ವಿಐಎಸ್ಎಲ್ ಕುರಿತು ಇವತ್ತು ಮಹತ್ವದ ಮೀಟಿಂಗ್, ಸಿಎಂ ಬಳಿ ನಿಯೋಗಕ್ಕೆ ಪ್ಲಾನ್

Shimoga MP BY Raghavendra

SHIVAMOGGA LIVE NEWS | 3 FEBRUARY 2023 SHIMOGA : ವಿಐಎಸ್‌ಎಲ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಳಿ ನಿಯೋಗ (Delegation) ಕೊಂಡೊಯ್ಯಲು ಚಿಂತಿಸಲಾಗುತ್ತಿದೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸದ್ಯ ಮುಖ್ಯಮಂತ್ರಿ ಅವರು ಬಜೆಟ್ ಸಿದ್ಧತೆಯಲ್ಲಿದ್ದಾರೆ. ಬೆಜೆಟ್ ಬಳಿಕ ನಿಯೋಗ ಕೊಂಡೊಯ್ದು ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದಾಗ ವಿಐಎಸ್ಎಲ್ ವಿಚಾರ ಚರ್ಚೆ ಮಾಡಿದ್ದೇವೆ. ಹಿಂದಿನ ಶ್ರೀಮಂತಿಕೆಯನ್ನು ಮರುಕಳಿಸುವ ಪ್ರಯತ್ನ ನಡೆಸಲಾಗುತ್ತದೆ. ಇವತ್ತು … Read more

ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ

shimoga dc office

SHIVAMOGGA LIVE NEWS | 3 FEBRUARY 2023 SHIMOGA : ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ (By Election) ನಡೆಸಲು ದಿನಾಂಕ ನಿಗದಿಯಾಗಿದೆ. ಫೆ.25ರಂದು ಮತದಾನ ನಡೆಯಲಿದೆ. ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಯಾವ್ಯಾವ ಗ್ರಾ. ಪಂನಲ್ಲಿ ಚುನಾವಣೆ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿಯ ಒಂದು ಸ್ಥಾನ, ನಾಗೋಡಿ (ನಿಟ್ಟೂರು) ಗ್ರಾಮ ಪಂಚಾಯಿತಿಯ ಎರಡು ಸ್ಥಾನ, ಭದ್ರಾವತಿ … Read more

ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ, ಮೂವರು ತಹಶೀಲ್ದಾರ್ ಗಳು ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

ADC-and-Tahasildhar-Transfer-in-Shimoga-district.

SHIVAMOGGA LIVE NEWS | 1 FEBRUARY 2023 SHIMOGA | ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರಿಗಳ ವರ್ಗಾವಣೆ (officer transfer) ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮತ್ತು ಮೂರು ತಾಲೂಕುಗಳ ತಹಶೀಲ್ದಾರ್ ಗಳ ವರ್ಗಾವಣೆಯಾಗಿದೆ. ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಅವರನ್ನು ವರ್ಗಾಯಿಸಲಾಗಿದೆ. ನೂತನ ಅಪರ ಜಿಲ್ಲಾಧಿಕಾರಿಯಾಗಿ ಎಸ್.ಎಸ್.ಬಿರಾದರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮೂವರು ತಹಶೀಲ್ದಾರ್ ವರ್ಗಾವಣೆ ಜಿಲ್ಲೆಯ ಮೂವರು ತಹಶೀಲ್ದಾರ್ ಗಳ ವರ್ಗಾವಣೆ (officer transfer) ಮಾಡಲಾಗಿದೆ. ಶಿವಮೊಗ್ಗ, ಭದ್ರಾವತಿ ಮತ್ತು … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಧಗಧಗ ಹೊತ್ತಿ ಉರಿದ ಕಾರು

Bhadravathi-Bypass-Road-Car

SHIVAMOGGA LIVE NEWS | 30 JANUARY 2023 BHADRAVATHI | ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ (Sudden Fire) ಕಾಣಿಸಿಕೊಂಡಿದ್ದು, ಕೆಲವೆ ಕ್ಷಣದಲ್ಲಿ ಮುಂಭಾಗ ಸಂಪೂರ್ಣ ಸುಟ್ಟು ಹೋಗಿದೆ. ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಉಜ್ಜನಿಪುರದ ಎಂಪಿಎಂ ಬಡಾವಣೆ ಸಮೀಪ ಬೈಪಾಸ್ ರಸ್ತೆಯಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರು ಹಳೇ ನಗರ ನಿವಾಸಿ ಶ್ರೀಕಾಂತ್ ಎಂಬುವವರಿಗೆ ಸೇರಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಇದನ್ನೂ ಓದಿ – ಶಿವಮೊಗ್ಗ – … Read more

ಶಿವಮೊಗ್ಗ – ತುಮಕೂರು ಹೆದ್ದಾರಿ ಕಾಮಗಾರಿಯ ಗುಂಡಿಯಲ್ಲಿ ಮೃತದೇಹ, ಕಾರೇಹಳ್ಳಿಯಲ್ಲಿ ಟೈರ್ ಗೆ ಬೆಂಕಿ, ಆಕ್ರೋಶ

Protest-by-villagers-at-Karehalli-in-Bhadravathi

SHIVAMOGGA LIVE NEWS | 30 JANUARY 2023 BHADRAVATHI | ರಾಷ್ಟ್ರೀಯ ಹೆದ್ದಾರಿ (Highway Road) ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯುವಕ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿನ್ನೆಲೆ ದಿಢೀರ್ ರಸ್ತೆ ತಡೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾವತಿ ತಾಲೂಕು ಕಾರೇಹಳ್ಳಿಯಲ್ಲಿ (Karehalli) ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಆಂಥೋಣಿ (30) ಎಂಬಾತ ಗುಂಡಿಗೆ ಬಿದ್ದು ಮೃತಪಟ್ಟಿರುವ … Read more

VISL | ಭದ್ರಾವತಿಯಲ್ಲಿ ಸರ್ವ ಪಕ್ಷಗಳು, ಸಂಘಟನೆಗಳ ಸಭೆ, ಏನೆಲ್ಲ ಚರ್ಚೆಯಾಯ್ತು?

VISL-issue-All-Party-Meeting

SHIVAMOGGA LIVE NEWS | 26 JANUARY 2023 BHADRAVATHI | ವಿಐಎಸ್ಎಲ್ ಉಳಿವಾಗಿ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಭದ್ರಾವತಿಯಲ್ಲಿ ಸರ್ವ ಪಕ್ಷ ಮತ್ತು ಸಂಘಟನೆಗಳ ಸಭೆ (all party meeting) ನಡೆಸಲಾಯಿತು. ನ್ಯೂ ಟೌನ್ ಶ್ರೀ ಶಾರದಾ ಮಂದಿರದಲ್ಲಿ ನಡೆದ ಸಭೆಯಲ್ಲಿ (all party meeting) ವಿವಿಧ ಪಕ್ಷಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಹೋರಾಟದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೆ ಪಕ್ಷಾತೀತ ಹೋರಾಟ … Read more

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಭದ್ರಾ ಜಲಾಶಯದಿಂದ ನೀರು, ಯಾವಾಗ? ಎಷ್ಟು ನೀರು ಹರಿಸಲಾಗುತ್ತದೆ?

Bhadra-Dam-General-Images

SHIVAMOGGA LIVE NEWS | 25 JANUARY 2023 BHADRAVATHI | ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರ ವಾರ್ಷಿಕ ಕಾರ್ಣಿಕೋತ್ಸವದ ಹಿನ್ನೆಲೆ ಭದ್ರಾ ಜಲಾಶಯದಿಂದ (Bhadra Dam) 5500 ಕ್ಯೂಸೆಕ್ ನೀರು ಹರಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ JOB FAIR, ಇನ್ಫೋಸಿಸ್, ಬೆಂಗಳೂರು ಏರ್ ಪೋರ್ಟ್ ಸೇರಿ 40ಕ್ಕೂ ಹೆಚ್ಚು ಕಂಪನಿ ಭಾಗಿ, ನೋಂದಣಿ ಶುರು ಜ.27ರಿಂದ ಫೆ.6ರ ವರೆಗೆ ಜಲಾಶಯದಿಂದ (Bhadra Dam) ಪ್ರತಿದಿನ 500 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತದೆ. … Read more

ಭದ್ರಾವತಿಯಲ್ಲಿ ಹೆಂಡತಿ ಮೇಲೆ ಆ್ಯಸಿಡ್ ಸುರಿದ ಗಂಡ

Bhadravathi-Rural-Police-Station

SHIVAMOGGA LIVE NEWS | 21 JANUARY 2023 BHADRAVATHI | ಕ್ಷುಲಕ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳವಾಡಿ, ಆಕೆಯ ಮೇಲೆ ಗಂಡನೆ ಆ್ಯಸಿಡ್ (acid) ಸುರಿದಿದ್ದಾನೆ. ಗಾಯಗೊಂಡಿರುವ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ರವಿ ಎಂಬಾತ ತನ್ನ ಪತ್ನಿ ಮೇಲೆ ಆ್ಯಸಿಡ್ (acid) ದಾಳಿ ಮಾಡಿದ್ದಾನೆ. ಸಂತ್ರಸ್ತೆಯ ಮುಖದ ಎಡ ಭಾಗ, ಹೊಟ್ಟೆ, ಬೆನ್ನು ಸೇರಿದಂತೆ ಹಲವು ಕಡೆ ಸುಟ್ಟ ಗಾಯವಾಗಿದೆ. ಏನಿದು ಪ್ರಕರಣ? … Read more

ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಮುಂದೆ ಕಾರ್ಮಿಕರ ಪ್ರತಿಭಟನೆ, ಆದೇಶ ಹಿಂಪಡೆಯುವಂತೆ ಘೋಷಣೆ

VISL-Workers-Protest-in-Bhadravathi

SHIVAMOGGA LIVE NEWS | 19 JANUARY 2023 BHADRAVATHI | ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು (ವಿಐಎಸ್ಎಲ್) ಮುಚ್ಚದಂತೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಾರ್ಖಾನೆ (VISL) ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಮಿಕರು, ಸರ್ಕಾರದ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಮಾತನಾಡಿದ ಎಐಟಿಯುಸಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ ಅವರು, ವಿಐಎಸ್ಎಲ್ (VISL) ಕಾರ್ಖಾನೆಯನ್ನು ಮುಚ್ಚುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ವಿರುದ್ಧ ಸಿಐಟಿಯು ಮತ್ತು … Read more

ಲಾಡ್ಜ್ ನಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ, ಜೊತೆಗೆ ಬಂದಿದ್ದ ಮಹಿಳೆಯಿಂದ ಕೃತ್ಯ ಶಂಕೆ

Police-Jeep-in-Shimoga-city

SHIVAMOGGA LIVE NEWS | 13 JANUARY 2023 BHADRAVATHI : ನಗರದ ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವ್ಯಕ್ತಿ ಜೊತೆಗೆ ಲಾಡ್ಜ್ ಗೆ ಬಂದಿದ್ದ ಮಹಿಳೆಯೆ (lady) ಈ ಕೃತ್ಯ ಎಸಗಿರುವ ಶಂಕೆ ಇದೆ. ಮೃತನನ್ನು ಹಾಸನ ಮೂಲದ ಪರ್ವೇಜ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ. ಮಹಿಳೆಯೊಬ್ಬಳ (lady) ಜೊತೆಗೆ ಬಿ.ಹೆಚ್.ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಕೊಠಡಿಗೆ ಬಾಡಿಗೆಗೆ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಆಕೆಯೆ ಈತನ ಹತ್ಯೆ ಮಾಡಿರುವ … Read more