BREAKING NEWS – ದೇವಸ್ಥಾನದಲ್ಲಿ ಬೋನಿಗೆ ಬಿದ್ದ ಕರಡಿ ನೋಡಲು ಜನವೋ ಜನ

Bear-caught-at-emmehatti-village-near-holehonnuru

HOLEHONNURU, 25 AUGUST 2024 : ಕಳೆದ ಕೆಲವು ದಿನದಿಂದ ಆತಂಕ ಸೃಷ್ಟಿಸಿದ್ದ ಕರಡಿ (Bear) ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ತಟ್ಟೆಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಬೋನಿಗೆ ಕಳೆದ ರಾತ್ರಿ ಕರಡಿ ಸೆರೆ ಸಿಕ್ಕಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚೌಡಮ್ಮ ದೇವಸ್ಥಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್‌ ಇರಿಸಿದ್ದರು. ರಾತ್ರಿ 2.45ಕ್ಕೆ ದೇಗುಲದ ಬಳಿ ಬಂದ ಕರಡಿ ಬೋನಿಗೆ ಬಿದ್ದಿದೆ. ಈ ದೃಶ್ಯ ದೇಗುಲದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ವಿಷಯ ತಿಳಿದು … Read more

ಭದ್ರಾವತಿ ಶಾಸಕ ಸಂಗಮೇಶ್ವರ್‌ ಪುತ್ರನ ಹತ್ಯೆಗೆ ಸಂಚು, ದಾಖಲಾಯ್ತು ಕೇಸ್‌

Bhadravathi-MLA-Sangameshwara-Son-Basavesh-Basava-

BHADRAVATHI, 22 AUGUST 2024 | ಶಾಸಕ (MLA) ಬಿ.ಕೆ.ಸಂಗಮೇಶ್ವರ್‌ ಪುತ್ರ ಬಸವೇಶ್‌ ಹತ್ಯೆಗೆ ಸಂಚು ಹೂಡಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಭದ್ರಾವತಿ ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್‌, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿನಿಂದಲೇ ಸ್ಕೆಚ್‌ ಆರೋಪ ಮುಬಾರಕ್‌ ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಮುಬಾರಕ್‌ ಎಂಬಾತನಿಗೆ ಕರೆ ಮಾಡಿ, ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಸಣ್ಣನನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು … Read more

ಭದ್ರಾವತಿಯಲ್ಲಿ ಎರಡೇ ದಿನದಲ್ಲಿ ಮಾಲು ಸಹಿತ ಆರೋಪಿಗಳು ಅಂದರ್‌

BHADRAVATHI-POLICE-NAB-TWO-FOR-ROBBERY.

BHADRAVATHI, 13 AUGUST 2024 :‌ ಶಾರದಾ ಮಂದಿರ ಎದುರು ನಿಂತಿದ್ದ ವೃದ್ಧನಿಗೆ ಬೆದರಿಸಿ ಚಿನ್ನಾಭರಣ ಹಾಗೂ ಹಣ ಸುಲಿಗೆ ಮಾಡಿದ್ದ ಇಬ್ಬರನ್ನು ಪೊಲೀಸರು ಎರಡೇ ದಿನದಲ್ಲಿ ಬಂಧಿಸಿದ್ದು (ARREST) 1.94 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಭದ್ರಾವತಿ ಅನ್ವ‌ರ್ ಕಾಲನಿ ಮೊಮಿನ್‌ ಮೊಹಲ್ಲಾದ ಜಬೀವುಲ್ಲಾ ಅಲಿಯಾಸ್ ಮಲ್ಲಿ (23) ಮತ್ತು ಮಹಮದ್ ಗೌಸ್ ಅಲಿಯಾಸ್ ಗುಂಡಾ(24) ಬಂಧಿತರು. ಕಳೆದ ಶುಕ್ರವಾರ ರಾತ್ರಿ ಭದ್ರಾವತಿ ಟೌನ್‌ನ ಶಾರದಾ ಮಂದಿರ ಬಳಿ ನಿಂತಿದ್ದ ಹುತ್ತಾ ಕಾಲನಿಯ … Read more

ಭದ್ರಾವತಿಯಲ್ಲಿ ಕರಡಿ ದಾಳಿ, ಕಾರ್ಮಿಕನಿಗೆ ಗಾಯ

bear-attack-on-a-person-at-emmehatti-in-bhadravathi

BHADRAVATHI, 11 AUGUST 2024 : ಕರಡಿ (BEAR) ದಾಳಿಗೆ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಎಮ್ಮೆಹಟ್ಟಿ ಗ್ರಾಮದಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಕೃಷಿ ಕಾರ್ಮಿಕ ಆನಂದಪ್ಪ (65) ಕರಡಿ ದಾಳಿ ಗಾಯಗೊಂಡಿದ್ದಾರೆ. ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದಾಗ ಕರಡಿ ದಾಳಿ ನಡೆಸಿದ್ದು, ಕೈ, ಕಾಲು ಮತ್ತು ಬೆನ್ನಿಗೆ ಗಾಯವಾಗಿದೆ. ಗಾಯಗೊಂಡಿದ್ದ ಆನಂದಪ್ಪ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ ⇒ ಅಪಘಾತದಲ್ಲಿ ವಿದ್ಯಾರ್ಥಿ … Read more

ದೆಹಲಿಯಲ್ಲಿ ವಿಐಎಸ್‌ಎಲ್‌ ಕಾರ್ಮಿಕರು, ಸಂಸದ ರಾಘವೇಂದ್ರ ಜೊತೆ ಕೇಂದ್ರ ಸಚಿವರ ಭೇಟಿ

visl-employees-meet-minister-kumaraswamy-with-by-raghavendra.

SHIMOGA, 7 AUGUST 2024 : ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಭದ್ರಾವತಿ VISL ಕಾರ್ಖಾನೆಯನ್ನು ಶೀಘ್ರವೇ ಬಂಡವಾಳ ಹಿಂಪಡೆಯುವ ಕಾರ್ಖಾನೆಗಳ ಪಟ್ಟಿಯಿಂದ ಕೈಬಿಟ್ಟು ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದರು. ವಿಐಎಸ್‌ಎಲ್‌ ಪುನಶ್ಚೇತನ ಸಂಬಂಧ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯರಾಗಿದ್ದ ಅವಧಿಯಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಪ್ರಯತ್ನಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ವಿವರಿಸಿದರು. ರೈಲ್ವೆ ರಾಜ್ಯ … Read more

ಮೊದಲಿಗೆ ಬ್ಯಾಂಕ್‌ನಲ್ಲಿದ್ದ ಹಣ ಹೋಯ್ತು, ಮರುಕ್ಷಣ ಮೊಬೈಲ್‌ನಲ್ಲಿದ್ದ ಎಲ್ಲವು ಖಾಲಿಯಾಯ್ತು, ಕಂಗಾಲದ ರೈತ

Online-Fraud-In-Shimoga

HOLEHONNURU, 5 AUGUST 2024 : ಬ್ಯಾಂಕ್‌ ಒಂದರ ಹೆಸರಿನಲ್ಲಿ ವಾಟ್ಸಪ್‌ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿದ ರೈತರೊಬ್ಬರ ಮೊಬೈಲ್‌ ಹ್ಯಾಕ್‌ (Hacked) ಮಾಡಲಾಗಿದೆ. ಹ್ಯಾಕರ್‌ಗಳು ಬ್ಯಾಂಕಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಮೊಬೈಲ್‌ನಲ್ಲಿದ್ದ ಡೇಟಾ ಸಂಪೂರ್ಣ ಡಿಲೀಟ್‌ ಆಗಿದೆ. ಆಗರದಹಳ್ಳಿ ಕ್ಯಾಂಪ್‌ನ ರಾಮಾಂಜನೇಯ ಎಂಬುವವರು ಬ್ಯಾಂಕ್‌ ಒಂದರಲ್ಲಿ ಖಾತೆ ಹೊಂದಿದ್ದಾರೆ. ಅದೇ ಬ್ಯಾಂಕಿನ ಹೆಸರಿನಲ್ಲಿ ಬಂದ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಅದರಲ್ಲಿದ್ದ ಲಿಂಕ್‌ ಅನ್ನು ರಾಮಾಂಜನೇಯ ಕ್ಲಿಕ್‌ ಮಾಡಿದ್ದರು. ಕೆಲವೇ ಕ್ಷಣದಲ್ಲಿ ವಾಟ್ಸಪ್‌ ಹ್ಯಾಕ್‌ ಆಗಿತ್ತು. ಸ್ವಲ್ಪ ಹೊತ್ತಿಗೆ … Read more

ರಾತ್ರೋರಾತ್ರಿ ಬ್ಯಾಂಕ್‌ ಲಾಕರ್‌ ಮುರಿಯಲು ಯತ್ನ, CCTVಯಲ್ಲಿ ಸಿಲಿಂಡರ್‌ ಹೊತ್ತೊಯ್ಯುವ ದೃಶ್ಯ ಸೆರೆ

SBI-Bank-robbery-at-Bhadravathi-nagathi-belagalu.

BHADRAVATHI, 5 AUGUST 2024 : ಬ್ಯಾಂಕಿನ ಬಾಗಿಲಿನ ಬೀಗ ಮುರಿದು ಲಾಕರ್‌ (Locker) ಕಟ್‌ ಮಾಡಿ ತೆರೆಯಲು ವಿಫಲ ಯತ್ನವಾಗಿದೆ. ಲಾಕರ್‌ ಓಪನ್‌ ಆಗದ ಹಿನ್ನೆಲೆ ಸಿಸಿಟಿವಿ ಡಿವಿಆರ್‌ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್‌ ಉಪಕರಣ ಕಳವು ಮಾಡಲಾಗಿದೆ.   ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಕಳ್ಳತನ ಯತ್ನ ನಡೆದಿದೆ. ಆಗಸ್ಟ್‌ 2ರ ಬೆಳಗ್ಗೆ ಬ್ಯಾಂಕ್‌ ಸಿಬ್ಬಂದಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್‌ ಉಪಕರಣ ಕದ್ದೊಯ್ದರು ಖದೀಮರು … Read more

ಹೊಳೆಹೊನ್ನೂರಿನಲ್ಲಿ ಮನೆಗಳು ಜಲಾವೃತ, ಮಂಗೋಟೆ ಬಳಿ ರಸ್ತೆ ಮೇಲೆ ಹರಿದ ನೀರು, ಎಲ್ಲೆಲ್ಲಿ ಏನೇನಾಗಿದೆ?

flood-at-holehonnuru.

HOLEHONNURU, 1 AUGUST 2024 : ತುಂಗಾ ಮತ್ತು ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಹೊಳೆಹೊನ್ನೂರು ಪಟ್ಟಣದ ವಿವಿಧೆಡೆ ನೀರು ನುಗ್ಗಿ (Flood) ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಶಾಸಕಿ ಶಾರದಾ ಪೂರ್ಯಾನಾಯ್ಕ್‌, ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮಂಗೋಟೆಯಲ್ಲಿ ತೋಟ, ರಸ್ತೆ ಜಲಾವೃತ ಇತ್ತ ಮಂಗೋಟೆ ಗ್ರಾಮದಲ್ಲಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಲ್ಲಿನ ತೋಟಗಳಿಗೆ ನೀರು ನುಗ್ಗಿದೆ. ನೀರು ಹರಿಯುತ್ತಿದ್ದರಿಂದ ಮಂಗೋಟೆ – … Read more

ಭದ್ರಾವತಿ ಹೊಸ ಸೇತುವೆ ಮುಳುಗಡೆ, ಬಡಾವಣೆಗಳಿಗೆ ನುಗ್ಗಿದ ಭದ್ರೆ, ಕಾಳಜಿ ಕೇಂದ್ರಗಳು ಶುರು

Bhadravathi-New-bridge-drowned.

BHADRAVATHI, 31 JULY 2024 : ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸುತ್ತಿರುವುದರಿಂದ ಭದ್ರಾವತಿಯ ಹೊಸ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿದು ಹೋಗುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಪೊಲೀಸರು ಹೊಸ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಿದ್ದರು. ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಇವತ್ತು ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ಸೇತುವೆ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಮರದ ದಿಮ್ಮಿಗಳು ಸೇತುವೆಗೆ ಬಡಿದು, … Read more

ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಹೆಚ್ಚಳ, ಭಾರಿ ಪ್ರಮಾಣದ ನೀರು ಹೊರಕ್ಕೆ

Bhadra-Dam-gate-opened-2022

SHIMOGA, 31 JULY 2024 : ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆ ತುಂಗಾ ಮತ್ತು ಭದ್ರಾ ಜಲಾಶಯಗಳ ಒಳ ಹರಿವು (Inflow) ಹೆಚ್ಚಳವಾಗಿದೆ. ಆದ್ದರಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ 83,907 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಇನ್ನು, ಭದ್ರಾ ಜಲಾಶಯಕ್ಕು ಒಳ ಹರಿವು ಹೆಚ್ಚಳವಾಗಿದೆ. 61,042 ಕ್ಯೂಸೆಕ್‌ ಒಳ ಹರಿವು ಇದೆ. 41,957 ಕ್ಯೂಸೆಕ್‌ ನೀರನ್ನು … Read more