ಶಿವಮೊಗ್ಗದಲ್ಲಿ ಆಟೋ, ಕಾರು ಅಪಘಾತ, ನಡು ರಸ್ತೆಯಲ್ಲೇ ಆಟೋ ಪಲ್ಟಿ

110519 Auto Accident at Mahaveera Circle 1

ಶಿವಮೊಗ್ಗ ಲೈವ್.ಕಾಂ | 11 ಮೇ 2019 ನಗರದ ಮಹಾವೀರ ಸರ್ಕಲ್’ನಲ್ಲಿ ಆಟೋ, ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಮತ್ತು ಆಟೋ ಚಾಲಕರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದ್ದು, ಮುಂಭಾಗ ನುಜ್ಜುಗುಜ್ಜಾಗಿದೆ. ಇನ್ನು, ಕಾರಿಗೂ ಹಾನಿಯಾಗಿದ್ದು, ಚಾಲಕನ ಕಡೆಯ ಬಾಗಿಲಿಗೂ ಹಾನಿಯಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ … Read more

BREAKING NEWS | ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ದಿಢೀರ್ ನಾಪತ್ತೆ..!

shivamogga graphics map

ಶಿವಮೊಗ್ಗ ಲೈವ್.ಕಾಂ | 18 ಏಪ್ರಿಲ್ 2019 ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡುವಂತೆ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ. ಸ್ವತಂತ್ರ ಅಭ್ಯರ್ಥಿ ಮೊಹಮ್ಮದ್ ಯುಸುಫ್ ಖಾನ್ ನಾಪತ್ತೆಯಾದ್ದಾರೆ. ನಿನ್ನೆ ಬೆಳಗಿನ ಜಾವ ಮನೆಯಿಂದ ತೆರಳಿರುವ ಯುಸುಫ್ ಖಾನ್, ಹಿಂತಿರುಗಿಲ್ಲ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಆತಂಕಕ್ಕೀಡಾಗಿರುವ ಕುಟುಂಬದವರು ದೂರು ನೀಡಿದ್ದಾರೆ. ಯುಸುಫ್ ಮನೆಗೆ ಎಸ್.ಪಿ ಭೇಟಿ ಇನ್ನು, ಲೋಕಸಭೆ ಚುನಾವಣೆಯ ಅಭ್ಯರ್ಥಿ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ಸೇರಿದಂತೆ … Read more

ಖೋಟಾ ನೋಟು ಚಲಾಯಿಸಲು ಯತ್ನಿಸಿದ ಭದ್ರಾವತಿಯ ಇಬ್ಬರು ಅರಸ್ಟ್, ಎಷ್ಟು ಖೋಟಾ ನೋಟುಗಳಿದ್ದವು ಗೊತ್ತಾ?

prison hand cuff image

ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019 ಖೋಟಾನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಚನ್ನಗಿರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನವರು ಎಂದು ತಿಳಿದು ಬಂದಿದೆ. ಗೋವಿಂದಪ್ಪ ಮತ್ತು ಲಕ್ಷ್ಮಣ ಬಂಧಿತರು. ದೊಂದರಘಟ್ಟ ಗ್ರಾಮದ ಬಳಿ 100 ರುಪಾಯಿಯ 23 ಮತ್ತು 50 ರುಪಾಯಿಯ 40 ನೋಟುಗಳನ್ನು ಹಿಡಿದುಕೊಂಡು ನಿಂತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನೂ ಬಂಧಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ … Read more

ಸಿಸಿಟಿವಿಯಲ್ಲಿ ಸೆರೆಯಾಯ್ತು ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿ ನಡೆದ ದರೋಡೆ, ಮೂರು ಲಕ್ಷ ನಾಪತ್ತೆಯಾಗಿದ್ದು ಹೇಗೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 15 ಮಾರ್ಚ್ 2019 ಗಮನ ಬೇರೆಡೆ ಸೆಳೆದು ಹಾಲಿನ ವ್ಯಾಪಾರಿಯೊಬ್ಬರು ತಂದಿದ್ದ ಮೂರು ಲಕ್ಷ ರೂಪಾಯಿಯನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಘಟನೆ ನಡೆದಿದೆ. ಇನ್ನು, ಇಡೀ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆನ್ಷನ್ ಮೊಹಲ್ಲಾದ ಹಾಲಿನ ವ್ಯಾಪಾರಿ ಕುಮಾರ್, ಬಿ.ಹೆಚ್.ರಸ್ತೆಯಲ್ಲಿರುವ ಬ್ಯಾಂಕ್’ನಿಂದ ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಹಿಂತಿರುಗುತ್ತಿದ್ದರು. ಈ ವೇಳೆ, ಬಿ.ಹೆಚ್.ರಸ್ತೆಯಲ್ಲಿ ದಿಢೀರ್ ಬಂದ ನಾಲ್ವರು, ಕುಮಾರ್ ಗಮನ ಬೇರೆಡೆ ಸೆಳೆದು ಮೂರು ಲಕ್ಷ ರೂ. ದರೋಡೆ … Read more

ಬ್ಯಾಂಕ್ ಅಧಿಕಾರಿ ಅಂತಾ ಫೋನ್ ಮಾಡಿ, ಶಿವಮೊಗ್ಗದ ಹೊಸಮನೆ ಮಹಿಳೆಗೆ ಮೋಸ, ತೀರ್ಥಹಳ್ಳಿಯ ವ್ಯಕ್ತಿಗೂ ವಂಚನೆ

ಶಿವಮೊಗ್ಗ ಲೈವ್.ಕಾಂ | 9 ಮಾರ್ಚ್ 2019 ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಅಂತಾ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ಜಿಲ್ಲೆಯ ಇಬ್ಬರ ಅಕೌಂಟ್’ನಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ. ಕೇಸ್ 1 ಶಿವಮೊಗ್ಗದ ಹೊಸಮನೆ ಬಡಾವಣೆಯ ಸೌಮ್ಯ ನಾಯಕಿ ಎಂಬುವವರಿಗೆ ಕರೆ ಮಾಡಿದ ವಂಚಕನೊಬ್ಬ, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಸೌಮ್ಯ ಅವರ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ನವೀಕರಣ ಮಾಡಬೇಕಿದೆ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಸೌಮ್ಯ, ಎಟಿಎಂ ಕಾರ್ಡ್ … Read more