SHIVAMOGGA LIVE NEWS | 6 SEPTEMBER 2023
SHIMOGA : ಭದ್ರಾ ಜಲಾಶಯದಿಂದ (Bhadra Dam) ನೀರು ಹರಿಸುವ ಕುರಿತು ಸೆ.11ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಸದ್ಯ ಎಡದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು,.
ಮಲವಗೊಪ್ಪದ ಭದ್ರಾ ಕಾಡಾ (Bhadra Cada) ಕಚೇರಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನೀರು ನಿರ್ವಹಣಾ ಸಲಹಾ ಸಮಿತಿ ಸಭೆ ಬಳಿಕ ಸಚಿವ ಮತ್ತು ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯ ನಿರ್ಣಯ ತಿಳಿಸಿದರು.
ಸಚಿವರು ಹೇಳಿದ 4 ಪ್ರಮುಖಾಂಶ
ಸಭೆಯ ಚರ್ಚೆಗಳ ಕುರಿತು ಉಪ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕಮಾರ್ ಅವರ ಗಮನಕ್ಕೆ ತರಲಾಗುತ್ತದೆ. ಸೆ.11ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ.
ಭದ್ರ ಎಡದಂಡೆ ನಾಲೆಯಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ತೀರ್ಮಾನವಾಗಿದೆ. ತಕ್ಷಣದಿಂದಲೆ ನೀರು ನಿಲ್ಲಿಸಲಾಗುತ್ತದೆ. ಬಲದಂಡೆಯಲ್ಲಿ ನೀರಿನ ಪ್ರಮಾಣ ತಗ್ಗಿಸಲಾಗುತ್ತದೆ.
ಇದನ್ನೂ ಓದಿ – ಭದ್ರಾ ಡ್ಯಾಂನಿಂದ 100 ದಿನ ನೀರು, ಅಚ್ಚುಕಟ್ಟು ರೈತರಿಂದ ಅಹೋರಾತ್ರಿ ಧರಣಿ, ರೈತರ ಆಗ್ರಹವೇನು?
ಹೆಚ್ಚು ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಮಳೆ ಪ್ರಮಾಣ ವಾಡಿಕೆಗಿಂತಲು ತುಂಬಾ ಕಡಿಮೆಯಾಗಿದೆ. ಜಲಾಯಶಯದ ಒಳ ಹರಿವು ಸಂಪೂರ್ಣ ಇಳಿಮುಖವಾಗಿದೆ. ಇಂತಹ ಸಂದರ್ಭ ನೀರು ನಿಲ್ಲಿಸಿದರೆ ಆ ಭಾಗದ ರೈತರಿಗೆ ಸಮಸ್ಯೆ, ಹರಿಸಿದರೆ ಈ ಭಾಗದ ರೈತರು ಮತ್ತು ಭವಿಷ್ಯದಲ್ಲಿ ತೊಂದರೆಯಾಗಲಿದೆ.
ಭತ್ತ ಬೆಳೆಯಬಾರದು ಎಂದು ಈ ಮೊದಲೆ ಸೂಚನೆ ನೀಡಲಾಗಿತ್ತು. ಆದರೂ ರೈತರು ಭತ್ತ ಬೆಳೆದಿದ್ದಾರೆ. ಈ ಹಿನ್ನೆಲೆ ಎಲ್ಲವನ್ನು ಪರಿಶೀಲಿಸಲು ನಾಲ್ಕೈದು ದಿನ ಸಮಯ ಬೇಕಿದೆ. ರಾಜ್ಯಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.