ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 6 ಜನವರಿ 2020
ಹೊಸನಮನೆ ಬಡಾವಣೆಯಲ್ಲಿರುವ ವೆಲ್ಡಿಂಗ್ ಶಾಪ್’ಗಳನ್ನು ಕೂಡಲೆ ತೆರವು ಮಾಡಬೇಕು ಅಂತಾ ಹೊಸಮನೆ ಬಡಾವಣೆ ನಾಗರಿಕ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವೆಲ್ಡಿಂಗ್ ಶಾಪ್’ಗಳು ಇರುವುದರಿಂದ ಬಡಾವಣೆಯಲ್ಲಿ ಜನರು ಮತ್ತು ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ವೆಲ್ಡಿಂಗ್ ಶಾಪ್’ನಲ್ಲಿ ರಾಡ್ ಬಿದ್ದು ಜ.4ರಂದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಾಗಾಗಿ ಕೂಡಲೇ ವೆಲ್ಡಿಂಗ್ ಶಾಪ್’ಗಳನ್ನು ತೆರವು ಮಾಡಬೇಕು ಎಂದು ಒಕ್ಕೂಟದ ಸದಸ್ಯದರು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಂಗನಾಥ್, ಒಕ್ಕೂಟದ ಜಯಲಕ್ಷ್ಮಿ, ಸಾವಿತ್ರಿ, ಯಶೋಧ, ನೇತ್ರಾವತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]