ಭದ್ರಾವತಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡಿದ್ದ ಕೋಳಿ ಮಂಜ ಅರೆಸ್ಟ್, ಎರಡು ಬೈಕ್ ಸೀಜ್

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 ಸೆಪ್ಟಂಬರ್ 2020 ಭದ್ರಾವತಿಯಲ್ಲಿ ಬೈಕ್‍ ಕಳ್ಳತನ ಮಾಡಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನವಾಗಿತ್ತು. ನಾಲ್ಕೆ ದಿನದಲ್ಲಿ ಅರೆಸ್ಟ್ ಭದ್ರಾವತಿ ಅನ್ವರ್ ಕಾಲೋನಿಯಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಶೆಟ್ಟಿಹಳ್ಳಿ ಗ್ರಾಮದ ವಾಸುಭೋವಿ ಅಲಿಯಾಸ್ ಕೋಳಿ ಮಂಜ (33) ಎಂಬಾತನನ್ನು ಬಂಧಿಸಲಾಗಿದೆ. ಎರಡು ಬೈಕ್ ಸೀಜ್ ಕೋಳಿ ಮಂಜನಿಂದ ಎರಡು ಬೈಕ್‍ಗಳನ್ನು … Read more

ಜೀವಂತ ಹಸುವಿನ ಚರ್ಮ ಸುಲಿಯಲು ಯತ್ನ, ಕಟುಕರಿಂದ ತಪ್ಪಿಸಿಕೊಂಡ ಹಸುವಿಗೆ ಭಜರಂಗದಳದಿಂದ ಚಿಕಿತ್ಸೆ, ದೂರು

310820 Bajarangadal Rescues Cow in Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 31 ಆಗಸ್ಟ್ 2020 ಹತ್ಯೆಕೋರರಿಂದ ತಪ್ಪಿಸಿಕೊಂಡು ಬಂದು ಗಾಯಗೊಂಡಿದ್ದ ಹಸುವಿಗೆ ಭಜರಂಗದಳ ಕಾರ್ಯಕರ್ತರು ಚಿಕಿತ್ಸೆ ನೀಡಿ, ರಕ್ಷಣೆ ಮಾಡಿದ್ದಾರೆ. ಭದ್ರಾವತಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಜೀವಂತ ಹಸುವಿನ ಚರ್ಮ ಸುಲಿಯಲು ಕಟುಕರು ಪ್ರಯತ್ನಿಸಿದ್ದಾರೆ. ಅದರ ಕಾಲಿನ ಭಾಗದಲ್ಲಿ ಚರ್ಮ ಸುಲಿಯಲಾಗಿದೆ. ಬೊಮ್ಮನಕಟ್ಟೆಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಟುಕರಿಂದ ತಪ್ಪಿಸಿಕೊಂಡ ಹಸು ಹುಡ್ಕೊ ಕಾಲೋನಿವರೆಗೂ ಬಂದಿದ್ದು, ಸುಸ್ತಾಗಿ ಕೂಳಿತಿತ್ತು. ಇದನ್ನು ಗಮನಿಸಿದ ಭಜರಂಗದಳ ಕಾರ್ಯಕರ್ತರು, ಚಿಕಿತ್ಸೆ … Read more

ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಭದ್ರಾವತಿಯಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವು

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 28 ಆಗಸ್ಟ್ 2020 ತಾವರೆಘಟ್ಟದ ಸ್ಮಶಾನ ಜಾಗದಲ್ಲಿ ಆಗಿದ್ದ ಒತ್ತುವರಿಯನ್ನು ತಾಲೂಕು ಆಡಳಿತ ಕೊನೆಗೂ ತೆರವು ಮಾಡಿದೆ. ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ತಾವರೆಘಟ್ಟದ ಸರ್ವೇ ನಂ.29ರಲ್ಲಿ ಗೋಮಾಳ ಜಾಗದಲ್ಲಿ ಸ್ಮಶಾನಕ್ಕೆ ಅಂತಾ 1.20ಎಕರೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ತಾಲೂಕು ಆಡಳಿತ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಶಾಸಕ ಸಂಗಮೇ‍ಶ್ವರ ಮತ್ತು … Read more

ಭದ್ರಾವತಿ VISLಗೆ ಸರ್ಕಾರವೇ ಬಂಡಾವಳ ಹೂಡಿಕೆ ಮಾಡಲಿ, ಕಾರ್ಮಿಕರ ಆಗ್ರಹ, ಪ್ರತಿಭಟನೆ

260820 VISL Workers Protest 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 26 ಆಗಸ್ಟ್ 2020 ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಸ್.ರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ವಿಐಎಸ್‍ಎಲ್ ಕಾರ್ಮಿಕ ಸಂಘ ಮತ್ತು ಗುತ್ತಿಗೆ ಕಾರ್ಮಿಕ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿ, ಕಾರ್ಖಾನೆಯನ್ನು ಖಾಸಗೀಕರಣ ನೀತಿಯಿಂದ ಹೊರತೆಗೆಯಬೇಕು. ಸರ್ಕಾರವೇ ಅಗತ್ಯವಿರುವ ಬಂಡಾವಳ ಹೂಡಿಕೆ ಮಾಡಬೇಕು ಎಂದು ಮನವಿ ಮಾಡಿದರು. ಗುತ್ತಿಗೆ ಕಾರ್ಮಿಕರಿಗೂ ತುಟ್ಟಿಭತ್ಯೆ ಅನ್ವಯಿಸಿ ವೇತನ ನೀಡಬೇಕು, ಮೂಲ ವೇತನಕ್ಕೆ ಅನುಗುಣವಾಗಿ … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸ್ ದಾಳಿ, ಓಸಿ ದಂಧೆಕೋರರ ಅರೆಸ್ಟ್

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 14 ಆಗಸ್ಟ್ 2020 ಮಟ್ಕಾ ದಂಧೆಕೋರರ ವಿರುದ್ಧ ಜಿಲ್ಲಾ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಶಿವಮೊಗ್ಗದ ದೊಡ್ಡಪೇಟೆ ಮತ್ತು ಭದ್ರಾವತಿಯ ಹಳೆನಗರ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಪ್ರತ್ಯೇಕವಾಗಿ ದಾಳಿಗಳನ್ನು ನಡೆಸಲಾಗಿದೆ. ಕೇಸ್ 1 | ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಶಿವಮೊಗ್ಗದ ಎನ್‍.ಟಿ.ರಸ್ತೆಯಲ್ಲಿ ರಸ್ತೆಯಲ್ಲಿ ಮಟ್ಕಾ ಬರೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಕೆ.ಆರ್.ಪುರಂ ನಿವಾಸಿ ತಬ್ರೆಜ್ ಪಾಷಾ (40) ಎಂಬಾತನನ್ನು ಬಂಧಿಸಲಾಗಿದೆ. … Read more

‘ಎಲ್ಲರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುವುದಾದರೆ ಭದ್ರಾವತಿಯಲ್ಲಿ ಸರ್ಕಾರಿ ಆಸ್ಪತ್ರೆ ಯಾಕೆ ಬೇಕು?’

140820 Bhadravathi Taluk Panchayat Meeting 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 14 ಆಗಸ್ಟ್ 2020 ಎಲ್ಲರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುವುದಾದರೆ ಭದ್ರಾವತಿಯಲ್ಲಿ ಸರ್ಕಾರಿ ಆಸ್ಪತ್ರೆ ಯಾಕೆ ಬೇಕು. ಸರ್ಕಾರ ಇಷ್ಟೊಂದು ಹಣವನ್ನೇಕೆ ಖರ್ಚು ಮಾಡಬೇಕು. ಭದ್ರಾವತಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೀಗಂತ ಸದಸ್ಯ ಕುಮುರಿ ಧರ್ಮೇಗೌಡ ಪ್ರಶ್ನೆ ಮಾಡಿದ್ದಾರೆ. ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಿದ್ದರು ಚಿಕಿತ್ಸೆಗಾಗಿ ಗರ್ಭಿಣಿಯರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಧರ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಇತರೆ ಸದಸ್ಯರು ಧ್ವನಿಗೂಡಿಸಿದರು. ಸಾರ್ವಜನಿಕ … Read more

ಭದ್ರಾವತಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ದಾಳಿ, ನಗರಸಭೆ ಗುಮಾಸ್ತ ಅರೆಸ್ಟ್

Corruption-ACB-Raid-1.jpg

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಆಗಸ್ಟ್ 2020 ಐದು ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಲೆ ನಗರಸಭೆ ಗುಮಾಸ್ತ ಒಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಖಾತೆ ಬದಲಾವಣೆ ವಿಚಾರದಲ್ಲಿ ಇವರು ಲಂಚಕ್ಕೆ ಡಿಮಾಂಡ್ ಮಾಡಿದ್ದರು. ನಗರಸಭೆ ಗುಮಾಸ್ತ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ಲೇಔಟ್‍ ನಿರ್ಮಿಸಲಾಗಿದೆ. ಇಲ್ಲಿ ಸೈಟ್‍ಗೆ ಖಾತೆ ಮಾಡಿ ಕೊಡಲು ಗುಮಾಸ್ತ 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು … Read more

ಭದ್ರಾ ಅಭಯಾರಣ್ಯಕ್ಕೆ ನಟ ದರ್ಶನ್ ಬಳಿಕ ನಟ ವಿಜಯ ರಾಘವೇಂದ್ರ ಭೇಟಿ

100820 Actor Vijay Raghavendra Visits Bhadra Forest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಆಗಸ್ಟ್ 2020 ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಕ ಕನ್ನಡದ ಮತ್ತೊಬ್ಬ ನಟ ಭದ್ರಾ ಅಭಯಾರಣ್ಯಕ್ಕೆ ಭೇಟಿ ನೀಡಿದ್ದಾರೆ. ನಟ ವಿಜಯ ರಾಘವೇಂದ್ರ ಕುಟುಂಬ ಸಹಿತ ಶಿವಮೊಗ್ಗ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ. ಭದ್ರಾ ಅಭಯಾರಣ್ಯದಲ್ಲಿ ಸಫಾರಿ ಭದ್ರಾ ಅಭಯಾರಣ್ಯದಲ್ಲಿ ವಿಜಯ ರಾಘವೇಂದ್ರ ಕುಟುಂಬ ಸಫಾರಿಗೆ ತೆರಳಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಭಿಮಾನಿಗಳ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡರು. ಕುಟುಂಬ ಸಹಿತ ಜೋಗ ಜಲಪಾತಕ್ಕೆ ತೆರಳಿದ್ದ ವಿಜಯ … Read more

ಭದ್ರಾ ಜಲಾಶಯದ ಬಳಿ ಅಭಿಮಾನಿಗಳಿಗೆ ದರ್ಶನ ನೀಡಿದ ದರ್ಶನ್, ನಟ ಚಿಕ್ಕಣ್ಣಗೆ ರಾಖಿ ಕಟ್ಟಿದ ಯುವತಿ

080820 Darshan Chikkanna in Bhadra Dam 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 8 ಆಗಸ್ಟ್ 2020 ನಿನ್ನೆಯಿಂದ ಶಿವಮೊಗ್ಗ ಭದ್ರಾ ಅಭಯಾರಣ್ಯದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ನಟ ದರ್ಶನ್ ಇವತ್ತು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ನಟ ದರ್ಶನ್ ಜೊತೆಗೆ ಇತರೆ ನಟರು ಆಗಮಿಸಿದ್ದು, ಅಭಿಮಾನಿಗಳು ಅವರಿಗೂ ಮುತ್ತಿಗೆ ಹಾಕಿ, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ದರ್ಶನ್ ಕಾಲಿಗೆ ಬಿದ್ದು ಸೆಲ್ಫಿ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಐಬಿಯಿಂದ ಹೊರಬಂದ ನಟ ದರ್ಶನ್, ಫ್ಯಾನ್ಸ್‍ಗಳನ್ನು ಭೇಟಿಯಾದರು. ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ಘೋಷಣೆ … Read more

ಭದ್ರಾ ಜಲಾಶಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ, ಇವತ್ತು ಅಭಯಾರಣ್ಯದಲ್ಲಿ ಸಫಾರಿ

080820 Actor Darshan Visits Bhadra Dam 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಆಗಸ್ಟ್ 2020 ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕೆಲವು ನಟರು ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಭರ್ತಿಯಾಗುತ್ತಿರುವ ಡ್ಯಾಂ ವೀಕ್ಷಿಸಿದ್ದಾರೆ. ಜಲಾಶಯ ವೀಕ್ಷಣೆ, ಸ್ನೇಹಿತರ ಭೇಟಿ ನಟರಾದ ದರ್ಶನ್, ಚಿಕ್ಕಣ್ಣ ಸೇರಿದಂತೆ ಹಲವರು ಭದ್ರಾ ಡ್ಯಾಂಗೆ ಭೇಟಿ ನೀಡಿದ್ದರು. ಕೆಲವು ಹೊತ್ತು ಭದ್ರಾ ಡ್ಯಾಂ ವೀಕ್ಷಿಸಿದ ನಟರ ಟೀಮ್, ಬಳಿಕ ಅರಣ್ಯ ಇಲಾಖೆ ಐಬಿಯಲ್ಲಿ ಉಳಿದುಕೊಂಡಿದ್ದರು. ನಂತರ ಭದ್ರಾವತಿ ಮತ್ತು ಶಿವಮೊಗ್ಗದ ಕೆಲವು ಸ್ನೇಹಿತರ ಭೇಟಿಯಾಗಿದ್ದಾರೆ ಎಂದು … Read more