ಇಂದಿರಾ ಕ್ಯಾಂಟೀನ್ನಲ್ಲಿ ಸಾವಿರ ಜನಕ್ಕೆ ಅಡುಗೆಯಾಗುತ್ತೆ, ಬೆರಳೆಣಿಕೆ ಮಂದಿಗೆ ಊಟ ಸಿಗ್ತಿದೆ, ಭದ್ರಾವತಿಯಲ್ಲಿ ಆಕ್ರೋಶ

150521 Bhadravathi Indira Canteen Food issue 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 15 MAY 2021 ಇಂದಿರಾ ಕ್ಯಾಂಟೀನ್ ಮೂಲಕ ನಿರ್ಗತಿಕರಿಗೆ ಉಚಿತವಾಗಿ ತಿಂಡಿ, ಊಟ ವಿತರಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಭದ್ರಾವತಿಯ ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಘಟಕ ಆರೋಪಿಸಿದೆ. ಭದ್ರಾವತಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್‍ಗೆ ದಿಢೀರ್ ಭೇಟಿ ನೀಡಿದ ಬಿಜೆಪಿ ಕಾರ್ಯಕರ್ತರು, ಆಹಾರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿದಿನ ಸಾವಿರ ಮಂದಿಗೆ ಅಡುಗೆ … Read more

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮೊದಲ ದಿನ ಹೇಗಿತ್ತು ರಿಸ್ಪಾನ್ಸ್?

110521 Eighteen Plus Corona Vaccine in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 MAY 2021 ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತಿನಿಂದ ಕರೋನ ಲಸಿಕೆ ನೀಡಲಾಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ವಿತರಣೆ ಮಾಡಲಾಯಿತು. 18 ವರ್ಷದಿಂದ 45 ವರ್ಷದವರ ವರೆಗೆ ಲಸಿಕೆ ನೀಡಲಾಯಿತು. ಬೆಳಗ್ಗೆಯಿಂದ ಕ್ಯೂನಲ್ಲಿ ನಿಂತಿದ್ದು, ಲಸಿಕೆ ಪಡೆಯಲಾಗಿದೆ. ಬೆಳಗ್ಗೆ ಸಣ್ಣದಾಗಿದ್ದ ಕ್ಯೂ ಮಧ್ಯಾಹ್ನದ ವೇಳೆಗೆ ದೊಡ್ಡದಾಯಿತು. ಮೆಗ್ಗಾನ್ ಆಸ್ಪತ್ರೆ ಕಟ್ಟಡದಿಂದ ಹೊರಗಿನವರೆಗೆ ಜನರು ಕ್ಯೂನಲ್ಲಿ ನಿಂತಿದ್ದು ಲಸಿಕೆ ಪಡೆದರು. ಭದ್ರಾವತಿ ವರದಿ … Read more

ಇನ್ನೊಂದು ವಾರದಲ್ಲಿ ಭದ್ರಾವತಿಯಲ್ಲಿ ಆಕ್ಸಿಜನ್ ಉತ್ಪಾದನೆ ಶುರು, ವಿಐಎಸ್ಎಲ್​​ಗೆ ಬರ್ತಾರೆ ಸಚಿವರು

Minister KS Eshwarappa

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021 ಭದ್ರಾವತಿ ವಿಐಎಸ್‍ಎಲ್ ಅಧೀನದಲ್ಲಿರುವ ಆಕ್ಸಿಜನ್ ತಯಾರಿಕಾ ಘಟಕವನ್ನು ಸಕ್ರಿಯಗೊಳಿಸಲು ನಿರ್ಧರಿಸಲಾಗಿದ್ದು, ವಾರದೊಳಗಾಗಿ ಉತ್ಪಾದನೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಐಎಸ್‍ಎಲ್ ಅವರೊಂದಿಗೆ ಎಂಎಸ್‍ಪಿಎಲ್ ಸಂಸ್ಥೆ ಆಕ್ಸಿಜನ್ ಉತ್ಪಾದಿಸಿಕೊಡುವ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಅದರ ಅವಧಿ ಮುಗಿದಿದೆ. ಜಿಲ್ಲಾಡಳಿತದ ಕೋರಿಕೆಯಂತೆ ಇದೀಗ ಆಕ್ಸಿಜನ್ ಉತ್ಪಾದಿಸಲು ಎಂಎಸ್‍ಪಿಎಲ್ ಮುಂದೆ ಬಂದಿದೆ. ಪ್ರತಿದಿನ 320 ಕೆಎಲ್‍ಡಿ ಆಕ್ಸಿಜನ್ ಉತ್ಪಾದಿಸುವ … Read more

ಭದ್ರಾವತಿ ಶಾಸಕರ ಮನೆ ಮುಂದೆ ಕಾರಿನಲ್ಲಿ ಬಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 MAY 2021 ಭದ್ರಾವತಿ ಶಾಸಕ ಸಂಗಮೇಶ್ವರ್ ಮನೆ ಮುಂದೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ ಅವರ ಮೇಲೆ ಹಲ್ಲೆ ನಡೆದಿದೆ. ಮಾರಣಾಂತಿಕ ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ. ಹಲ್ಲೆಗೆ ಕಾರಣವೇನು? ಕೌಟುಂಬಿಕ ವಿಚಾರ ಸಂಬಂಧ ಶಾಸಕ ಸಂಗಮೇಶ್ವರ್ ಅವರ ಗೃಹ ಕಚೇರಿಯಲ್ಲಿ ಪಂಚಾಯಿತಿ ನಡೆಸಲಾಗಿತ್ತು. ಇದನ್ನು ಮುಗಿಸಿ ಹೊರ ಬರುತ್ತಿದ್ದಂತೆ ಕಾರಿನಲ್ಲಿ ಬಂದ ಕಿರಣ್‍ ಎಂಬಾತ ಚಂದ್ರೇಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. … Read more

ಭದ್ರಾವತಿ ವೀರಾಪುರದಲ್ಲಿ ಧಗಧಗ ಹೊತ್ತಿ ಉರಿದ ಲಾರಿ ಲೋಡ್, ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

020521 Bhadravathi Veerapura Truck fire 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 MAY 2021 ಟೈರ್ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಧಗಧಗ ಹೊತ್ತಿ ಉರಿದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಲಾರಿ ಸಂಪೂರ್ಣ ಸುಟ್ಟು ಕರಕಲಾಗುವುದು ತಪ್ಪಿದೆ. ಭದ್ರಾವತಿ ತಾಲೂಕು ವೀರಾಪುರದಲ್ಲಿ ಘಟನೆ ಸಂಭವಿಸಿದೆ. ಮದ್ಯಾಹ್ನ ವೀರಾಪುರಕ್ಕೆ ಬಂದ ಲಾರಿಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ್ದು ಹೇಗೆ? ಮುಖ್ಯ ರಸ್ತೆಯಿಂದ ಆಲೆಮನೆಯೊಂದರ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕರೆಂಟ್ ಕಂಬದ ವೈರ್ ತಗುಲಿ, ಟಾರ್ಪಲ್‍ಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ … Read more

ಭದ್ರಾವತಿ ನಗರಸಭೆ ಕಾಂಗ್ರೆಸ್ ಕೈಗೆ, ಜೆಡಿಎಸ್, ಬಿಜೆಪಿ ಗೆದ್ದಿದ್ದೆಷ್ಟು?

Bhadravathi Nagarasabhe File Image 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 30 APRIL 2021 ತೀವ್ರ ಪ್ರತಿಷ್ಠೆ ಮತ್ತು ಕುತೂಹಲ ಕೆರಳಿಸಿದ್ದ ಭದ್ರಾವತಿ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಜೈತ್ರಯಾತ್ರೆ ಮುಂದುವರೆದಿದೆ. ನಗರಸಭೆಯ 35 ವಾರ್ಡ್​​ಗಳ ಪೈಕಿ 34ರಲ್ಲಿ ಚುನಾವಣೆ ನಡೆದಿತ್ತು. ಈ ಪೈಕಿ 18 ವಾರ್ಡ್​ನಲ್ಲಿ ಕಾಂಗ್ರೆಸ್, 11ರಲ್ಲಿ ಜೆಡಿಎಸ್, 4ರಲ್ಲಿ ಬಿಜೆಪಿ, ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200 ಶಿವಮೊಗ್ಗ … Read more

ಪಾಸ್ ಕೊಟ್ಟು ಸುಮ್ಮನಾಗ್ತಾರೆ ಅಂತಾ ತಿಳಿದಿದ್ದವರಿಗೆ ಭದ್ರಾವತಿ ನಗರಸಭೆ ಅಧಿಕಾರಿಗಳಿಂದ ರಾತ್ರಿ ಶಾಕ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 APRIL 2021 ನಗರದ ಕಲ್ಯಾಣ ಮಂಟಪಗಳಿಗೆ ಭದ್ರಾವತಿ ನಗರ ಸಭೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದುವೆ ಸಮಾರಂಭದಲ್ಲಿ ನಿಗದಿಗಿಂತಲೂ ಹೆಚ್ಚು ಜನ ಸೇರಿದ್ದರಿಂದ ದಂಡ ವಿಧಿಸಲಾಗಿದೆ. ನಗರಸಭೆ ಆಯುಕ್ತ ಮನೋಹರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿ ನಗರದ ವಿವಿಧ ಕಲ್ಯಾಣ ಮಂಟಪಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು. ಆರತಕ್ಷತೆ ನಡೆಯುವ ಸಂದರ್ಭ ಕಲ್ಯಾಣ ಮಂಟಪಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿದೆಯೇ, ನಿಗದಿತ ಸಂಖ್ಯೆಯ ಜನರು … Read more

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಹೇಗಿತ್ತು ಮೊದಲ ದಿನದ ವೀಕೆಂಡ್ ಕರ್ಫ್ಯೂ? ತಾಲೂಕುವಾರು ರಿಪೋರ್ಟ್

175578819 1373910869636996 6771968949187943387 n 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021 ವೀಕೆಂಡ್ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುತೇಕ ಜನರು ಮನೆಯಿಂದ ಹೊರಬಾರದೆ ಮೊದಲ ದಿನ ಕರ್ಫ್ಯೂಗೆ ಸ್ಪಂದಿಸಿದ್ದಾರೆ. ಯಾವ್ಯಾವ ತಾಲೂಕಿನಲ್ಲಿ ಹೇಗಿತ್ತು ಕರ್ಫ್ಯೂ? ಶಿವಮೊಗ್ಗ ತಾಲೂಕು ಶಿವಮೊಗ್ಗ ನಗರ ಮತ್ತು ಹೊರ ವಲಯದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಗಸ್ತು ಹೆಚ್ಚಿಸಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದ ಜನರು ಬಳಿಕ ಮನೆ ಸೇರಿದ್ದರು. ನಡುವೆ ಹೊರ ಬರುತ್ತಿದ್ದವರಿಗೆ ಪೊಲೀಸರು … Read more

ವ್ಯಾಪಾರಿಗಳಿಗೆ ನಿರ್ಬಂಧ, ಚನಾವಣಾ ಪ್ರಚಾರಕ್ಕೆ ಗುಂಪು ಗುಂಪು ಜನ, ಭದ್ರಾವತಿ ನಾಗರಿಕರಲ್ಲಿ ಕರೋನ ಭಯ

Bhadravathi Nagarasabhe File Image 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 23 APRIL 2021 ನಿರ್ಬಂಧ ವ್ಯಾಪಾರಿಗಳಿಗೆ ಮಾತ್ರ. ರಾಜಕೀಯ ಪ್ರಚಾರಕ್ಕಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿರುವ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಇದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಈ ನಡುವೆ ವ್ಯಾಪಾರಿಗಳಲ್ಲಿ ಆಕ್ರೋಶವನ್ನು ಹೆಚ್ಚಿಸಿದೆ. ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಿಗದಿಯಾಗಿದೆ. ಕೋವಿಡ್ ನಿರ್ಬಂಧ ಇರುವುದರಿಂದ ಬಹಿರಂಗ ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಗುಂಪು ಗುಂಪಾಗಿ ಮನೆ ಬರ್ತಾರೆ ಮತದಾನದ … Read more

BREAKING NEWS | ಭದ್ರಾವತಿ ನಗರಸಭೆ ಕಾಂಗ್ರೆಸ್ ಅಭ್ಯರ್ಥಿ‌ಗೆ ಹೃದಯಾಘಾತ, ಸಾವು

190421 Bhadravathi Nagarasbhe Candidate Shruthi Manjunath Death1 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 19 ಏಪ್ರಿಲ್ 2021 ಭದ್ರಾವತಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜಪ್ಪ ಲೇಔಟ್ – ಹೊಸ ಸಿದ್ದಾಪುರ ವಾರ್ಡ್‌ನ (ವಾರ್ಡ್ ಸಂಖ್ಯೆ 29) ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇವತ್ತು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಶೃತಿ ಮಂಜುನಾಥ್ ಸಾವಿಗೆ ಜಿಲ್ಲಾ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಜಿಲ್ಲಾಧ್ಯಕ್ಷ … Read more