ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 16 OCTOBER 2024 : ಅಂಗಡಿಯೊಂದರ (Shop) ಬೀಗ ಮುರಿದು ಒಳ ನಗ್ಗಿದ ಕಳ್ಳರು ನೋಟಿನ ಬಂಡಲ್‌ಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್‌ನ ವೀರಭದ್ರಪ್ಪ ಅಂಡ್ ಸನ್ಸ್ ಪ್ರಾವಿಷನ್ ಸ್ಟೋರ್‌ನಲ್ಲಿ ಕಳ್ಳತನವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಾಲೀಕರು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಕ್ಯಾಶ್ ಡ್ರಾಗಳು ಓಪನ್ ಆಗಿದ್ದವು. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ಕಟ್ಟಡದಿಂದ ಅಂಗಡಿಯ ಮೂರನೇ ಮಹಡಿಗೆ ನುಗ್ಗಿರುವ ಕಳ್ಳರು ಗ್ರಿಲ್ ಗೇಟ್‌ನ ಬೀಗ ಒಡೆದು ಅಂಗಡಿಯೊಳಗೆ ನುಗ್ಗಿದ್ದಾರೆ. ಸಿಸಿಟಿವಿಯ ವಯರ್ ತುಂಡು ಮಾಡಿ, ಕ್ಯಾಮರಾಗಳನ್ನು ಬೇರೆಡೆಗೆ ತಿರುಗಿಸಿ ನೆಲಮಹಡಿಯಲ್ಲಿದ್ದ ಕ್ಯಾಶ್ ಕೌಂಟರ್‌ನಲ್ಲಿ ಹಣ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ – ಚೆನ್ನೈ ವಿಮಾನಯಾನ ಶುರು, ಹೇಗಿತ್ತು ಮೊದಲ ದಿನ?
ಕ್ಯಾಶ್ ಡ್ರಾದಲ್ಲಿದ್ದ 10 ರೂ. ಮತ್ತು 50 ರೂ.ನ ನೋಟ್ ಬಂಡಲ್‌ಗಳನ್ನು ಕಳುವಾಗಿದೆ. ಇವುಗಳ ಒಟ್ಟು ಮೊತ್ತ 1.10 ಲಕ್ಷ ರೂ. ಇನ್ನು, 10 ಸಾವಿರ ರೂ. ಮೌಲ್ಯದ 200 ಗ್ರಾಂ ತೂಕದ ಬೆಳ್ಳಿ ನಾಣ್ಯಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.