BREAKING NEWS | ಶಿವಮೊಗ್ಗದಲ್ಲಿ ಪೊಲೀಸರಿಂದ ಫೈರಿಂಗ್, ಕುಖ್ಯಾತ ರೌಡಿ ಮಾರ್ಕೆಟ್ ಲೋಕಿ ಕಾಲಿಗೆ ಗುಂಡು

Resizer 15815149998510 1581515235267 1

ಶಿವಮೊಗ್ಗ ಲೈವ್.ಕಾಂ | SHIMOGA | 12 ಫೆಬ್ರವರಿ 2020 ಶಿವಮೊಗ್ಗದಲ್ಲಿ ಮತ್ತೆ ಪೊಲೀಸರು ಬಂದೂಕು ಸದ್ದು ಮಾಡಿದೆ. ಕುಖ್ಯಾತ ರೌಡಿ ಶೀಟರ್ ಮಾರ್ಕೆಟ್ ಲೋಕಿ ಮೇಲೆ ಫೈರಿಂಗ್ ಮಾಡಿದ್ದಾರೆ. ಮಾರ್ಕೆಟ್ ಲೋಕಿ ಎಡಗಾಲಿಗೆ ಗುಂಡು ತಗುಲಿದೆ. ಶಿವಮೊಗ್ಗ ತಾಲೂಕು ಅಬ್ಬಲಗೆರೆ ಬಳಿ ಮಾರ್ಕೆಟ್ ಲೋಕಿ ಇರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಪೊಲೀಸರು ಫೈರಿಂಗ್ ಮಾಡಿದ್ದು, ಮಾರ್ಕೆಟ್ ಲೋಕಿ ಎಡಗಾಲಿಗೆ ಗುಂಡು … Read more

ಶಿವಮೊಗ್ಗ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ, ಎಲ್ಲಿ? ಹೇಗಾಯ್ತು ಗೊತ್ತಾ ಕೊಲೆ?

ಶಿವಮೊಗ್ಗ ಲೈವ್.ಕಾಂ | SHIMOGA | 10 ಫೆಬ್ರವರಿ 2020 ಶಿವಮೊಗ್ಗದಲ್ಲಿ ಮತ್ತೊಂದ ಬರ್ಬರ ಹತ್ಯ ನಡೆದಿದೆ. ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ, ರಾತ್ರಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ನಾಗರಾಜ್ ಅಲಿಯಾಸ್ ಟೈಲ್ಸ್ ನಾಗ (45) ಹತ್ಯೆಗೀಡಾದವರು. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಕುವೆಂಪು ಬಡಾವಣೆಯಲ್ಲಿ ರಾತ್ರಿ ಟೈಲ್ಸ್ ನಾಗರಾಜ್ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ … Read more

ತುಂಗಾ ಹೊಸ ಸೇತುವೆ ಮೇಲೆ ಬಸ್, ಬೈಕ್ ಡಿಕ್ಕಿ, ಒಬ್ಬ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ, ಹೇಗಾಯ್ತು ಗೊತ್ತಾ ಅಪಘಾತ?

ಶಿವಮೊಗ್ಗ ಲೈವ್.ಕಾಂ | SHIMOGA | 7 ಫೆಬ್ರವರಿ 2020 ಶಿವಮೊಗ್ಗ ನಗರದ ತುಂಗಾ ಸೇತುವೆ ಮೇಲೆ ಬೈಕ್ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ. ಓತಿಘಟ್ಟದ ರವಿ (44) ಮೃತರು. ರವಿ ಅವರ ಸಂಬಂಧಿ ಯೋಗೇಶ್ ಎಂಬವವರು ಗಾಯಗೊಂಡಿದ್ದಾರೆ. ಅವರ ತೊಡೆಯ ಭಾಗಕ್ಕೆ ಗಯವಾಗಿದೆ. ಯೋಗೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಎಸ್ಆರ್’ಟಿಸಿ ಬಸ್ ಶಿವಮೊಗ್ಗದ ಬಸ್ ನಿಲ್ದಾಣದ ಕಡೆಗೆ ತೆರಳುತ್ತಿತ್ತು. ರವಿ ಮತ್ತು ಯೋಗೇಶ್ … Read more

BREAKING NEWS | ಶಿವಮೊಗ್ಗ ನಗರದಲ್ಲಿ ನಡು ರಸ್ತೆಯಲ್ಲೇ ಚಾಕು ಇರಿದು ಮರ್ಡರ್

ಶಿವಮೊಗ್ಗ ಲೈವ್.ಕಾಂ | SHIMOGA | 6 ಫೆಬ್ರವರಿ 2020 ಶಿವಮೊಗ್ಗದ ಗೋಪಾಳದಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲೇ ನಡು ರಸ್ತೆಯಲ್ಲೇ ಕೊಲೆಗೈಯ್ಯಲಾಗಿದೆ. ಗಿರೀಶ್ (33) ಹತ್ಯೆಯಾದವನು. ಗೊಪಾಳದ ಸಿದ್ದೇಶ್ವರ ಸರ್ಕಲ್ ಬಳಿ ಘಟನೆ ನಡೆದಿದೆ. ಸಂಜೆ ಗಿರಿ ಮೇಲೆ ದಾಳಿ ನಡೆಸಿದ ಯುವಕರು, ಎದೆ ಭಾಗಕ್ಕೆ ಚಾಕು ಇರಿದಿದ್ದಾರೆ. ಗಿರೀಶ್’ನನ್ನು ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿ ಆಗದೆ ಗಿರೀಶ್ ಮೃತಪಟ್ಟಿದ್ದಾನೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ … Read more

MRS ಸರ್ಕಲ್’ನಲ್ಲಿರುವ ಡಬಲ್ ಟ್ಯಾಂಕ್ ಕೆಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | SHIMOGA | 4 ಫೆಬ್ರವರಿ 2020 ಶಿವಮೊಗ್ಗದ MRS ಸರ್ಕಲ್’ನಲ್ಲಿ ಡಬಲ್ ಟ್ಯಾಂಕ್’ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ಟ್ಯಾಂಕ್ ಕೆಳಗಿನ ಮರದ ರೆಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗಣೇಶಪ್ಪ (58) ಎಂದು ಗುರುತಿಸಲಾಗಿದೆ. ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮದ ಗುತ್ತಿಗೆ ನೌಕರನಾಗಿದ್ದ ಗಣೇಶಪ್ಪ, ಎಂದಿನಂತೆ ಇವತ್ತು ಕೆಲಸಕ್ಕೆ ಆಗಮಿಸಿದ್ದರು. ಬೆಳಗ್ಗೆ ಟ್ಯಾಂಕ್’ನಿಂದ ನೀರಿ ಬಿಟ್ಟು, ಅಲ್ಲಿಯೇ ಇದ್ದರು. ಮಧ್ಯಾಹ್ನದ ವೇಳೆಗೆ ಅತ್ಯಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ … Read more

ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ರಾತ್ರಿ ಯುವಕನಿಗೆ ಚಾಕು ಇರಿತ, ಕ್ಷುಲಕ ಕಾರಣ ಗೆಳೆಯರ ನಡುವೆ ಕಿರಿಕ್

police jeep

ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020 ಯುವಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಒಬ್ಬನಿಗೆ ಚಾಕು ಇರಿಯಲಾಗಿದೆ. ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಇಲಿಯಾಸ್ ನಗರದ  ಮಹಮದ್ ಅವೇಜ್ (18) ಚಾಕು ಇರಿತಕ್ಕೆ ಒಳಗಾದವನು. ಈತನನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಮಹಮದ್ ಅವೇಜ್, ಅಂಜುಮನ್ ಎಂಬಾತನೊಂದಿಗೆ ಅಂಗಡಿಯೊಂದರ ಮುಂದೆ ಮಾತನಾಡುತ್ತಿ ನಿಂತಿದ್ದ. ಈ ವೇಳೆ ಇಬ್ಬರ ನಡುವೆ … Read more

ಅಂತ್ಯ ಸಂಸ್ಕಾರಕ್ಕೆ ಬಂದವನ ಮೇಲೆ ಅನುಮಾನ, ಧರ್ಮದೇಟು ಕೊಟ್ಟ ಮೇಲೆ ಹೊರಬಿತ್ತು ಸತ್ಯ, ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್’ಗೆ ಟ್ವಿಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಶಿವಮೊಗ್ಗದ ಗೋಂಧಿ ಚಟ್ನಳ್ಳಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಬ್ಬರು ಯುವಕರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಗೋಂಧಿ ಚಟ್ನಳ್ಳಿಯ ಸುಪ್ರಿಯಾ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಸುಪ್ರಿಯಾ ಅಂತ್ಯ ಸಂಸ್ಕಾರದ ವೇಳೆ ಆಗಮಿಸಿದ್ದ ಯುವಕನೊಬ್ಬನ … Read more

ವರದಕ್ಷಿಣೆಗಾಗಿ ಪತ್ನಿಯ ಕೊಲೆ ಮಾಡಿದ ಭದ್ರಾವತಿಯ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಜೈಲು, ದಂಡದ ಮೊತ್ತ ಎಷ್ಟು ಗೊತ್ತಾ?

Shivamogga Court 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪತಿಗೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಭದ್ರಾವತಿ ತಾಲೂಕು ಮಾಳೇನಹಳ್ಳಿಯ ಸತೀಶ್ (30) ಶಿಕ್ಷೆಗೆ ಒಳಗಾದವ. ಈತ 2015ರಲ್ಲಿ ಪತ್ನಿ ರುಕ್ಮಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿದ್ದ. ಈ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭದ್ರಾವತಿ ಉಪವಿಭಾಗದ … Read more

ಹಳ್ಳಕ್ಕೆ ಉರುಳಿದ ಕ್ಯಾಂಟರ್ ಲಾರಿ, ಶಿವಮೊಗ್ಗದ ಹೊಸಮನೆಯಲ್ಲಿ ನಡೆಯುತ್ತಿರುವ ಮದುವೆಗೆ ಬರುತ್ತಿದ್ದ ಮೂವರು ಸಾವು

ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020 ಕ್ಯಾಂಟರ್ ಪಲ್ಟಿಯಾಗಿ ಶಿವಮೊಗ್ಗದ ಹೊಸಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಬರುತ್ತಿದ್ದ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಚನ್ನಗಿರಿ ತಾಲೂಕಿನ ಗಡಿಯಲ್ಲಿರುವ ಚನ್ನಗಿರಿಯ ಮಾವಿನಕಟ್ಟೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಾಗರತ್ನಮ್ಮ (70), ವರಲಕ್ಷ್ಮಿ (60), ಅನುಷಾ (25)  ಮೃತಪಟ್ಟಿದ್ದಾರೆ. 17 ಜನರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ … Read more

ದೊಡ್ಡಪೇಟೆ ಠಾಣೆ ಪೊಲೀಸರ ಕಾರ್ಯಾಚರಣೆ, ಮರಳು ಸಂಗ್ರಹ ಮಾಡಿದ್ದ ಲಾರಿಗಳು ಸೀಜ್

ಶಿವಮೊಗ್ಗ ಲೈವ್.ಕಾಂ | SHIMOGA | 27 ಜನವರಿ 2020 ಅವಧಿ ಮೀರಿದ ಪರ್ಮಿಟ್’ಗಳನ್ನು ಇಟ್ಟುಕೊಂಡು, ಲಾರಿಯಲ್ಲಿ ಮರಳು ಸಂಗ್ರಹ ಮಾಡಿದ್ದ ಆರೋಪದ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ನ್ಯೂ ಮಂಡ್ಲಿ ಬೈಪಾಸ್ ರಸ್ತೆಯಲ್ಲಿ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮರಳು ತುಂಬಿದ್ದ 13 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಮಾಲೀಕರು ಮತ್ತು ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಗಣಿ ಮತ್ತು ಭೂ ವಿಜ್ಞಾನ … Read more