ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 ಮಾರ್ಚ್ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬೊಲೇರೋ ಗೂಡ್ಸ್ ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಐದು ಮಂದಿ ಗಾಯಗೊಂಡಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಭದ್ರಾವತಿ ತಾಲೂಕು ಬಸವನಗುಡಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬೊಲೇರೋ ಗೂಡ್ಸ್ ವಾಹನದ ಚಾಲಕ ನೂರ್ ಅಹಮ್ಮದ್ (44) ಮೃತಪಟ್ಟಿದ್ದಾರೆ.
ಹೇಗಾಯ್ತು ಅಪಘಾತ?
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಗಡಿ ರಂಗಾಪುರ, ಕಾಳೇನಹಳ್ಳಿಯ ನಿವಾಸಿಗಳು ಶಿವಮೊಗ್ಗಕ್ಕೆ ಬಂದು ಹಿಂತಿರುಗುತ್ತಿದ್ದರು. ಶನಿವಾರ ರಾತ್ರಿ 8.20ರ ಹೊತ್ತಿಗೆ ತಮ್ಮೂರಿಗೆ ಮರಳುತ್ತಿದ್ದರು. ಭದ್ರಾವತಿಯ ಬಸವನಗುಡಿ ಗ್ರಾಮದ ಸಂದ್ಯಾದೀಪ ವೃದ್ಧಾಶ್ರಮದ ಮುಂದೆ ಅಪಘಾತ ಸಂಭವಿಸಿದೆ.
ಅಂತರಗಂಗೆ ಕಡೆಯಿಂದ ಬಂದ ಬೊಲೇರೋ ಪಿಕಪ್ ವಾಹನ ಅಜ್ಜಂಪುರ ಕಡೆಗೆ ತೆರಳುತ್ತಿದ್ದ ಬೊಲೋರೋಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಅಜ್ಜಂಪುರ ಕಡೆಗೆ ತೆರಳುತ್ತಿದ್ದ ಬೊಲೇರೋ ಪಿಕಪ್ ವಾಹನದ ಚಾಲಕ ನೂರ್ ಅಹಮ್ಮದ್ ಅವರಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಗಡಿರಂಗಾಪುರದ ಗಂಗಾಧರ, ಮಂಜಪ್ಪ, ಜನಪ್ಪ, ತಿಮ್ಮೇಶ, ಕಾಳೇನಹಳ್ಳಿಯ ತೌಫಿಕ್ ಎಂಬುವವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಭದ್ರಾವತಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200