ಇಕ್ಕೇರಿ ಜೋಡಿ ಕೊಲೆ ಹಂತಕನ ಕಾಲಿಗೆ ಶಿವಮೊಗ್ಗ ಪೊಲೀಸರಿಂದ ಫೈರಿಂಗ್, ಹೇಗಾಯ್ತು ಗೊತ್ತಾ ಘಟನೆ?

201020 Sagara Police Firing in Ikkeri Double Murder Case 1

ಶಿವಮೊಗ್ಗ ಲೈವ್.ಕಾಂ | SAGARA NEWS | 20 ಅಕ್ಟೋಬರ್ 2020 ಜಿಲ್ಲೆಯಲ್ಲಿ ಪೊಲೀಸರ ಬಂದೂಕು ಮತ್ತೊಮ್ಮೆ ಸದ್ದು ಮಾಡಿದೆ. ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಸಾಗರದಲ್ಲಿ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಆರೋಪಿ ಭರತ್‌ ಎಂಬಾತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿ ಭರತ್ ಪೊಲೀಸ್ ಸಿಬ್ಬಂದಿ ಒಬ್ಬರ ಮೇಲೆ ಹಲ್ಲೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಯಾರಿದು ಭರತ್? ಇಕ್ಕೇರಿ ಸಮೀಪ ಇತ್ತೀಚೆಗೆ ತಾಯಿ ಮತ್ತು ಮಗನ ಕೊಲೆಯಾಗಿತ್ತು. ಈ ಜೋಡಿ … Read more

ಆನವಟ್ಟಿ ಪೊಲೀಸರಿಂದ ಇಬ್ಬರು ಮನೆಗಳ್ಳರ ಬಂಧನ, ಒಂದು ಲಕ್ಷದ ಚಿನ್ನಾಭರಣ ವಶ

181020 House Thieves Arrest in Anavatti 1

ಶಿವಮೊಗ್ಗ ಲೈವ್.ಕಾಂ | SORABA CRIME NEWS | 18 ಅಕ್ಟೋಬರ್ 2020 ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಆನವಟ್ಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರಿಂದ ಒಂದು ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜಡೆ ಗ್ರಾಮದ ಪವನ್ ಕುಮಾರ್ (19) ಮತ್ತು ಸಂಜಯ್ (20) ಬಂಧಿತರು. ಇವರ ಬಂಧನದಿಂದಾಗಿ ಮೂರು ಮನೆಗಳ್ಳತನ ಪ್ರಕರಣಗಳು ಬಯಲಾಗಿವೆ. ಬಂಧಿತರಿಂದ 1.12 ಲಕ್ಷ ಮೌಲ್ಯದ 28 ಗ್ರಾಂ ಚಿನ್ನಾಭರಣ, 4 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು … Read more

ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಚಾಲನೆ, ಪ್ರಶ್ನೆ ಮಾಡಿದ ಹೆಡ್ ಕಾನ್ಸ್‌ಟೇಬಲ್‌ ಕೊಲೆಗೆ ಯತ್ನ

Tunga Nagara Police station building

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 18 ಅಕ್ಟೋಬರ್ 2020 ಅಡ್ಡದಿಡ್ಡಿಯಾಗಿ ವಾಹನ ಚಲಾಯಿಸುತ್ತಿದ್ದವರನ್ನು ತಡೆದು ಪ್ರಶ್ನಿಸಿದ್ದಕ್ಕೆ ರೌಡಿ ಶೀಟರ್‍ ಮತ್ತು ಆತನ ಸಹಚರರು ಪೊಲೀಸ್ ಸಿಬ್ಬಂದಿ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಹತ್ಯೆಗೆ ಪ್ರಯತ್ನಿಸಿದ್ದು, ಪೊಲೀಸ್ ಜೀಪ್ ಬರುವುದನ್ನು ಕಂಡು ಪರಾರಿಯಾಗಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆ ಮುಖ್ಯ ಪೇದೆ ಅರುಣ್ ಕೆ.ಎಂ ಅವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನಡೆಯುತ್ತಿದ್ದು ಸದ್ಯ … Read more

ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ್ದ ದರೋಡೆಕೋರರು ಪೊಲೀಸ್ ಬಲೆಗೆ

181020 Soraba Robbers Arrest 1

ಶಿವಮೊಗ್ಗ ಲೈವ್.ಕಾಂ | SORABA NEWS | 18 ಅಕ್ಟೋಬರ್ 2020 ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದ ದರೋಡೆಕೋರರ ತಂಡದ ಹೆಡೆಮುರಿ ಕಟ್ಟುವಲ್ಲಿ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿಯ ಅಕ್ಕಿ ಆಲೂರು ಪ್ರಶಾಂತ್ (20),          ಜಡೆ ಮಂಗಾಪುರದ ಪ್ರಶಾಂತ್ (20), ಮೈಸೂರಿನ ಗಣೇಶ್ (22) ಬಂಧಿತರು. ಅಕ್ಟೋಬರ್ 14ರಂದು ಛತ್ರದಹಳ್ಳಿಯಲ್ಲಿ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದರೋಡೆ ಮಾಡಿದ್ದರು. ಹಸು ಖರೀದಿ ನೆಪದಲ್ಲಿ ಮನೆಯೊಂದಕ್ಕೆ ತೆರಳಿದ … Read more

ಹೆಲ್ಮೆಟ್ ಧರಿಸಿ ಮನೆಯೊಳಗೆ ನುಗ್ಗಿದರು, ಮಹಿಳೆಯ ಮಾಂಗಲ್ಯ ಸರ ಕಿತ್ತೊಯ್ದರು

police jeep

ಶಿವಮೊಗ್ಗ ಲೈವ್.ಕಾಂ | RIPPONPETE NEWS | 17 ಅಕ್ಟೋಬರ್ 2020 ಹಾಡಹಗಲು ಮನೆಯೊಳಗೆ ನುಗ್ಗಿದ ಇಬ್ಬರು ಅಪರಿಚಿತರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಬೀಡಿನಲ್ಲಿ ಘಟನೆ ಸಂಭವಿಸಿದೆ. ಜಯಲಕ್ಷ್ಮಿ (73) ಎಂಬುವವರು ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಮಾಂಗಲ್ಯ ಸರದ ಮೌಲ್ಯ 1.10 ಲಕ್ಷ ಎಂದು ಅಂದಾಜಿಸಲಾಗಿದೆ. ವ್ಯಾಪಾರಕ್ಕೆ ಬಂದವರದ್ದೇ ಕೃತ್ಯಾನಾ? ಒಂದೆರಡು ದಿನದ ಹಿಂದೆ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರನ್ನು ತಮ್ಮನ್ನು ವ್ಯಾಪಾರಿಗಳು ಎಂದು ಪರಿಚಯಿಸಿಕೊಂಡಿದ್ದರು. ಅವರೆ ಈ … Read more

ಶನಿಮಹಾತ್ಮ ದೇವಸ್ಥಾನದ ಹುಂಡಿ ಹಣ, ದೇವರ ಬೆಳ್ಳಿ ವಸ್ತು ಕದ್ದರು ಅರೆಸ್ಟ್

131020 RML Nagara Temple Theft 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020 ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ಶನಿಮಹಾತ್ಮ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇಬ್ಬರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಅಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ. ಬುದ್ಧನಗರದ ವಸೀಮ್ ಅಕ್ರಂ (19), ರಾಗಿಗುಡ್ಡ ನಿವಾಸಿ ಮೊಹಮ್ಮದ್ ಕರೀಂ (19) ಬಂಧಿತರು. ಇವರು ಹಣ್ಣಿನ ವ್ಯಾಪಾರಿಗಳು. ದೇವಸ್ಥಾನದ ಶಟರ್ ಮುರಿದು 15 ಸಾವಿರ ರೂ. ಕಾಣಿಕೆ ಹಣ, ಗರ್ಭಗುಡಿಯ ಬೀರುವಿನಲ್ಲಿದ್ದ 5 ಸಾವಿರ … Read more

ಕುವೆಂಪು ರಸ್ತೆಯಲ್ಲಿ ವಿದ್ಯುತ್ ಶಾಕ್ ಒಳಗಾಗಿದ್ದ ಲೈನ್ಮನ್ ಸಾವು

091020 current shock for power man in shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2020 ಕುವೆಂಪು ರಸ್ತೆಯಲ್ಲಿ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ತೀವ್ರ ಗಾಯಗೊಂಡಿದ್ದ ಲೈನ್‍ಮನ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿದ್ಯಾನಗರದ ಉಮಾಶಂಕರ್ (42) ಮೃತರು. ಅಕ್ಟೋಬರ್ 8ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ 11 ಕೆ.ವಿ. ವಿದ್ಯುತ್ ಲೈನ್ ರಿಪೇರಿ ಮಾಡುತ್ತಿದ್ದರು. ಈ ವೇಳೆ ವಿದ್ಯತ್ ಶಾಕ್‍ನಿಂದಾಗಿ ಕಂಬದ ಮೇಲೆಯೆ ಸಿಕ್ಕಿಬಿದ್ದಿದ್ದರು. ಅಗ್ನಿಶಾಮಕ ಸಿಬ್ಬಂದಿ ಉಮಾಶಂಕರ್ ಅವರನ್ನು ಕಂಬದ ಮೇಲಿಂದ ರಕ್ಷಿಸಿ, … Read more

ಮೊಬೈಲ್ ರೀಚಾರ್ಜ್ ಮಾಡ್ತೀವಿ ಅಂತಾ ಕೋಟಿ ಕೋಟಿ ಟೋಪಿಯ ಆರೋಪ, ಏನಿದು? ವಂಚನೆ ಆಗಿದ್ದು ಹೇಗೆ?

151020 Save Recharge Fraud Case 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020 ಸೇವ್ ರೀಚಾರ್ಜ್ ಹೆಸರಿನ ವೆಬ್‍ಸೈಟ್ ಒಂದು ಗ್ರಾಹಕರಿಗೆ ಟೋಪಿ ಹಾಕಿದೆ. ಲಕ್ಷಾಂತರ ಜನರು ಕೋಟ್ಯಂತರ ರುಪಾಯಿ ಕಳೆದುಕೊಂಡಿದ್ದಾರೆ. ತಮ್ಮ ಹಣ ವಾಪಸ್ ಕೊಡಿಸುವಂತೆ ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ಜಾಹೀರಾತು ನಂಬಿ ಹಲವರು ಹಣ ಹೂಡಿಕೆ ಮಾಡಿದ್ದರು. 1250 ರೂ.ಗೆ ಒಂದು ವರ್ಷಕ್ಕೆ ಮೊಬೈಲ್‍ ರೀಚಾರ್ಜ್ ಮಾಡಿಕೊಳ್ಳಬಹುದು ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು. ಇದನ್ನು … Read more

ಶಿವಮೊಗ್ಗ ಗಾಂಧಿ ಬಜಾರ್ ಬಳಿ ದರೋಡೆಗೆ ಸಂಚು, ಪಿಸ್ತೂಲು ಸಹಿತ ಸಿಕ್ಕಿಬಿದ್ದ ಅಂತರ ಜಿಲ್ಲಾ ದರೋಡೆಕೋರರು

151020 Robbers Arrest in Shimoga Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 15 ಅಕ್ಟೋಬರ್ 2020 ಶಿವಮೊಗ್ಗದ ಗಾಂಧಿ ಬಜಾರ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಅಂತರ ಜಿಲ್ಲಾ ದರೋಡೆಕೋರರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಒಂದು ಪಿಸ್ತೂಲು, ನಾಲ್ಕು ಗುಂಡು, ಒಂದು ಚಾಕು, ನಾಲ್ಕು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮಧ್ಯಪ್ರದೇಶ ಮೂಲದ ಬಳ್ಳಾರಿಯ ಮೋತಿ ಸರ್ಕಲ್ ನಿವಾಸಿ ಸುರೇಶ್ ಸಿಂಗ್ (20), ಬಳ್ಳಾ ಪೋರ್ಟ್ ರಸ್ತೆ ನಿವಾಸಿ ರಣವೀರ್ ಸಿಂಗ್ (34), … Read more

ಆಂಧ್ರದಿಂದ ಹಿಡಿದು ತಂದರು, ಶಿವಮೊಗ್ಗದಲ್ಲಿ ಲಕ್ಷ ಲಕ್ಷಕ್ಕೆ ಮಾರಲು ಯತ್ನಿಸಿದರು, ಪುರದಾಳು ಬಳಿ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದರು

131020 Tortoise Sale Arrest in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020 ನಕ್ಷತ್ರ ಆಮೆ ಮಾರಾಟಕ್ಕೆ ಪ್ರಯತ್ನಿಸಿದ ನಾಲ್ಕು ಮಂದಿಯನ್ನು ಶಿವಮೊಗ್ಗದ ಅರಣ್ಯ ಇಲಾಖೆ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ. ಇವರು ಆಮೆ ಮಾರಾಟಕ್ಕೆ ಆಂಧ್ರ ಪ್ರದೇಶದಿಂದ ಶಿವಮೊಗ್ಗಕ್ಕೆ ಬಂದಿದ್ದರು. 50 ಲಕ್ಷಕ್ಕೆ ಡೀಲ್ ನಕ್ಷತ್ರ ಆಮೆ ಮಾರಾಟಕ್ಕೆ ಡೀಲ್ ರೆಡಿಯಾಗಿದ್ದು. ಸುಮಾರು 50 ಲಕ್ಷ ರುಪಾಯಿಗೆ ಆಮೆಯ ಮಾರಾಟಕ್ಕೆ ಯೋಜಿಸಲಾಗಿತ್ತು. ಆದರೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾದ ಅಧಿಕಾರಿಗಳು ದಾಳಿ … Read more