ಶಿವಮೊಗ್ಗ ಲೈವ್.ಕಾಂ | THIRTHAHALLI | 15 ಫೆಬ್ರವರಿ 2020

ಎರಡು ವರ್ಷಗಳಿಗೊಮ್ಮೆ ನಡೆಯುವ ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆಯನ್ನು ಫೆ.25ರಿಂದ 9 ದಿನಗಳು ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ನಾಗರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.25ಕ್ಕೆ ಮಾರಿ ಸಾರಲಾಗುತ್ತದೆ. ಮಾ. 3ರಂದು ರಾತ್ರಿ ಸಂಪ್ರದಾಯದಂತೆ ಎಣ್ಣೆ ಪೂಜೆಯೊಂದಿಗೆ ನಾಡ್ತಿಆಚಾರ್ ಕುಟುಂಬವರು ಕೆತ್ತನೆ ಮಾಡಿದ ಗೊಂಬೆ ಪೂಜೆಯನ್ನು ನೆರವೇರಿಸಿದ ನಂತರ ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಗದ್ದುಗೆಯಲ್ಲಿ ಗೊಂಬೆಯನ್ನು ಸ್ಥಾಪಿಸಲಾಗುವುದು. ಮರುದಿನ ಮಧ್ಯಾಹ್ನದವರೆಗೆ ಪೂಜಾವಿಧಿಗಳು ನೆರವೇರಲಿದ್ದು ನಂತರ ಅದ್ದೂರಿ ರಾಜಬೀದಿ ಮೆರವಣಿಗೆಯೊಂದಿಗೆ ಕುಶಾವತಿಯ ತುಂಗಾ ನದಿಯಲ್ಲಿ ಗೊಂಬೆ ವಿಸರ್ಜನೆ ಮಾಡಲಾಗುವುದು ಎಂದರು.
50 ಲಕ್ಷ ರೂ. ವೆಚ್ಚದಲ್ಲಿ ಜಾತ್ರೆ ಮಾಡಲಾಗುತ್ತಿದೆ. ಫೆ.26ರಂದು ಪಾರಾಯಣ, ಸಹಸ್ರನಾಮ, ಕುಂಕುಮಾರ್ಚನೆ, 29ಕ್ಕೆ ಸಹಸ್ರನಾಮ ಮತ್ತು ರಂಗಪೂಜೆ, ಮಾ.1ಕ್ಕೆ ಚಂಡಿಕಾಹೋಮ ನಡೆಯಲಿದೆ. ಈ ಅವಧಿಯಲ್ಲಿ ಭಕ್ತಾದಿಗಳಿಗೆ ಪ್ರತಿದಿನ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಎ.ಎಸ್.ಧನಂಜಯ್, ಸಹಕಾರ್ಯದರ್ಶಿ ಎಂ.ಎ.ಪ್ರಭಾಕರ್, ಟಿ.ಕೆ.ಜಯರಾಮ ಶೆಟ್ಟಿ, ಧರ್ಮದರ್ಶಿಗಳಾದ ಡಿ.ಎಸ್.ವಿಶ್ವನಾಥ ಶೆಟ್ಟಿ, ರಾಘವೇಂದ್ರ ನಾಯಕ್, ಮಂಜುನಾಥ ಶೆಟ್ಟಿ, ಜೆ.ಸತ್ಯನಾರಾಯಣ, ಚಂದ್ರಶೇಖರ್, ನಾಗಪ್ಪ ಆಚಾರ್, ಸಂದೇಶ್ ಜವಳಿ ಹಾಗೂ ಬಿ.ಆರ್.ರಾಘವೇಂದ್ರ ಶೆಟ್ಟಿ ಇದ್ದರು.

All Set for Thirthahalli Maari Jathre. This year Maari Jathre to be held from February 25th. Jathre will be held for nine days.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200