ಶಿವಮೊಗ್ಗ ಲೈವ್.ಕಾಂ | SHIMOGA | 26 ಜನವರಿ 2020
ತಾಲೂಕಿನ ಸೂಡೂರು ಸೇತುವೆಯಿಂದ ಕುಮದ್ವತಿ ನದಿಗೆ ಶನಿವಾರ ಸಂಜೆ ಟ್ರಕ್‌ವೊಂದು ಕೆಳಕ್ಕೆ ಬಿದ್ದ ಪರಿಣಾಮ ಟ್ರಕ್ ಚಾಲಕನಿಗೆ ಕಾಲು ಹಾಗೂ ತಲೆಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಂಟೈನರ್ ಕೊಂಡೊಯ್ಯುತ್ತಿದ್ದ ಟ್ರಕ್ ಶಿವಮೊಗ್ಗ ಕಡೆಯಿಂದ ಹೊಸನಗರ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸಿದ ಸ್ಥಳ ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಗಡಿ ಪ್ರದೇಶದಲ್ಲಿದೆ.
ಸ್ಥಳಕ್ಕೆ ಕುಂಸಿ ಹಾಗೂ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿದರು. ಆದರೆ ಆ ವೇಳೆ ಲಾರಿ ಚಾಲಕ ಇಲ್ಲವೇ ಕ್ಲೀನರ್ ಇಲ್ಲದ ಕಾರಣ ರಾತ್ರಿವರೆಗೂ ಯಾವುದೇ ದೂರು ದಾಖಲಾಗಿರಲಿಲ್ಲ. ಗಾಯಗೊಂಡವರ ನಿಖರ ಮಾಹಿತಿಯೂ ತಿಳಿದಿರಲಿಲ್ಲ.