SHIVAMOGGA LIVE NEWS | 30 NOVEMBER 2023
SHIMOGA : ನಗರದ ಬಿ.ಹೆಚ್.ರಸ್ತೆಯ ಫ್ಯಾನ್ಸಿ ಅಂಗಡಿಯೊಂದರ ಶಟರ್ಗೆ ಹಾಕಿದ್ದ ಬೀಗ ಮುರಿದು ನಗದು ಮತ್ತು ಬೆಳ್ಳಿ ನಾಣ್ಯಗಳನ್ನು ಕಳ್ಳತನ (Theft) ಮಾಡಲಾಗಿದೆ. ಶರೀಫ್ ಕಾಂಪ್ಲೆಕ್ಸ್ನಲ್ಲಿರುವ ಮಾತಾಜಿ ಫ್ಯಾನ್ಸಿ ಅಂಗಡಿಯ ಬಾಗಿಲು ಮುರಿದು ಕಳವು ಮಾಡಲಾಗಿದೆ. ನ.23ರ ರಾತ್ರಿ ಅಂಗಡಿ ಮಾಲೀಕ ಗೋವಿಂದ್ ಸಿಂಗ್ ಬಾಗಿಲಿನ ಬೀಗ ಹಾಕಿ ಮನೆಗೆ ತೆರಳಿದ್ದರು.
ನ.24ರ ಬೆಳಗಿನ ಜಾವ ಪಕ್ಕದ ಅಂಗಡಿ ಮಾಲೀಕ ಕರೆ ಮಾಡಿ ರೋಲಿಂಗ್ ಶಟರ್ಗೆ ಹಾಕಿದ್ದ ಬೀಗ ಮುರಿದಿರುವ ವಿಚಾರ ತಿಳಿಸಿದ್ದರು. ಅಂಗಡಿಯ ಕ್ಯಾಶ್ ಬಾಕ್ಸ್ನಲ್ಲಿದ್ದ 25 ಸಾವಿರ ರೂ. ನಗದು, 5 ಸಾವಿರ ರೂ. ಮೌಲ್ಯದ ಬೆಳ್ಳಿ ನಾಣ್ಯಗಳು ಕಳ್ಳತನವಾಗಿದ್ದವು. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಶಿವಮೊಗ್ಗ ಜಿಲ್ಲೆಯ ರೈತರಿಗೆ ಉಚಿತವಾಗಿ ಮಿನಿ ಕಿಟ್ಗಳ ವಿತರಣೆ, ಏನಿದು ಕಿಟ್? ಯಾರು ಪಡೆಯಬಹುದು?