ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಸಾವಿರ ರೂ. ಬಟ್ಟೆ ಖರೀದಿಸಿದರೆ ಒಂದು ಕೆ.ಜಿ ಈರುಳ್ಳಿ ಫ್ರೀ ಅಂತಾ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಯೊಬ್ಬರು ಆಫರ್ ಕೊಟ್ಟಿದ್ದರು. ಈರುಳ್ಳಿ ಬೆಲೆ ನೂರು ರೂ. ಗಡಿ ದಾಟಿದ್ದಾಗ ಇಂತಹ ಆಫರ್ ನೀಡಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯೊಂದು ಇಂತಹುದೇ ಆಫರ್ ಕೊಡುತ್ತಿದೆ.

ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಟೆಲಿಕಾಂ ಸಂಸ್ಥೆಯೊಂದು ಒಂದು ಕೆ.ಜಿ ಈರುಳ್ಳಿಯನ್ನು ಉಚಿತವಾಗಿ ಕೊಡುವ ಆಫರ್ ಕೊಟ್ಟಿದೆ. ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಟೆಲಿಕಾಂ ಸಂಸ್ಥೆ ತಂಡ, 300 ರೂ. ಕೊಟ್ಟು ಸಿಮ್ ಖರೀದಿಸಿದರೆ, ಒಂದು ಕೆ.ಜಿ ಈರುಳ್ಳಿ ಕೊಡುವುದಾಗಿ ತಿಳಿಸಿತ್ತು. ಸಿಮ್ ಖರೀದಿಸಿದ ಕೆಲವರಿಗೆ ಉಚಿತವಾಗಿ ಈರುಳ್ಳಿಯನ್ನು ಕೊಟ್ಟಿದೆ.
ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಇಂತಹ ಆಫರ್ ನೀಡಲಾಗಿದೆ. ಟೆಲಿಕಾಂ ಸಂಸ್ಥೆಯ ಆಫರ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋಗಳು ಎಲ್ಲ ಕಡೆ ಷೇರ್ ಆಗುತ್ತಿವೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಈರುಳ್ಳಿ ಪ್ರತಿ ಕೆ.ಜಿಗೆ 80 ರೂ. ನಿಂದ 100 ರೂ. ವರೆಗೂ ಇದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು





