ಗ್ರಾಮದ ವಿಳಾಸವಿದೆ. ವ್ಯಕ್ತಿಯ ಹೆಸರು ಸುಜಿತ್ ಕುಮಾರ್ ಎಂದು ಡ್ರೈವಿಂಗ್ ಲೈಸೆನ್ಸ್’ನಲ್ಲಿದೆ.
ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Unknown Person commits suicide by hanging himself to jeans pant and belt in thirthahalli Bharathipura. Thirthahalli Police visited the spot.