ಊರಗಡೂರಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹತ್ಯೆ, ಸ್ಥಳೀಯರ ಆಕ್ರೋಶ, ಆಸ್ಪತ್ರೆಗೆ ಎಂಎಲ್‌ಎ ದೌಡು

Published On : ಫೆಬ್ರವರಿ 24, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಊರಗಡೂರಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಂಕೇತ್ (15) ಎಂಬಾತನ ಹತ್ಯೆಯಾಗಿದೆ (tragic death). ಮೂವರು ಅಪ್ರಾಪ್ತರು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ರಾತ್ರಿ 8 ಗಂಟೆ ಹೊತ್ತಿಗೆ ಮನೆಗೆ ತೆರಳುವಾಗ ಘಟನೆ ನಡೆದಿದೆ. ಸಂಕೇತ್‌ನ ಸ್ನೇಹಿತನ ಜೊತೆಗೆ ಮೂವರು ಅಪ್ರಾಪ್ತರು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ಸಂಕೇತ್‌ನ ಎದೆಗೆ ಗುದ್ದಿದ್ದಾರೆ. ಆಗ ಆತ ಸ್ಥಳದಲ್ಲೇ ಕುಸಿದು ಬಿದಿದ್ದಾನೆ. ಕೂಡಲೆ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಈ ವೇಳೆಗಾಗಲೇ ಸಂಕೇತ್‌ ಮೃತಪಟ್ಟಿದ್ದ ಎಂದ ವೈದ್ಯರು ತಿಳಿಸಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಮತ್ತು ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಸ್ಥಳದಲ್ಲಿ ಭೇಟಿ ನೀಡಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

urugaduru-sanketh-case-police-at-mc-gann-hospital

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಗುಂಪುಗೂಡಿದ ಜನ

ಇನ್ನು, ವಿಷಯ ತಿಳಿಯುತ್ತಿದ್ದಂತೆ ಸಂಕೇತ್‌ನ ಸಂಬಂಧಿಕರು ಮತ್ತು ಊರುಗಡೂರಿನ ನಿವಾಸಿಗಳು ಮೆಗ್ಗಾನ್‌ ಆಸ್ಪತ್ರೆಗೆ ದೌಡಾಯಿಸಿದರು. ಸಂಕೇತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿಯು ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. ಇಂದು ಬೆಳಗ್ಗೆ ಸಂಕೇತ್‌ನ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಆಸ್ಪತ್ರೆಗೆ ಶಾಸಕ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.‌ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಅವರು ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶವಾಗಾರದಲ್ಲಿ ಸಂಕೇತ್‌ನ ಅಂತಿಮ ದರ್ಶನ ಪಡೆದರು. ಅಲ್ಲದೆ ಅವರ ಕುಟುಂಬದವರ ಜೊತೆಗೆ ಮಾತುಕತೆ ನಡೆಸಿದರು. ಇನ್ನು, ಗಾಯಗೊಂಡು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿರುವ ಸಂಕೇತ್‌ನ ಸ್ನೇಹಿತನ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ – ಒಂದು ಗಂಟೆ ಬಿಟ್ಟು ನೆಹರೂ ರಸ್ತೆಗೆ ಬಂದ ಖಾಸಗಿ ಸಂಸ್ಥೆ ಉದ್ಯೋಗಿಗೆ ಕಾದಿತ್ತು ಶಾಕ್

ಸೂಚನೆ: ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015, ಸೆಕ್ಷನ್ 74: ಅಪರಾಧದಲ್ಲಿ ಭಾಗಿಯಾದ ಅಪ್ರಾಪ್ತರ ಹೆಸರು, ವಿಳಾಸ ಅಥವಾ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಆದ್ದರಿಂದ ಈ ಸುದ್ದಿಯಲ್ಲಿ ಸಂತ್ರಸ್ತ ಬಾಲಕನ ಹಸರು ಹೊರತು ಉಳಿದ ವಿವರಣೆಗಳನ್ನು ಪ್ರಕಟಿಸುತ್ತಿಲ್ಲ.

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 24, 2026

Leave a Comment