ಬೆಜ್ಜವಳ್ಳಿ |ಗೋವಾ ಬಸ್‌ ಡಿಕ್ಕಿ, ವಿದ್ಯಾರ್ಥಿ ಕೊನೆಯುಸಿರು

181024 goa bus incident at bejjavalli in thirthahalli

THIRTHAHALLI NEWS, 18 OCTOBER 2024 : ಖಾಸಗಿ ಬಸ್‌ (BUS) ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ದುರ್ಘಟನೆ ಸಂಭವಿಸಿದೆ. ಗೋವಾ ನೋಂದಣಿಯ ಬಸ್ಸು ಮಂಗಳೂರಿನಿಂದ ಸಕ್ರೆಬೈಲು ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಬೆಜ್ಜವಳ್ಳಿ ಬಳಿ ಡಿಪ್ಲೋಮಾ ವಿದ್ಯಾರ್ಥಿ ಪ್ರಥಮ್‌ ಎಂಬಾತನಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪ್ರಥಮ್‌ನನ್ನು ಕೂಡಲೆ ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ … Read more

ಬಸ್ಸಿನೊಳಗೆ ನುಗ್ಗಿ ಚಾಲಕನಿಗೆ ಥಳಿಸಿದ ಮತ್ತೊಂದು ಬಸ್ಸಿನ ಸಿಬ್ಬಂದಿ

Shimoga-Private-Bus-Stand-Board

SHIMOGA NEWS, 18 OCTOBER 2024 : ಟೈಮಿಂಗ್‌ ವಿಚಾರವಾಗಿ ಎರಡು ಖಾಸಗಿ ಬಸ್‌ (Private Bus) ಸಿಬ್ಬಂದಿ ಮಧ್ಯೆ ಜಗಳವಾಗಿದ್ದು, ಓರ್ವ ಚಾಲಕನಿಗೆ ಬಸ್ಸಿನೊಳಗೆ ಥಳಿಸಲಾಗಿದೆ ಎಂದು ಆರೋಪಿಸಿ ದೂರು ನೀಡಿಲಾಗಿದೆ. ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಶೃಂಗೇರಿಯಿಂದ ತೀರ್ಥಹಳ್ಳಿ ಮೂಲಕ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಮತ್ತು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮತ್ತೊಂದು ಖಾಸಗಿ ಬಸ್‌ ಸಿಬ್ಬಂದಿ ಮಧ್ಯೆ ತೀರ್ಥಹಳ್ಳಿ ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆದಿತ್ತು. ಶೃಂಗೇರಿ ಬಸ್‌ ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ … Read more

ಶಿವಮೊಗ್ಗ ಸಿಟಿಯಲ್ಲಿ ಶಂಕಿತ ಬಾಂಗ್ಲಾದೇಶಿಯರು ವಶಕ್ಕೆ

140823-Jayanagara-Police-Station

SHIMOGA NEWS, 18 OCTOBER 2024 : ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂಗ್ಲಾದೇಶಿ ಪ್ರಜೆಗಳು (Bangladesh) ಎಂಬ ಶಂಕೆ ಮೇರೆಗೆ ಇವರ ದಾಖಲೆ ಪರಿಶೀಲಿಸಲಾಗುತ್ತಿದೆ. ಸವಳಂಗ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಏಳು ಮಂದಿಯನ್ನು ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಶಂಕೆ ಇದೆ. ಈ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇವರು ಅಕ್ರಮವಾಗಿ ನೆಲೆಸಿರುವುದು ಖಚಿತವಾದರೆ ಮುಂದಿನ ಕಾನೂನು … Read more

BREAKING NEWS – ಶಿವಮೊಗ್ಗದಲ್ಲಿ ಸಿಟಿ ಬಸ್‌ ಪಲ್ಟಿ

city-bus-near-railway-gate-at-bommanakatte

SHIMOGA NEWS, 16 OCTOBER 2024 : ಚಾಲಕನ ನಿಯಂತ್ರಣ ತಪ್ಪಿದ ಸಿಟಿ ಬಸ್‌ (BUS) ಚರಂಡಿಗೆ ಪಲ್ಟಿಯಾಗಿದೆ. ಶಿವಮಗ್ಗದ ಬೊಮ್ಮನಕಟ್ಟೆ ರೈಲ್ವೆ ಗೇಟ್‌ ಬಳಿ ಇಂದು ಬಳೆಗ್ಗೆ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ವಿದ್ಯಾರ್ಥಿಗಳು ಸೇರಿ ಸುಮಾರು 20 ಪ್ರಯಾಣಿಕರಿದ್ದರು. ಘಟನೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸಿಟಿ ಬಸ್ಸು ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ತೆರಳುತ್ತಿತ್ತು. ರೈಲ್ವೆ ಗೇಟ್‌ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಬಳಿಕ ಫೆನ್ಸ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ ಎಂದು … Read more

ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಹಣದ ಬಂಡಲ್‌ಗಳ ಕಳ್ಳತನ

041023 Gandhi Bazaar In Shimoga.webp

SHIMOGA NEWS, 16 OCTOBER 2024 : ಅಂಗಡಿಯೊಂದರ (Shop) ಬೀಗ ಮುರಿದು ಒಳ ನಗ್ಗಿದ ಕಳ್ಳರು ನೋಟಿನ ಬಂಡಲ್‌ಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್‌ನ ವೀರಭದ್ರಪ್ಪ ಅಂಡ್‌ ಸನ್ಸ್‌ ಪ್ರಾವಿಷನ್‌ ಸ್ಟೋರ್‌ನಲ್ಲಿ ಕಳ್ಳತನವಾಗಿದೆ. ಮಾಲೀಕರು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಕ್ಯಾಶ್‌ ಡ್ರಾಗಳು ಓಪನ್‌ ಆಗಿದ್ದವು. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ಕಟ್ಟಡದಿಂದ ಅಂಗಡಿಯ ಮೂರನೇ ಮಹಡಿಗೆ ನುಗ್ಗಿರುವ ಕಳ್ಳರು ಗ್ರಿಲ್‌ ಗೇಟ್‌ನ ಬೀಗ ಒಡೆದು ಅಂಗಡಿಯೊಳಗೆ … Read more

ಪಾರ್ಟ್‌ ಟೈಮ್‌ ಕೆಲಸಕ್ಕಾಗಿ ಬ್ಯಾಂಕಿನಲ್ಲಿದ್ದ ಫುಲ್‌ ಹಣ ಕಳೆದುಕೊಂಡ ಮಹಿಳೆ

SMS-Fraud-Shimoga-CEN-Police-Station.

SHIMOGA NEWS, 15 OCTOBER 2024 : ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು, ಮಹಿಳೆಯೊಬ್ಬರಿಂದ (ಹೆಸರು ಗೌಪ್ಯ) ಒಬ್ಬರಿಂದ ಹಣ (Money) ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. 7.40 ಲಕ್ಷ ರೂ. ಕಳೆದುಕೊಂಡಿರುವ ಮಹಿಳೆ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆ ಮೋಸ ಹೋಗಿದ್ದು ಹೇಗೆ? ಪಾರ್ಟ್‌ ಟೈಮ್‌ ಜಾಬ್‌ ಎಂದು ನಂಬಿಸಿ ಹೊಟೇಲ್‌ ರಿವ್ಯು ಮಾಡುವಂತೆ ಟೆಲಿಗ್ರಾಂ ಆಪ್‌ ಮೂಲಕ ಲಿಂಕ್‌ ಕಳುಹಿಸಲಾಗಿತ್ತು. ರಿವ್ಯುಮಾಡುತ್ತಿದ್ದಂತೆ ಮಹಿಳೆಯ ಖಾತೆಗೆ 50 ರೂ. ಮತ್ತು 1000 ರೂ. … Read more

ಶಿವಮೊಗ್ಗ ಜೈಲಿನಿಂದ ಕರೆ ಮಾಡಿ ಪತ್ನಿಗೆ ಬೆದರಿಕೆ ಒಡ್ಡಿದ ಖೈದಿ

Shimoga-Central-Jail-Building

SHIMOGA NEWS, 15 OCTOBER 2024 : ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಿಂದ (Jail) ತನ್ನ ಪತಿ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದಾನೆ. ಹಣಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಖೈದಿ ನಾಗರಾಜ ತನ್ನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2024ರ ಮಾರ್ಚ್‌ ತಿಂಗಳಿಂದ ಹಲವು ಭಾರಿ ಕರೆ ಮಾಡಿ ಒಂದು ಸಾವಿರ, ಎರಡು ಸಾವಿರದಂತೆ ಹಣ … Read more

ಪೂಜೆ ಮಾಡಿ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ ಮಾಯ

crime name image

SHIMOGA NEWS, 14 OCTOBER 2024 : ವಿಜಯ ದಶಮಿಯಂದು ಪೂಜೆ ಸಲ್ಲಿಸಿ ಊರಿನ ದೇಗುಲದ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್‌ (Tractor) ಕಳುವಾಗಿದೆ. ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ. ಚನ್ನಹಳ್ಳಿಯ ರೈತ ಪಾಲಾಕ್ಷಪ್ಪ ಅವರು ಟ್ರಾಕ್ಟರ್‌ಗೆ ಪೂಜೆ ಸಲ್ಲಿಸಿ ದೇಗುಲದ ಮುಂದೆಯೇ ಟ್ರಾಕ್ಟರ್‌ ಅನ್ನು ರಾತ್ರಿ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ 8 ಗಂಟೆ ಹೊತ್ತಿಗೆ ದೇಗುಲದ ಬಳಿ ಹೋದಾಗ ಟ್ರಾಕ್ಟರ್‌ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಿದ ಪಾಲಾಕ್ಷಪ್ಪ ಅವರು … Read more

ಸಿಗಂದೂರಿಗೆ ತೆರಳುತ್ತಿದ್ದ ಕಾರು ಅಪಘಾತ, ಬೆಂಗಳೂರಿನ ಯುವಕ ಸಾವು

Car-incident-near-kumsi-in-Shimoga

SHIMOGA NEWS, 13 OCTOBER 2024 : ಚಾಲಕನ ನಿಯಂತ್ರಣ ತಪ್ಪಿದ ಕಾರು (Car) ಗದ್ದೆಗೆ ಪಲ್ಟಿಯಾಗಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ಸಂಭವಿಸಿದೆ. ಬೆಂಗಳೂರು ನೆಲಮಂಗಲದ ಚಂದನ್‌ ಮೃತ ಯುವಕ. ಕೊಡುಗು ಮೂಲದ ನಂದನ್‌, ಕೋಲಾರದ ಕೋದಂಡ, ಹಾಸನದ ಭರತ್‌, ಮಂಡ್ಯ ಜಿಲ್ಲೆಯ ಯೋಗೇಶ್‌ ಎಂಬುವವರು ಗಾಯಗೊಂಡಿದ್ದಾರೆ. ಐವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದರು ರಜೆ ಇದ್ದಿದ್ದರಿಂದ ಐವರು ಯುವಕರು ಬೆಂಗಳೂರಿನಿಂದ ಸಿಗಂದೂರಿಗೆ … Read more

ಹೊಸನಗರದಲ್ಲಿ ಮನೆ ಹಿಂಬದಿ ಬಾಗಿಲು ಮುರಿದು ಕಳವು

Hosanagara-Police-Station-Board

HOSANAGARA NEWS, 10 OCTOBER 2024 : ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ (Gold) ಕಳವು ಮಾಡಲಾಗಿದೆ. ಹೊಸನಗರ ತಾಲ್ಲೂಕಿನ ವರಕೋಡು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ಮಂಡಕ್ಕಿ ವ್ಯಾಪಾರಿ ಹನುಮಂತ ಕಾಮತ್ ಅವರು ವ್ಯಾಪಾರಕ್ಕೆ ಹೋಗಿದ್ದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಕಳ್ಳರು ಒಳ ನುಗ್ಗಿದ್ದಾರೆ. ಬೀರುವಿನಲ್ಲಿದ್ದ 56 ಸಾವಿರ ರೂ. ಮೌಲ್ಯದ ಎರಡು ಬಂಗಾರದ ಉಂಗುರ ಮತ್ತು 20 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ … Read more