SHIVAMOGGA LIVE NEWS | 28 ಮಾರ್ಚ್ 2022
ಲಾಕ್ ಮಾಡಿ ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕು ಒಂದೇ ಗಂಟೆಯಲ್ಲಿ ನಾಪತ್ತೆಯಾಗಿದೆ. ಶಿವಮೊಗ್ಗದಲ್ಲಿ RML ನಗರದಲ್ಲಿ ಘಟನೆ ಸಂಭವಿಸಿದೆ.
ಮೊಹಮ್ಮದ್ ಶೋಯೆಬ್ ಎಂಬುವವರಿಗೆ ಸೇರಿದ ಹೀರೊ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ಮಾರ್ಚ್ 18ರಂದು ರಾತ್ರಿ ಘಟನೆ ಸಂಭವಿಸಿದೆ.
ಶೋಯೆಬ್ ಅವರು ಮೆಕಾನಿಕ್ ಕೆಲಸ ಮಾಡುತ್ತಾರೆ. ಮಾರ್ಚ್ 18ರಂದು ರಾತ್ರಿ 9.30ಕ್ಕೆ ಮನೆ ಮುಂದೆ ತಂದು ನಿಲ್ಲಿಸಿದ್ದಾರೆ. 10.30ರ ಹೊತ್ತಿಗೆ ಮನೆಯಿಂದ ಹೊರ ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು.
ಎಲ್ಲೆಡೆ ಹುಡುಕಾಡಿದ ಶೋಯೆಬ್ ಅವರು ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200