ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 28 ಡಿಸೆಂಬರ್ 2019
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಯಿಂಟ್ ಆಕ್ಷನ್ ಕಮಿಟಿ ವತಿಯಿಂದ ನಗರದ ಈದ್ಗಾ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಬಿಗಿ ಭದ್ರತೆ ನಡುವೆ ಸಮಾವೇಶ ನಡೆಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹೈಕೋರ್ಟ್ ವಕೀಲ ಬಾಲನ್, CAA, NPR ಮತ್ತು NRC ಕಾಯ್ದೆಗಳು ಒಂದೇ ನಾಣ್ಯದ ಎರಡು ಮುಖ. ಇದನ್ನು ಜಾರಿ ಮಾಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾನವ ವಿರೋಧಿಗಳು, ದೇಶದ್ರೋಹಿಗಳು. ಆಘ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದಿಂದ ಹಿಂದುಗಳು ಬರಬಹುದು. ಆದರೆ ಶ್ರೀಲಂಕಾದಿಂದ ಮಾತ್ರ ಬರಬಾರದು. ಇದೆಂತಹ ಕಾನೂನು. ಏಕೆಂದರೆ ಶ್ರೀಲಂಕಾದಲ್ಲಿ ಬ್ರಾಹ್ಮಣ ಹಿಂದುಗಳಿಲ್ಲ ಎಂದು ಪೌರತ್ವ ನೀಡುತ್ತಿಲ್ಲ ಎಂದು ಆರೋಪಿಸಿದರು.
ಮುಸ್ಲಿಂ ಧರ್ಮಗುರು ಶಾವುದ್ ಅಮಿದ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಯಾರು ಜಾತಿ, ಧರ್ಮವನ್ನು ನೋಡಲಿಲ್ಲ. ಈಗ ಪೌರತ್ವಕ್ಕಾಗಿ ಜಾತಿ, ಧರ್ಮ ಎತ್ತಿಹಿಡಿಯುತ್ತಿದ್ದಾರೆ. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನಾ ಅಜಾದ್ ಸೇರಿದಂತೆ ವೀರಸೇನಾನಿಗಳು ದೇಶದ ಐಕ್ಯತೆಗಾಗಿ ಶ್ರಮಿಸಿದ್ದರು. ಆದರೆ ಈಗಿನ ಸರ್ಕಾರ ಸಂಘ ಪರಿವಾರದ ಅಜೆಂಡಾವನ್ನು ಮುಂದಿಟ್ಟಕೊಂಡು ಜಾತಿ, ಧರ್ಮದ ವಿಚಾರದಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ.ದೇಶವನ್ನು ಇಬ್ಬಾಗಿಸುವ, ಮನುಷ್ಯ ವಿರೋಧಿಯಾಗಿರುವ ಇದನ್ನು ಪ್ರತಿಯೊಬ್ಬರು ವಿರೋಧಿಸಬೇಕು ಎಂದರು.
ಪ್ರಗತಿಪರ ಚಿಂತಕ ಹರ್ಷ ಕುಮಾರ್ ಕುಗ್ವೆ ಮಾತನಾಡಿ, ದೇಶದಲ್ಲಿರುವ ಅಲ್ಪಸಂಖ್ಯಾತರ ಮೇಲೆ ಧರ್ಮ ಹಾಗೂ ಅಹಾರ ಸಂಸ್ಕೃತಿಯ ಹೆಸರಿನಲ್ಲಿ ಹಲ್ಲೆ ಮಾಡುತ್ತಿದ್ದಾರೆ. ಸ್ವದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗದ ಕೇಂದ್ರ ಸರ್ಕಾರ ಈಗ ಹೊರ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತೇವೆ ಎಂದು ಹೇಳುತ್ತಿರುವುದು ಯಾವ ನ್ಯಾಯ ಎಂದು ಕೇಂದ್ರದ ನಡೆಯನ್ನು ಪ್ರಶ್ನಿಸಿದರು.
ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ಅಬ್ದುಲ್ ಸತ್ತಾರ್ ಬೇಗ್, ವಕೀಲರಾದ ಕೆ.ಪಿ.ಶ್ರೀಪಾಲ್, ಮುಕ್ತಿ ಮುಜೀಬುಲ್ಲಾ, ಡಿಎಸ್ಎಸ್ ಮುಖಂಡ ಗುರುಮೂರ್ತಿ, ಹಾಲೇಶಪ್ಪ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]