₹82,00,15,712 ವಂಚನೆ, ದೇಶಾದ್ಯಂತ 352 ಕೇಸ್‌, ಶಿವಮೊಗ್ಗದಲ್ಲಿ 3 ಅರೆಸ್ಟ್‌, ಕೋಟಿ ಕೋಟಿ ಮೋಸ ಹೇಗಾಯ್ತು?

Three-nabbed-by-cyber-crime-police-for-Mule-Account

ಶಿವಮೊಗ್ಗ: ಸಾರ್ವಜನಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಅವುಗಳನ್ನು ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ ಮಟ್ಟದ ಜಾಲವನ್ನು (cyber fraud gang) ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಕೋಟ್ಯಂತರ ರೂಪಾಯಿ ವಂಚನೆಯ ದಂಧೆ ಬೆಳಕಿಗೆ ಬಂದಿದೆ. ವಿಲ್ಸನ್.ವಿ ಎಂಬುವವರಿಗೆ ಕಮಿಷನ್ ಆಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿತ್ತು. ನಂತರ ಆರೋಪಿ ಜಗದೀಶ ಎಂಬಾತ ವಿಲ್ಸನ್ ಅವರಂತೆ ನಟಿಸಿ, ಆ ಖಾತೆಯನ್ನು ಲಕ್ಷಾಂತರ ರೂಪಾಯಿ ವಂಚನೆಯ … Read more

ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್‌ ಮಿಸ್ಸಿಂಗ್‌, ಆಗಿದ್ದೇನು?

bike theft reference image

ಶಿವಮೊಗ್ಗ: ನಗರದ ರವೀಂದ್ರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ (Yamaha bike) ಒಂದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ರವೀಂದ್ರನಗರ 6ನೇ ಕ್ರಾಸ್ ನಿವಾಸಿ ಸಂದೀಪ್ ಕೆ.ಬಿ. ಎಂಬುವವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಅವರು ಫೆಬ್ರವರಿ 15ರಂದು ರಾತ್ರಿ 8 ಗಂಟೆಗೆ ಕೆಲಸ ಮುಗಿಸಿ ತಮ್ಮ ಯಮಹಾ ಬೈಕನ್ನು ರವೀಂದ್ರನಗರದ ಮನೆ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದರು. ಮರುದಿನ ಮಧ್ಯಾಹ್ನ 2 ಗಂಟೆಗೆ ಬಂದು ನೋಡಿದಾಗ ಬೈಕ್ … Read more

ಶಿವಮೊಗ್ಗದಲ್ಲಿ ವಿದ್ಯಾರ್ಥಿ ಹತ್ಯೆ ಕೇಸ್‌, ಶಾಸಕ ಚನ್ನಸಬಪ್ಪ ಗರಂ, ಏನಂದ್ರು ಎಂಎಲ್‌ಎ?

MLA-SN-Channabasappa-React-about-Sanketh-issue

ಶಿವಮೊಗ್ಗ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶವಾಗಾರದಲ್ಲಿ ಸಂಕೇತ್‌ ಅವರ ಮೃತದೇಹದ ಅಂತಿಮ ದರ್ಶನ ಪಡೆದರು. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. (police) ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳಿಗ ಪ್ರತಿಕ್ರಿಯೆ ನೀಡಿದರು. ವಿಶೇಷ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನ ಮೇಲೆ ಗುಂಪೊಂದು ಬಂದು ದಾಳಿ ನಡೆಸಿ ಕೊಲೆ ಮಾಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಸೂಳೆಬೈಲು ಭಾಗವು ಮೊದಲಿನಿಂದಲೂ ಸೂಕ್ಷ್ಮ ಪ್ರದೇಶವಾಗಿದೆ. … Read more

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹತ್ಯೆ ಕೇಸ್‌, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ, ಏನಂದ್ರು?

SP-Nikhil.B-IPS-react-to-media-about-sanketh-case-in-Shimoga.

ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಊರಗಡೂರಿನಲ್ಲಿ ಅಪ್ರಾಪ್ತ ಬಾಲಕನೊಬ್ಬನ ಕೊಲೆಯಾಗಿದೆ. ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ಸಂಜೆ ಈ ದುರ್ಘಟನೆ ನಡೆದಿದೆ. ಗಲಾಟೆ ಬಿಡಿಸಲು ಹೋದ ಬಾಲಕನ ಎದೆಭಾಗಕ್ಕೆ ಜೋರಾಗಿ ಗುದ್ದಿದ ಪರಿಣಾಮ, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಸಹ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ (SP Nikhil) ತಿಳಿಸಿದ್ದಾರೆ. ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌, ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲರೂ … Read more

ಊರಗಡೂರಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹತ್ಯೆ, ಸ್ಥಳೀಯರ ಆಕ್ರೋಶ, ಆಸ್ಪತ್ರೆಗೆ ಎಂಎಲ್‌ಎ ದೌಡು

urugaduru-sanketh-case-police-at-mc-gann-hospital

ಶಿವಮೊಗ್ಗ: ಊರಗಡೂರಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಂಕೇತ್ (15) ಎಂಬಾತನ ಹತ್ಯೆಯಾಗಿದೆ (tragic death). ಮೂವರು ಅಪ್ರಾಪ್ತರು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ರಾತ್ರಿ 8 ಗಂಟೆ ಹೊತ್ತಿಗೆ ಮನೆಗೆ ತೆರಳುವಾಗ ಘಟನೆ ನಡೆದಿದೆ. ಸಂಕೇತ್‌ನ ಸ್ನೇಹಿತನ ಜೊತೆಗೆ ಮೂವರು ಅಪ್ರಾಪ್ತರು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ಸಂಕೇತ್‌ನ ಎದೆಗೆ ಗುದ್ದಿದ್ದಾರೆ. ಆಗ ಆತ ಸ್ಥಳದಲ್ಲೇ ಕುಸಿದು ಬಿದಿದ್ದಾನೆ. ಕೂಡಲೆ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಈ ವೇಳೆಗಾಗಲೇ ಸಂಕೇತ್‌ ಮೃತಪಟ್ಟಿದ್ದ … Read more

ಒಂದು ಗಂಟೆ ಬಿಟ್ಟು ನೆಹರೂ ರಸ್ತೆಗೆ ಬಂದ ಖಾಸಗಿ ಸಂಸ್ಥೆ ಉದ್ಯೋಗಿಗೆ ಕಾದಿತ್ತು ಶಾಕ್

Auto-in-Shimoga-Nehru-road

ಶಿವಮೊಗ್ಗ: ನೆಹರೂ ರಸ್ತೆಯಲ್ಲಿ ಬಟ್ಟೆ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ (bike stolen) ಮಾಡಲಾಗಿದೆ. ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಹೋಗಿ ಒಂದೇ ಗಂಟೆಯಲ್ಲಿ ಬೈಕ್‌ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೊಮ್ಮನಕಟ್ಟೆ ನಿವಾಸಿ ಪ್ರೀತಮ್ ಎಂಬುವವರು ಫೆಬ್ರವರಿ 6ರ ರಾತ್ರಿ 9:45ಕ್ಕೆ ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ನೆಹರೂ ರಸ್ತೆಯ ಬಟ್ಟೆ ಅಂಗಡಿ ಮುಂದೆ ನಿಲ್ಲಿಸಿ ಹೋಗಿದ್ದರು. ರಾತ್ರಿ 10:45ಕ್ಕೆ ವಾಪಸ್ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಪತ್ತೆಯಾಗಿಲ್ಲ. ಬೈಕ್‌ನ ಮೌಲ್ಯದ … Read more

ಗೋಪಿ ಸರ್ಕಲ್‌ ಬಳಿ ಬಸ್‌ ಅಡ್ಡಗಟ್ಟಿ ಡ್ರೈವರ್‌ನನ್ನು ಕೆಳಗೆಳೆದು ಹಲ್ಲೆ, ಪೆಟ್ರೋಲ್‌ ಹಾಕಿ ಸುಡುವ ಬೆದರಿಕೆ

Crime-News-General-Image

ಶಿವಮೊಗ್ಗ: ಗೋಪಿ ಸರ್ಕಲ್ ಬಳಿ ಖಾಸಗಿ ಬಸ್ ಚಾಲಕ (bus driver) ಹಾಗೂ ನಿರ್ವಾಹಕರ ನಡುವೆ ನಡೆದ ಗಲಾಟೆ ನಡೆದು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಲಾಗಿದೆ. ಈ ಸಂಬಂಧ ಬಸ್ಸಿನ ಚಾಲಕ ಸೇರಿದಂತೆ ನಾಲ್ವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಘಟನೆ? ಮಂಜುನಾಥ್ ಎಂಬುವರು ತಮ್ಮ ಬಸ್ಸನ್ನು ಕಂಡಕ್ಟರ್ ವಿಜಯಕುಮಾರ್ ಜೊತೆ ಚಾಲನೆ ಮಾಡಿಕೊಂಡು ಗೋಪಿ ಸರ್ಕಲ್ ಬಳಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಸಿಟಿ ಬಸ್ ಚಾಲಕ … Read more

ದಾಖಲೆಯು ಡೂಪ್ಲಿಕೇಟ್‌, ಜಾಮೀನು ಕೊಡಲು ಬಂದ ವ್ಯಕ್ತಿಯು ಡ್ಯೂಪ್ಲಿಕೇಟ್‌, ದಾಖಲಾಯ್ತು ಕೇಸ್?‌ ಆಗಿದ್ದೇನು?

Shimoga District Court

ಶಿವಮೊಗ್ಗ: ನಕಲಿ ದಾಖಲೆ (fake documents) ಸೃಷ್ಟಿಸಿ ಹಾಗೂ ವ್ಯಕ್ತಿಯೊಬ್ಬರ ನಟಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಆರೋಪಿಯೊಬ್ಬರಿಗೆ ಜಾಮೀನು ಕೊಡಿಸಿ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಅವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? 2019 ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಮೂರನೇ ಆರೋಪಿ ಮಧು ಎಂಬುವವರ ಪರವಾಗಿ ಕೆ. ರಾಜಣ್ಣ ಎಂಬುವವರ ಹೆಸರಿನಲ್ಲಿ … Read more

ಶಿವಮೊಗ್ಗದ ಗೋಲ್ಡ್ ಶೋ ರೂಂನಲ್ಲಿ 6 ಲಕ್ಷದ ಸರ ಮಿಸ್ಸಿಂಗ್‌, CCTV ಚೆಕ್‌ ಮಾಡಿದಾಗ ಸತ್ಯ ಬಯಲು

200123 Police Jeep With Light jpg

ಶಿವಮೊಗ್ಗ: ಬಿ.ಹೆಚ್.ರಸ್ತೆಯಲ್ಲಿರುವ ಪ್ರಸಿದ್ಧ ಭೀಮಾ ಗೋಲ್ಡ್ ಶೋರೂಮ್‌ಗೆ ಬಂದ ಮಹಿಳೆಯೊಬ್ಬರು, ಮಾಂಗಲ್ಯ ಸರವನ್ನು (gold chain) ಅದಲು ಬದಲು ಮಾಡಿ ಸುಮಾರು ₹6.32 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಫೆಬ್ರವರಿ 18ರ ಬೆಳಗ್ಗೆ ಘಟನೆ ನಡೆದಿದ್ದು, ಮ್ಯಾನೇಜರ್ ಸತೀಶ್ ಬಿ.ಎನ್ ಅವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶೋ ರೂಂನಲ್ಲಿ ಆಗಿದ್ದೇನು? ಸುಮಾರು ಒಂದು ವರ್ಷದ ಮಗುವಿನೊಂದಿಗೆ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೋರೂಮ್‌ಗೆ ಬಂದ 32 … Read more