ಶಿವಮೊಗ್ಗ ಲೈವ್.ಕಾಂ | SHIMOGA | 14 ಮಾರ್ಚ್ 2020
ಕರೋನ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೋಂಕು ಹರಡದಂತೆ ತಡೆಯಲು ಚಿತ್ರಮಂದಿರಗಳು, ಮಾಲ್’ಗಳು ವಿವಿಧ ಉದ್ಯಮಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಿವಮೊಗ್ಗದಲ್ಲಿ ವಿವಿಧ ಉದ್ಯಮಗಳು ಬಂದ್ ಆಗುತ್ತಿವೆ. ಜೊತೆಗೆ ಹಲವು ಜಾತ್ರೆ, ಸಮಾರಂಭ, ಕಾರ್ಯಾಗಾರಗಳನ್ನು ಕೂಡ ಬಂದ್ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಏನೇನೆಲ್ಲ ಬಂದ್ ಆಗಲಿದೆ?
ಜಿಲ್ಲಾದ್ಯಂತ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಿಗೆ ಮಾರ್ಚ್ 14ರಿಂದ 28ರವರೆಗೆ ಬೇಸಿಗೆ ರಜೆ ಘೋಷಿಸಿ ಡಿಡಿಪಿಐ ಎಂ.ಎನ್.ರಮೇಶ್ ಆದೇಶ.
7 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ದಿನವೆ ಪರೀಕ್ಷೆ ನಡೆಯಲಿದೆ. ಉಳಿದ ದಿನ ರಜೆ ಘೋಷಣೆ.
ನಿಗದಿಯಂತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಬಯಸಿದರೆ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ.
ಮಾರ್ಚ್ 28ರವರೆಗೆ ಸರ್ಕಾರಿ ಮತ್ತು ಅನುದಾನಿತ ಕಾಲೇಜು, ಪಾಲಿಟೆಕ್ನಿಕ್’ಗಳಿಗೆ ರಜೆ ಘೋಷಣೆ
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ಮಾರ್ಚ್ 14ರಿಂದ 15 ದಿನ ರಜೆ ಘೋಷಣೆ. ವಿವಿಯ 30ನೇ ಘಟಿಕೋತ್ಸವ ಮುಂದೂಡಿಕೆ.
ಮುಕ್ತ ವಿಶ್ವವಿದ್ಯಾಲಯದ ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ಸಂಪರ್ಕ ತರಗತಿ, ಪರೀಕ್ಷೆ ಮುಂದೂಡಿಕೆ
ಪೂರ್ವ ನಿಗದಿತ ಸರ್ಕಾರಿ ಕಾರ್ಯಕ್ರಮಗಳು ರದ್ದು
ಅಮೃತ್ ನೋನಿ ದಶಮಾನೋತ್ಸವ ಕಾರ್ಯಕ್ರಮ ಮುಂದೂಡಿಕೆ
ಶ್ರೀ ಕ್ಷೇತ್ರ ಹೊಂಬುಜದಲ್ಲಿ ಮಾ.14ರಿಂದ ನಿಗದಿಯಾಗಿದ್ದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ಮಹಾರಥೋತ್ಸವವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೆ ಒಂದು ವಾರದವರೆಗೆ ವಸತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಆಡಳಿತಾಧಿಕಾರಿ ತಿಳಿಸಿದ್ದಾರೆ.

ಸಾಗರದಲ್ಲಿರುವ ಶ್ರೀ ಕ್ಷೇತ್ರ ವರದ ಹಳ್ಳಿಯ ಶ್ರೀಧರಾಶ್ರಮದಲ್ಲಿ ವಸತಿ ವ್ಯವಸ್ಥೆ ತಾತ್ಕಾಲಿಕ ಬಂದ್.
ಕುವೆಂಪು ರಂಗಮಂದಿರದಲ್ಲಿ ಮಾ.14ರಂದು ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಇಓಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]