ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
SHIMOGA : ಟ್ಯೂಷನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ಯುವಕರ (Youths) ಗುಂಪೊಂದು ಕಾರಣವೇ ಇಲ್ಲದೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ವಾದಿ ಯೇ ಹುದಾ ಬಡಾವಣೆಯ ಬಾಲಕನೊಬ್ಬ ಟ್ಯೂಷನ್ಗೆ (Tuition) ಹೋಗಿ ಸ್ನೇಹಿತನ ಜೊತೆಗೆ ಮನೆಗೆ ಮರಳುತ್ತಿದ್ದ. ಈ ವೇಳೆ ಟೆಂಪೋ ಸ್ಟಾಂಡ್ ಬಳಿ ಯುವಕರ ಗುಂಪಿನಲ್ಲಿದ್ದ ಒಬ್ಬಾತ ಬಾಲಕನನ್ನು ದಿಟ್ಟಿಸಿ ನೋಡಿದ್ದಾನೆ. ಆಗ ಬಾಲಕ ಯಾಕೆ ಹಾಗೆ ನೋಡುತ್ತಿದ್ದೀರ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವಕರು ಮನಸೋಯಿಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಇದನ್ನೂ ಓದಿ – ಅಡ್ಡ ನಿಲ್ಲಿಸಿದ್ದ ಬೈಕ್ ತಗಿ ಅಂದಿದ್ದಕ್ಕೆ ಕೀಯಿಂದಲೇ ಮೂವರಿಗೆ ಹೊಡೆದು ರಕ್ತ ಬರಿಸಿದ ಯುವಕ – 3 ಫಟಾಫಟ್ ನ್ಯೂಸ್
ಹಲ್ಲೆಗೊಳಗಾಗಿದ್ದ ಬಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ