ಸಾಗರ ಮೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ, ಶಾಸಕರ ವಿರುದ್ಧ ಮಾಜಿ ಎಂಎಲ್ಎ ಆಕ್ರೋಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA | 15 ಫೆಬ್ರವರಿ 2020

84628599 805222929957619 7909208174236794880 o.jpg? nc cat=103& nc ohc=ufyY4IILs4sAX bk7bV& nc ht=scontent.fblr1 3

ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ತಾಲೂಕು ಘಟಕ ನಗರದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಮಾಜಿ ಶಾಸಕಬೇಳೂರು ಗೋಪಾಲಕೃಷ್ಣ, ರೈತರು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಶಾಸಕರು ಡಾನ್ಸ್, ಕೆರೆಹಬ್ಬ ಬಿಟ್ಟು ಕೃಷಿಕರ ಸಮಸ್ಯೆಗೆ ಸ್ಪಂದಿಸಲಿ. ರೈತರು ಸಮೃದ್ದಿ ಆಗಿದ್ದಾಗ ನೀವು ರಾಜ್ಯಾದ್ಯಂತ ಕೆರೆಹಬ್ಬ ಆಚರಿಸಿಕೊಳ್ಳಿ ಎಂದು ಕುಟುಕಿದರು. ಕಳೆದ ಸಾಲಿನಲ್ಲಿ ಮಳೆ ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಆಗಿದೆ. ರಾಜ್ಯದ ಎಲ್ಲ ಡ್ಯಾಂಗಳು ಭರ್ತಿಯಾಗಿವೆ. ಆದರೆ ರೈತರಿಗೆ ಮಾತ್ರ ಸಮರ್ಪಕ ವಿದ್ಯುತ್ ಪೂರೈಸದೆ ಸರ್ಕಾರ ವಂಚಿಸುತ್ತಿದೆ ಎಂದು ದೂರಿದರು. .

ಸಿಎಂ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ್ದು ಸರಿ. ತಾವು ರೈತನ ಮಗನೆಂದೂ ಹೇಳುತ್ತಾರೆ. ಆದರೆ ಜಿಲ್ಲೆಯ ರೈತರಿಗೆ ಸಮರ್ಪಕ ವಿದ್ಯುತ್ ನೀಡದ ಸಿಎಂ ರಾಜ್ಯದ ರೈತರಿಗೆ ಹೇಗೆ ವಿದ್ಯುತ್ ಪೂರೈಕೆ ನೀತಿ ರೂಪಿಸುತ್ತಾರೆ? ಮೊದಲು ಜಿಲ್ಲೆಯ ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.

ಶಾಸಕರೇ ಹೋದಲೆಲ್ಲ ಧರಣಿ ಕುಳಿತುಕೊಳ್ಳುತ್ತಿದ್ದು ಅಧಿಕಾರಿಗಳು ಮಾತು ಕೇಳದ ಸ್ಥಿತಿ ನಿರ್ಮಾಣವಾಗಿದೆ. ಇದು ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಸಿಎಂ ತವರು ಕ್ಷೇತ್ರದಲ್ಲಿ ಸಮರ್ಪಕ ವಿದ್ಯುತ್ ಇರುತ್ತದೆ. ಸಾಗರ ಕೇತದ ರೈತರಿಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ರೈತ ಸಂಘದ ಪ್ರಮುಖರಾದ ಕೆ.ಬಿ.ಸೇನಾಪತಿ ಗೌಡ, ಅರುಣ್ ಕುಮಾರ್, ಗುರುಮೂರ್ತಿ, ಮಹಾಬಲೇಶ್ವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್‌.ಜಯಂತ್, ಕೃಷ್ಣಮೂರ್ತಿ ಬಿಳಿಗಲ್ಲೂರು, ಕೆ.ಹೊಳೆಯಪ್ಪ, ಕಲಸೆ ಚಂದಪ್ಪ, ಗಾಮಪ್ಪ ಸೂರನಗದ್ದೆ, ಮುರಳಿ ಮಂಚಾಲೆ, ಕೆ.ಎಸ್.ವೆಂಕಟೇಶ್, ಮೋಹನ್, ಸಂದೀಪ್ ಇದ್ದರು.

84533154 796421937504385 9023917582444396544 n.jpg? nc cat=100& nc ohc=f6mBsk23j94AX BwZXI& nc ht=scontent.fblr1 3

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Farmers Protest against in adequate power in Sagara. Famers led by Raitha Sangha and Hasiru Sene led the protest. Ex MLA Beluru Gopalakrishna Participated in the protest.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment