ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 OCTOBER 2023
SHIMOGA : ಚಲಿಸುತ್ತಿದ್ದ ಆಟೋಗೆ (Auto) ಕಾರು ಡಿಕ್ಕಿಯಾಗಿ ಒಂದೂವರೆ ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಶಂಕರಮಠ ರಸ್ತೆಯ ಬಜಾಜ್ ಶೋ ರೂಂ ಮುಂಭಾಗ ಘಟನೆ ಸಂಭವಿಸಿದೆ. ಆಟೋ ಚಾಲಕ ವೆಂಕಟೇಶ್, ದುರ್ಗಪ್ಪ, ಅವರ ಸಂಬಂಧಿ ಸರಸ್ವತಿ ಮತ್ತು ಒಂದೂವರೆ ವರ್ಷದ ಮಗು ಗಾಯಗೊಂಡಿದ್ದಾರೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಆಟೋ ವಿದ್ಯಾನಗರದಿಂದ ಬಾಪೂಜಿನಗರ ಕಡೆಗೆ ತೆರಳುತ್ತಿತ್ತು. ಕಾರು ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ರಾಜಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಕಾರು ಚಾಲಕ ನಂತರ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಮಂಜುನಾಥ್ ಎಂಬುವವರ ವಿರುದ್ಧ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – INSTAದಲ್ಲಿ ಯುವತಿ ನಕಲಿ ಖಾತೆ, ಪ್ರಿಯಕರನ ಮೇಲೆ ಶಂಕೆ, FACEBOOKನಲ್ಲಿ ಗೃಹಿಣಿಯ ತೇಜೋವಧೆ
ಶಿವಮೊಗ್ಗ ಲೈವ್.ಕಾಂ