ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI, 5 AUGUST 2024 : ಬ್ಯಾಂಕಿನ ಬಾಗಿಲಿನ ಬೀಗ ಮುರಿದು ಲಾಕರ್ (Locker) ಕಟ್ ಮಾಡಿ ತೆರೆಯಲು ವಿಫಲ ಯತ್ನವಾಗಿದೆ. ಲಾಕರ್ ಓಪನ್ ಆಗದ ಹಿನ್ನೆಲೆ ಸಿಸಿಟಿವಿ ಡಿವಿಆರ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣ ಕಳವು ಮಾಡಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳ್ಳತನ ಯತ್ನ ನಡೆದಿದೆ. ಆಗಸ್ಟ್ 2ರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಆಯುಧದಿಂದ ಬ್ಯಾಂಕಿನ ಶಟರ್ ಮುರಿದು ಒಳ ನುಗ್ಗಿರುವ ಕಳ್ಳರು ಹಣ, ಬಂಗಾರ, ಡಿಮಾಂಡ್ ಡ್ರಾಫ್ಟ್‌ಗಳನ್ನು ಇಟ್ಟಿದ್ದ ಲಾಕರ್ ಮುರಿಯಲು ಯತ್ನಿಸಿದ್ದಾರೆ. ಲಾಕರ್ ಕಟ್ ಮಾಡಲು ಗ್ಯಾಸ್ ಕಟರ್ ಬಳಕೆ ಮಾಡಿದ್ದಾರೆ. ಆದರೆ ಲಾಕರ್ ಓಪನ್ ಆಗದ ಹಿನ್ನೆಲೆ ಅದನ್ನು ಹಾಗೆ ಬಿಟ್ಟು ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಲಾಕರ್ ಕಟ್ ಮಾಡಲು ಗ್ಯಾಸ್ ಕಟರ್
ಎಲೆಕ್ಟ್ರಾನಿಕ್ ಉಪಕರಣ ಕದ್ದೊಯ್ದರು
ಖದೀಮರು ಬ್ಯಾಂಕಿನ 3 ಸಿಸಿ ಕ್ಯಾಮರಾ, ಡಿವಿಆರ್, ರೋಟರ್, ಲ್ಯಾನ್ ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಸ್ವಿಚ್, ಬಿಎಸ್‌ಎನ್‌ಎಲ್ ಮೀಡಿಯಾ ಕನ್ವರ್ಟರ್ ಕಳವು ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ 1.20 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಬೆನ್ನಿಗೆ ಲಾಕರ್‌ನಲ್ಲಿದ್ದ ನಗದು, ಬಂಗಾರ, ಡಿಮಾಂಡ್ ಡ್ರಾಫ್ಟ್‌ಗಳನ್ನು ಮತ್ತೊಂದು ಎಸ್‌ಬಿಐ ಬ್ಯಾಂಕಿಗೆ ವರ್ಗಾಯಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.