ವಿಐಎಸ್‌ಎಲ್‌ ಪುನಾರಂಭಕ್ಕೆ ಆರಂಭಿಕ ತೊಂದರೆ, ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ನಿರಾಸೆ, ಆಗಿದ್ದೇನು?

110823 VISL Factory Bhadravathi

SHIVAMOGGA LIVE NEWS | 11 AUGUST 2023 BHADRAVATHI : ವಿಐಎಸ್ಎಲ್‌ ಕಾರ್ಖಾನೆಯ ಬಾರ್‌ ಮಿಲ್‌ (Bar Mill) ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಆ.10ರಂದು ಆರಂಭವಾಗಿದ್ದ ಘಟಕ ತನ್ನ ಉತ್ಪಾದನಾ ಚಟುವಟಿಕೆ ಮುಂದೂಡಿದೆ. ಆ.10ರಿಂದ ಬಾರ್‌ ಮಿಲ್‌ (Bar Mill) ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನಾರಂಭವಾಗಲಿದೆ ಎಂದು ಸೇಲ್‌ ಆಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಸಿದ್ಧತೆ ಮಾಡಿಕೊಳ್ಳುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈಗ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಆ ಬಳಿಕ ಘಟಕದಲ್ಲಿ ಕೆಲಸ ಶುರುವಾಗಲಿದೆ … Read more

ಶಿವಮೊಗ್ಗದಲ್ಲಿ ನಾಲ್ಕು ದಿನ ಚುಂಚಾದ್ರಿ ಕಪ್‌, ಈ ಬಾರಿ ಎಷ್ಟು ತಂಡಗಳು ಭಾಗವಹಿಸುತ್ತಿವೆ? ಏನೆಲ್ಲ ಸಿದ್ಧತೆಯಾಗಿದೆ?

090823 Chunchadri cup in Shimoga Press Meet

SHIVAMOGGA LIVE NEWS | 9 AUGUST 2023 SHIMOGA : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆ.11 ರಿಂದ 14ರವರೆಗೆ ಚುಂಚಾದ್ರಿ ಕಪ್ (Chunchadri Cup) ವಾಲಿಬಾಲ್ ಪಂದ್ಯಾವಳಿ (Volley Ball Tournament) ಆಯೋಜಿಸಲಾಗಿದೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ್ ಜಿ.ಕಾಮತ್, 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 21ನೇ ವರ್ಷದ ಚುಂಚಾದ್ರಿ ಕಪ್‌ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಆದಿಚುಂಚನಗಿರಿ ವಿದ್ಯಾ ಸಂಸ್ಥೆ ನಿರ್ದೇಶಕ … Read more

ಶಿವಮೊಗ್ಗದಲ್ಲಿ ಮಹಾ ಧರಣಿ, 11 ಸಂಘಟನೆಗಳು ಭಾಗಿ, ಬೇಡಿಕೆಗಳೇನು?

090823 Labourer Union Protest in Shivamogga DC Office

SHIVAMOGGA LIVE NEWS | 9 AUGUST 2023 SHIMOGA : ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಮಹಾ ಧರಣಿ (Protest) ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಮಿಕರು ಧರಣಿ ಪಾಲ್ಗೊಂಡಿದ್ದರು. ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಹಿಂಪಡೆಯಬೇಕು, ಕನಿಷ್ಠ ವೇತನವನ್ನು 31,500 ರೂ.ಗೆ ಹೆಚ್ಚಳ ಮಾಡಬೇಕು, ಕಾರ್ಮಿಕ ವಿರೋಧಿ ಲೇಬರ್‌ ಕೋಡ್‌ ರದ್ದಾಗಬೇಕು, ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಜಾರಿಯಾಗಿ ಕನಿಷ್ಠ … Read more

ಭಾರತ ಬಿಟ್ಟು ತೊಲಗಿ, ರೈತರು, ಕೃಷಿ ಪದ್ಧತಿ ಉಳಿಸಿ, ಶಿವಮೊಗ್ಗದಲ್ಲಿ ಅನ್ನದಾತರ ಆಕ್ರೋಶ

090823 KT Gangadhar Protest in Shimoga corporator quit india

SHIVAMOGGA LIVE NEWS | 9 AUGUST 2023 SHIMOGA : ಕಾರ್ಪೊರೇಟ್‌ ಕಂಪನಿಗಳೆ (Corporate Companies) ಭಾರತ ಬಿಟ್ಟು ತೊಲಗಿ, ಕೃಷಿ ಭೂಮಿ ಉಳಿಸಿ ಘೋಷಣೆಯೊಂದಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ರಾಜ್ಯ ವರಿಷ್ಠ ಕೆ.ಟಿ.ಗಂಗಾಧರ್‌ (K.T. Gangadhar) ಅವರ ನೇತೃತ್ವದಲ್ಲಿ ರೈತರು ಪ್ರತಿಭಟನೆ ಮಾಡಿದರು. ಕೃಷಿ ಕ್ಷೇತ್ರ ಭಾರತದಲ್ಲಿ ಶೇ.60ರಷ್ಟು ಉದ್ಯೋಗ ಸೃಷ್ಟಿ ಮಾಡಿದೆ. ಆದರೆ ಕಾರ್ಪೊರೇಟ್‌ ಕಂಪನಿಗಳು ಲಗ್ಗೆ ಇಟ್ಟು (Agriculture) ವ್ಯವಸ್ಥೆಯನ್ನು ಹಾಳುಗೆಡವುತ್ತಿವೆ. ಯಂತ್ರೋಪಕರಣ, … Read more

ಸಾಗರ ತಾಲೂಕಿನಲ್ಲಿ ದಿಢೀರ್‌ ತಪಾಸಣೆ ನಡೆಸಿದ ಅಧಿಕಾರಿಗಳು, ಕಿಶೋರ ಕಾರ್ಮಿಕ ಪತ್ತೆ

090823 Child Labour found in a sudden check at Sagara taluk

SHIVAMOGGA LIVE NEWS | 9 AUGUST 2023 SAGARA : ಅನಿರೀಕ್ಷಿತ ತಪಾಸಣೆಯಲ್ಲಿ ಒಬ್ಬ ಕಿಶೋರ ಕಾರ್ಮಿಕ ಪತ್ತೆಯಾಗಿದ್ದಾನೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ. ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department) ಪೊಲೀಸ್ ಇಲಾಖೆ ವತಿಯಿಂದ ಸಾಗರ (Sagara) ತಾಲೂಕಿನಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿತ್ತು. ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ 1986 ಹಾಗೂ … Read more

ಶಿವಮೊಗ್ಗದಲ್ಲಿ ನಟ ಪ್ರಕಾಶ್‌ ರಾಜ್‌ ಪತ್ರಿಕಾ ಸಂವಾದ, 5 ಪ್ರಮುಖ ವಿಚಾರಗಳ ಪ್ರಸ್ತಾಪ, ಏನೇನೆಲ್ಲ ಹೇಳಿದರು?

090823 Actor Prakash Raj in Shimoga Mathura Pradise

SHIVAMOGGA LIVE NEWS | 9 AUGUST 2023 SHIMOGA : ಬಡವರ ದುಡ್ಡಲ್ಲಿ ಬಡವರಿಗೆ ಸೌಲಭ್ಯ ನೀಡಿದರೆ ಅದು ತಪ್ಪಲ್ಲ. ಗ್ಯಾರಂಟಿ ಯೋಜನೆಗಳನ್ನು ನಾನು ಸ್ವಾಗತಿಸುತ್ತೇನೆ ಎಂದು ನಟ ಪ್ರಕಾಶ್ ರಾಜ್ (Prakash Raj) ಹೇಳಿದರು. ಶಿವಮೊಗ್ಗದ ಮಥುರಾ ಪ್ಯಾರಡೈಸ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪ್ರಕಾಶ್‌ ರಾಜ್‌ ಮಾತನಾಡಿದರು. ಪ್ರಕಾಶ್‌ ರಾಜ್‌ ಏನೆಲ್ಲ ಹೇಳಿದರು? ಗ್ಯಾರಂಟಿ ಯೋಜನೆ : ಸರಕಾರದ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆಗದಿದ್ದಾಗ ಮಾತ್ರ ನಾವೆಲ್ಲ ಅದನ್ನು ಪ್ರಶ್ನಿಸಬೇಕು. ಅದು ನಮ್ಮ ಕರ್ತವ್ಯ ಎಂದರು. … Read more

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಪ್ರಗತಿ ಪರಿಶೀಲನೆ, ಶಾಸಕಿಯಿಂದ 4 ಪಾಯಿಂಟ್‌ ಸೂಚನೆ

090823 Sharada Puryanaik Meeting at Holehonnuru

SHIVAMOGGA LIVE NEWS | 9 AUGUST 2023 HOLEHONNURU : ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಚಾಲನೆಗೊಳಿಸಿ, ಪೂರ್ಣಗೊಳಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪರ‍್ಯಾನಾಯ್ಕ (Sharada Puryanaik) ಹೇಳಿದರು. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಏನೆಲ್ಲ ಸೂಚನೆ ಕೊಟ್ಟರು? ಪಾಯಿಂಟ್ 1 : ಅಬ್ಬರಘಟ್ಟ ಗ್ರಾಮದ ಕುಡಿಯುವ ನೀರು ಸರಬರಾಜು ಘಟಕ ಸ್ಥಗಿತವಾಗಿದೆ. ನಗರೋತ್ಥಾನ ಯೋಜನೆ ಅಡಿ ಸಮರ್ಪಕ ಶುದ್ಧ ಕುಡಿಯುವ … Read more

ದಿಢೀರ್‌ ವಾಹನ ತಪಾಸಣೆ, ಕ್ಯಾಂಟರ್‌ನಲ್ಲಿದ್ದ ಒಬ್ಬ ಎಸ್ಕೇಪ್‌, ಮತ್ತಿಬ್ಬರು ಅರೆಸ್ಟ್‌, ಕಾರಣವೇನು?

HOSANAGARA-TALUK-NEWS-1.jpg

SHIVAMOGGA LIVE NEWS | 9 AUGUST 2023 HOSANGARA : ಅಕ್ರಮವಾಗಿ ಹೊನ್ನೆಮರದ ತುಂಡುಗಳನ್ನು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದಾಳಿ (Raid) ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಹೊಸನಗರ ತಾಲೂಕು ಸಂಪೆಕಟ್ಟೆ ಹೆಬ್ಬುರುಳಿ ರಸ್ತೆಯಲ್ಲಿ ಕ್ಯಾಂಟರ್‌ ಲಾರಿಯಲ್ಲಿ ಹೊನ್ನೆಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆಗೆ ವಾಹನ ತಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುರೇಶ್‌ ಮತ್ತು ಗುರುಮೂರ್ತಿ ಎಂಬುವವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಶಾಹಿದ್‌ ಎಂಬಾತ ಪರಾರಿಯಾಗಿದ್ದಾನೆ. … Read more

ಭೂತಾನ್‌ ಅಡಿಕೆ, ಕಲ್ಲೂರು ಮೇಘರಾಜ್‌ ಗರಂ, ಆರಗ ಜ್ಞಾನೇಂದ್ರ ವಿರುದ್ಧವು ಆಕ್ರೋಶ

090823 Kalluru Megharaj About Bhuthan Adike to india

SHIVAMOGGA LIVE NEWS | 9 AUGUST 2023 SHIMOGA : ಕೇಂದ್ರ ಸರ್ಕಾರ ಅಡಿಕೆ (Adike) ಆಮದು (Import) ನೀತಿಯನ್ನು ಈ ಕೂಡಲೆ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರತಿವರ್ಷ 17 ಸಾವಿರ ಟನ್ ಅಡಿಕೆಯನ್ನು ಭೂತಾನ್‌ನಿಂದ (Bhutan) ಅಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಇದರಿಂದ ಸಾವಿರಾರು ಅಡಿಕೆ ಬೆಳೆಗಾರರ ಬದುಕುವ ಹಕ್ಕನ್ನು ಕಸಿದಿದೆ … Read more

ನಡು ರಸ್ತೆಯಲ್ಲಿ ಕೆಂಪು ಧ್ವಜ ನೆಟ್ಟು ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ವಿಭಿನ್ನ ರೀತಿಯ ಹೋರಾಟ

080823 Red Flag in Pot hole in Sagara 1

SHIVAMOGGA LIVE NEWS | 8 AUGUST 2023 SAGARA : ಮ್ಯಾನ್‌ ಹೋಲ್‌  ಮುಚ್ಚಳ ಒಡೆದು ಗುಂಡಿಯಾಗಿದ್ದು ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಸ್ಥಳೀಯರು ಗುಂಡಿ ಬಿದ್ದ ಜಾಗದಲ್ಲಿ ಕೆಂಪು ಧ್ವಜ ನೆಟ್ಟು ವಿಭಿನ್ನವಾಗಿ ಪ್ರತಿಭಟನೆ (Protest) ನಡೆಸಿದರು. ಸಾಗರ (Sagara) ನಗರದ ಮಾರ್ಕೆಟ್‌ ರಸ್ತೆಯ ಕೋಮಲ್‌ ಬೇಕರಿ ಎದುರಿನ ರಸ್ತೆಯಲ್ಲಿ ಮ್ಯಾನ್‌ಹೋಲ್‌ ಮುಚ್ಚಳ ಒಡೆದಿದೆ. ಇದರಿಂದ ದೊಡ್ಡ ಹೊಂಡ ನಿರ್ಮಾಣವಾಗಿದೆ. ರಸ್ತೆಯಲ್ಲಿ ಗುಂಡಿ ಇರುವುದು ಗೊತ್ತಾಗದೆ ದ್ವಿಚಕ್ರ … Read more