ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 AUGUST 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಬಡವರ ದುಡ್ಡಲ್ಲಿ ಬಡವರಿಗೆ ಸೌಲಭ್ಯ ನೀಡಿದರೆ ಅದು ತಪ್ಪಲ್ಲ. ಗ್ಯಾರಂಟಿ ಯೋಜನೆಗಳನ್ನು ನಾನು ಸ್ವಾಗತಿಸುತ್ತೇನೆ ಎಂದು ನಟ ಪ್ರಕಾಶ್ ರಾಜ್ (Prakash Raj) ಹೇಳಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗದ ಮಥುರಾ ಪ್ಯಾರಡೈಸ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪ್ರಕಾಶ್ ರಾಜ್ ಮಾತನಾಡಿದರು.
ಪ್ರಕಾಶ್ ರಾಜ್ ಏನೆಲ್ಲ ಹೇಳಿದರು?
ಗ್ಯಾರಂಟಿ ಯೋಜನೆ : ಸರಕಾರದ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಆಗದಿದ್ದಾಗ ಮಾತ್ರ ನಾವೆಲ್ಲ ಅದನ್ನು ಪ್ರಶ್ನಿಸಬೇಕು. ಅದು ನಮ್ಮ ಕರ್ತವ್ಯ ಎಂದರು. ಗ್ಯಾರಂಟಿ ಕೊಟ್ಟ ನಂತರ ಮಹಿಳೆಯರ ಜತೆ ಅವರ ಗಂಡಂದಿರು ಹೊರಗೆ ಬರುತ್ತಿದ್ದಾರೆ. ಇದರಿಂದ ಸರಕಾರದ ಆದಾಯ ಹೆಚ್ಚಾಗುತ್ತಿದೆ. ಒಟ್ಟು ಜನಸಂಖ್ಯೆಯ ಕೇವಲ ಒಂದು ಪ್ರತಿಶತ ಜನರ ಬಳಿ ಮಾತ್ರ ಹಣ ಇದೆ. ಹೀಗಿರುವಾರ ಬಡವರಿಗೆ ಕೊಡುವ ಯೋಜನೆಗಳ ಬಗ್ಗೆ ಏಕೆ ವ್ಯಾಖ್ಯಾನ ನೀಡಬೇಕು ಎಂದರು.
ಪ್ರಧಾನಿಗೆ ಪ್ರಶ್ನಿಸುತ್ತೇನೆ : ಪ್ರಧಾನಿ ಅವರು ನೀಡಿದ ಗ್ಯಾರಂಟಿ ಬಗ್ಗೆ ಪ್ರಶ್ನಿಸಿದರೆ ವಿರೋಧಿಗಳು ಎನ್ನುತ್ತಾರೆ. ನಾನು ಮತ ನೀಡಿದರೂ, ನೀಡದಿದ್ದರೂ ಅವರು ನಮಗೆ ಪ್ರಧಾನಿಗಳೆ. ಹಾಗಾಗಿ ಅವರನ್ನು ಪ್ರಶ್ನಿಸುವ ಹಕ್ಕು ನನಗಿದೆ. ಆದ್ದರಿಂದ ಪ್ರಶ್ನೆ ಮಾಡಿಯೆ ಮಾಡುತ್ತೇನೆ ಎಂದರು.
ಇದನ್ನೂ ಓದಿ- ‘ಮೋದಿ ಸರ್ಕಾರಕ್ಕೆ ಮುಖಭಂಗ, ಬಿಜೆಪಿಯವರಿಗೆ ಕೆಟ್ಟ ಮೇಲೂ ಬುದ್ದಿ ಬಂದಿಲ್ಲ’, ಶಿವಮೊಗ್ಗದಲ್ಲಿ ಆಕ್ರೋಶ
ಪಠ್ಯ ಪರಿಷ್ಕರಣೆ : ಪಠ್ಯಪುಸ್ತಕಗಳ ಪರಿಷ್ಕರಣೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮಕ್ಕಳ ಜೀವನದಲ್ಲಿ ಯಾರು ಆಟ ಆಡುತ್ತಿದ್ದಾರೆ ಎನ್ನುವುದನ್ನು ನಾವು ಆಲೋಚನೆ ಮಾಡಬೇಕು. ರಾಜಕಾರಣಿಗಳು ಪಠ್ಯಪುಸ್ತಕಗಳನ್ನು ತಿರುಚಿದಾಗ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.
ಧರ್ಮ ಉಳಿಯಬೇಕು : ಸೌಜನ್ಯ ಪ್ರಕರಣದಲ್ಲಿ ಕೆಲವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ತನಿಖೆಯ ಭಾಗವಾಗಿದ್ದರೆ, ನಿಜಾಂಶ ತಿಳಿಯುವ ಅವಶ್ಯಕತೆ ಇದ್ದರೆ ಮಾಡಲಿ. ಇದಕ್ಕೆ ಆಕ್ಷೇಪವೇನು ಇಲ್ಲ. ಧರ್ಮಸ್ಥಳ (Dharmastahala), ಧರ್ಮ ಬಿಡಿ ಎಂದು ನಾನು ಹೇಳಲು ಬರುವುದಿಲ್ಲ. ಅಂತಿಮವಾಗಿ ಧರ್ಮ ಉಳಿಯಬೇಕು, ನ್ಯಾಯ ಸಿಗಬೇಕು.
ಇದನ್ನೂ ಓದಿ- ತುಂಗಾ ಎಡದಂಡೆ ನಾಲೆಯಲ್ಲಿ ಕೆಲ ದಿನ ನೀರಿನ ಹರಿವು ಕಡಿಮೆಯಾಗಲಿದೆ, ಕಾರಣವೇನು?
ಹೋಮ ಹವನ : ನನ್ನನ್ನು ಧರ್ಮ ವಿರೋಧಿ ಎನ್ನುವವರು ಸಾಕ್ಷಿ ಸಹಿತ ಮಾತನಾಡಬೇಕು. ನನ್ನ ನಂಬಿಕೆ ಬೇರೆ, ನನ್ನ ಪತ್ನಿಯ ನಂಬಿಕೆ ಬೇರೆ. ಪತ್ನಿಯ ನಂಬಿಕೆಯನ್ನು ವಿರೋಧಿಸುವ ಹಕ್ಕು ನನಗಿಲ್ಲ. ನನ್ನ ಅರ್ಧಾಂಗಿಯನ್ನು ನಾನು ಗೌರವಿಸಬೇಕು. ಇದರಲ್ಲಿ ನನಗೆ ಯಾವುದೆ ಸಮಸ್ಯೆ ಇಲ್ಲ. ನನ್ನ ಪತ್ನಿ ಹೋಗಿ ಪೂಜೆ ಮಾಡಿಸಿ ಬಂದಿದ್ದಾರೆ. ಅದನ್ನು ತಿರುಚಿ ಸುದ್ದಿ ಮಾಡಿದರೆ ಆ ಬಗ್ಗೆ ನಾನು ಉತ್ತರ ನೀಡುವುದಿಲ್ಲ ಎಂದರು.
ಸಂವಾದದಲ್ಲಿ, ಕೆ.ಎಲ್. ಅಶೋಕ್, ಅನನ್ಯ ಶಿವಕುಮಾರ್, ದಲಿತ ಮುಖಂಡ ಹಾಲೇಶಪ್ಪ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ, ಆರ್.ಕೆ. ಕುಮಾರ್ ಇದ್ದರು.